ಕಡ್ಡಾಯವಾಗಿ ಸಿ.ಸಿ ಕ್ಯಾಮೆರಾ ಅಳವಡಿಸಲು ಸಾರ್ವಜನಿಕರಿಗೆ – ಪಿ.ಎಸ್.ಐ ಸುರೇಶ್ ಮಂಟೂರ್ ಸೂಚನೆ.
ಕಲಕೇರಿ ಮೇ.26

ಕಲಕೇರಿ ಪೊಲೀಸ್ ಠಾಣೆಯ ಪಿ.ಎಸ್.ಐ ಹಾಗೂ ಪೊಲೀಸ್ ಸಿಬ್ಬಂದಿ ವತಿಯಿಂದ ಬಜಾರ್ ನಲ್ಲಿರುವ ಎಲ್ಲಾ ಅಂಗಡಿಕಾರರಿಗೆ ಸಿ.ಸಿ ಕ್ಯಾಮೆರಾ ಅಳವಡಿಸಲು ಪೊಲೀಸ್ ಠಾಣೆ ವತಿಯಿಂದ ನೋಟಿಸನ್ನು ಕೊಡಲಾಗಿದೆ ಹಾಗೂ ಶಾಲಾ ಕಾಲೇಜುಗಳಿಗೆ ಆಸ್ಪತ್ರೆಗಳಿಗೆ ಕಡ್ಡಾಯವಾಗಿ ಸಿ.ಸಿ ಕ್ಯಾಮೆರಾವನ್ನು ಅಳವಡಿಸ ಬೇಕು ಎಂದು ಕೆಲವರಿಗೆ ಕಲಕೇರಿಯ ಪೋಲಿಸ್ ಠಾಣೆಯ ವತಿಯಿಂದ ನೋಟಿಸ್ ನ್ನು ಕೊಡಲಾಗಿದೆ. ಕಳ್ಳರ ಹಾವಳಿ ಹೆಚ್ಚಾಗಿದೆ ಆದ ಕಾರಣ ಎಲ್ಲರೂ ಕಡ್ಡಾಯವಾಗಿ ಸಿ.ಸಿ ಕ್ಯಾಮೆರಾಗಳನ್ನು ಅಳವಡಿಸ ಬೇಕು ಎಂದು ಈ ಸಂದರ್ಭದಲ್ಲಿ ಕಲಕೇರಿಯ ಪೊಲೀಸ್ ಠಾಣೆಯ ಪಿ.ಎಸ್.ಐ. ಸುರೇಶ್ ಮಂಟೂರ್ ಇವರು ಎಲ್ಲಾ ಅಂಗಡಿಕಾರರಿಗೆ ಸಿ.ಸಿ ಕ್ಯಾಮೆರಾ ಅಳವಡಿಸ ಬೇಕು ಎಂದು ತಿಳಿಸಿದರು. ಹಾಗೂ ಗ್ರಾಮದ ಎಲ್ಲಾ ಸಾರ್ವಜನಿಕರಿಗೆ ನಿಮ್ಮ ಮನೆಯಲ್ಲಿದ್ದಂತ ಹಣ ಮತ್ತು ಬಂಗಾರದ ಆಭರಣಗಳನ್ನು ಬ್ಯಾಂಕಿನಲ್ಲಿ ಇಡಬೇಕು ಎಂದು ತಿಳಿಸಿದರು. ಎಲ್ಲಾ ಅಂಗಡಿಕಾರರು ಶಾಲಾ ಮತ್ತು ಕಾಲೇಜುಗಳು ಕಡ್ಡಾಯವಾಗಿ ಸಿ.ಸಿ ಕ್ಯಾಮೆರಾ ಅಳವಡಿಸ ಬೇಕು ಎಂದು ಈ ಸಂದರ್ಭದಲ್ಲಿ ತಿಳಿಸಿದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷ.ಮನಗೂಳಿ.ತಾಳಿಕೋಟೆ