“ಶ್ರೀ ಬಸವ ಜನ್ಮ ಸ್ಥಳ ಸ್ಮಾರಕ ಐತಿಹಾಸಿಕತೆ”…..

ಶ್ರೀ ಬಸವೇಶ ಎಂಬುವುದೇ ಜಗದ ಬೆಳಕು
ಸೃಷ್ಠಿಕರ್ತನ ಪರಮಾವತಾರಿ ಶ್ರೀಬಸವೇಶ್ವರ
ಭರತ ಪೂಣ್ಯಭೂಮಿಯ ಕರುನಾಡ ಮಡಿಲ
ವಿಜಯಪೂರ ಬಸವನ ಬಾಗೇವಾಡಿಯ ತಂದೆ
ಮಾದರಸ ತಾಯಿ ಮಾದಲಾಂಬಿಕಾ
ಪೂಣ್ಯಗರ್ಭದಿ ಜನ್ಮ ತಾಳಿದ ಶ್ರೀಬಸವೇಶ್ವರ
ಸಮಾನತೆಯ ಜ್ಯೋತಿಯಾಗಿ
ಕೂಡಲ ಸಂಗಮನಾಥ ಸ್ಮರಸಿ
ನುಡಿದಂತೆ ನಡೆದ ನಿಜ ಕಾಯಕ ಶರಣ
ಬಿಜ್ಜಳ ರಾಜನ ಪ್ರಧಾನ ಮಂತ್ರಿಯಾಗಿ
ಸಮಾಜ ಸುಧಾರಣೆಯ ರೂವಾರಿ
ಕಲ್ಯಾಣ ಕ್ರಾಂತಿಯೋಗಿ
ಕುಲದ ಬೇಧವ ಅಳಿಸಿದ ಮಹಾತ್ಮ
ಶ್ರೀಬಸವೇಶ್ವರ
ವಚನ ಸಾಹಿತ್ಯ ಅನುಭವ ಮಂಟಪ
ಸಾಮಾಜಿಕ ಸಮಾತೆಯ
ಮಾನವ ಆತ್ಮದಲಿ ದೇವನ ತೋರಿದವ
ಜಗಜ್ಯೋತಿ ಶ್ರೀಬಸವೇಶ್ವರ ಅಜರಾಮರ
ಮಾನವೀಯತೆಯ ಹೃದಯ ಮಂದಿರದಲಿ
ಭಕ್ತಿ ಮಾರ್ಗದಿ ಮುಕ್ತಿಮಾರ್ಗವ
ತೋರಿದ ಭಕ್ತಿ ಭಂಡಾರಿ ಶ್ರೀಬಸವಣ್ಣ
ಜನಮನ ಬೆಳಗುವ ಶರಣ ಶರಣಿಯರ
ನಂದಾದೀಪಗಳು ನಿತ್ಯ ಸತ್ಯ
ವಚನ ಶಿಲಾ ಮಂಟಪ ಅನುಭವ ಸಾರ
ಲಕ್ಷೋಪ ಲಕ್ಷ ದೀಪಗಳು
ವಿಶ್ವ ಬೆಳಗುವ ರವಿ ಹೊನ್ನ ಕಿರಣಗಳಂತೆ
ಕಾಯಕ ಮೃದುವಚನಗಳೇ ಸ್ವರ್ಗ
ಬಿರು ನುಡಿಗಳೇ ನರಕ
ನಿರಾಕಾರ ಶೂನ್ಯ ಸ್ವರೂಪವೇ ದೇವರು
ಪರ ಧನದ ಆಸೆ ಪರಮ ಪಾಪವು
ಇಂದಿನ ಕ್ಷಣವೇ ನಮ್ಮದು
ಬಾರದು ಬಪ್ಪದು ತಪ್ಪದು
ದಯವು ನಿನ್ನಲ್ಲಿದ್ದರೆ ಅದೇ ಧರ್ಮ
ಬೇಕು ಎನುವನೇ ಬಡವ
ಸಾಕೆನ್ನುವುದೇ ಸಿರಿತನ
ಇದನರಿತವನು ನಿಜ ಸಂತೃಪ್ತ ಆತ್ಮದವನು
ಜಗವ ಬೆಳಗುತ್ತಿರುವ ಶ್ರೀಬಸವಣ್ಣ ಜನ್ಮಸ್ಥಳ
ಸ್ಮಾರಕ ಅಳಿಯದ
ಐತಿಹಾಸಿಕ ಆಚಂದ್ರಾರ್ಕವು
ವಿಶ್ವದೆಲ್ಲೆಡೆ ಶ್ರೀಬಸವ ವಚನ ಜ್ಯೋತಿಗಳು
ಭಕ್ತರ ಅಂತರಾತ್ಮದಿ ಶಿವನ ಪ್ರಕಾಶವು
ಅನವರತ ಬೆಳಗುತ್ತಿದೆ.
-ಶ್ರೀದೇಶಂಸು
ಶ್ರೀ ಸುರೇಶ ಶಂಕ್ರೆಪ್ಪ ಅಂಗಡಿ
ದೇವರ ಹಿಪ್ಪರಗಿ 8618674872