ಜನಸ್ನೇಹಿ ಆಡಳಿತಕ್ಕೆ ಉಡುಪಿಯ ಪಿ.ಆರ್ ಗುರುರಾಜ್ ಮಾದರಿ, ರಜೆ ಲೆಕ್ಕಿಸದೆ ಕರ್ತವ್ಯ ನಿರ್ವಹಣೆಗೆ – ರಾಜ್ಯಮಟ್ಟದ ಪ್ರಶಂಸೆ.
ಉಡುಪಿ ಅ.10

ಉಡುಪಿ ತಾಲ್ಲೂಕಿನ ತಹಸೀಲ್ದಾರ್ ಹಾಗೂ ತಾಲ್ಲೂಕು ಕಾರ್ಯನಿರ್ವಾಹಕ ದಂಡಾಧಿಕಾರಿಗಳಾದ ಪಿ.ಆರ್. ಗುರುರಾಜ್ ಅವರು ತಮ್ಮ ವಿಶಿಷ್ಟ ಮತ್ತು ದಕ್ಷ ಆಡಳಿತ ವೈಖರಿಯಿಂದ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಬಡವ-ಶ್ರೀಮಂತ ಎನ್ನದೆ ಯಾವುದೇ ತಾರತಮ್ಯವಿಲ್ಲದೆ ಎಲ್ಲರೊಂದಿಗೂ ಸಾಮರಸ್ಯದ ವರ್ತನೆ ಮತ್ತು ತಮ್ಮ ಸಿಬ್ಬಂದಿಯೊಂದಿಗೆ ಸ್ನೇಹಮಯಿಯಾಗಿ ಕರ್ತವ್ಯ ನಿರ್ವಹಿಸುವ ಇವರ ಶೈಲಿ, ಇಡೀ ಆಡಳಿತ ವ್ಯವಸ್ಥೆಗೆ ಮಾದರಿ ಯಾಗಿದೆ.
ಇಂತಹ ಜನಪರ ಅಧಿಕಾರಿಯನ್ನು ನೀಡಿದ ಜಿಲ್ಲಾಡಳಿತಕ್ಕೆ ಸಾರ್ವಜನಿಕರು ಧನ್ಯವಾದಗಳನ್ನು ಅರ್ಪಿಸಿದ್ದಾರೆ.ತಹಸೀಲ್ದಾರ್ ಹುದ್ದೆಯ ಜವಾಬ್ದಾರಿಗಳು ಮತ್ತು ಗುರುರಾಜ್ ಅವರ ನಿಷ್ಠೆತಹಸೀಲ್ದಾರ್ ಹುದ್ದೆಯು ತಾಲ್ಲೂಕು ಮಟ್ಟದಲ್ಲಿ ಕಂದಾಯ ಮತ್ತು ಸಾಮಾನ್ಯ ಆಡಳಿತದ ಕೇಂದ್ರ ಬಿಂದುವಾಗಿರುತ್ತದೆ. ಪಿ.ಆರ್. ಗುರುರಾಜ್ ಅವರು ತಮ್ಮ ಜವಾಬ್ದಾರಿಗಳನ್ನು ಉತ್ತಮ ಜವಾಬ್ದಾರಿ ಮತ್ತು ನಿಷ್ಠೆಯಿಂದ ನಿಭಾಯಿಸುತ್ತಿದ್ದಾರೆ.
ತಹಸೀಲ್ದಾರ್ (ತಾಲ್ಲೂಕು ದಂಡಾಧಿಕಾರಿ) ಪ್ರಮುಖ ಕರ್ತವ್ಯಗಳು:-
ಕಂದಾಯ ವಿಭಾಗದ ಮುಖ್ಯಸ್ಥ:-
ಭೂಮಿ ಮತ್ತು ಕಂದಾಯ ದಾಖಲೆಗಳ ನಿರ್ವಹಣೆ, ಕಂದಾಯ ವಸೂಲಿ ಮತ್ತು ಭೂ ವಿವಾದಗಳ ಇತ್ಯರ್ಥ. ಕಾರ್ಯನಿರ್ವಾಹಕ ದಂಡಾಧಿಕಾರಿ: ತಾಲ್ಲೂಕಿನ ವ್ಯಾಪ್ತಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಜಿಲ್ಲಾಧಿಕಾರಿಗಳಿಗೆ ನೆರವಾಗುವುದು.
ಸಾರ್ವಜನಿಕ ಸೇವೆಗಳ ವಿತರಣೆ:-
ಸರ್ಕಾರದ ವಿವಿಧ ಯೋಜನೆಗಳಾದ ಜಾತಿ, ಆದಾಯ ಪ್ರಮಾಣಪತ್ರಗಳು, ಪಿಂಚಣಿ ಯೋಜನೆಗಳು ಮತ್ತು ತುರ್ತು ಪರಿಹಾರಗಳನ್ನು ಸಕಾಲದಲ್ಲಿ ಜನರಿಗೆ ತಲುಪಿಸುವುದು.ಗುರುರಾಜ್ ಅವರು ಸಾರ್ವಜನಿಕರ ಕೆಲಸಗಳನ್ನು ವಿಳಂಬವಿಲ್ಲದೆ, ಮುತುವರ್ಜಿ ವಹಿಸಿ ನಿರ್ವಹಿಸುತ್ತಿರುವುದು ಅವರ ಕರ್ತವ್ಯ ಜವಾಬ್ದಾರಿಗೆ ಸಾಕ್ಷಿಯಾಗಿದೆ.
ರಜೆ ಲೆಕ್ಕಿಸದ ಸಮೀಕ್ಷಾ ಕಾರ್ಯಕ್ಕೆ ಮೆಚ್ಚುಗೆ:-
ಇತ್ತೀಚಿಗೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ನಡೆಯುತ್ತಿರುವ ಅತ್ಯಂತ ಮಹತ್ವದ ಯೋಜನೆಯಾದ ರಾಜ್ಯದ ನಾಗರಿಕ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ) ಯನ್ನು ಯಶಸ್ವಿಗೊಳಿಸುವಲ್ಲಿ ಗುರುರಾಜ್ ಅವರು ಮುಂಚೂಣಿಯಲ್ಲಿದ್ದಾರೆ.ಈ ಬೃಹತ್ ಸಮೀಕ್ಷೆಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲು, ಅವರು ಸರಕಾರಿ ರಜಾ ದಿನಗಳನ್ನು ಲೆಕ್ಕಿಸದೆ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ತಡರಾತ್ರಿವರೆಗೂ ತಮ್ಮ ಸಿಬ್ಬಂದಿಗಳ ಜೊತೆ ಸ್ವತಃ ಓಡಾಡಿಕೊಂಡು ಸಮೀಕ್ಷಾ ಕಾರ್ಯವನ್ನು ಮೇಲ್ವಿಚಾರಣೆ ಮಾಡುತ್ತಿರುವುದು, ಇಡೀ ಇಲಾಖೆಯ ಸಿಬ್ಬಂದಿಗೆ ಪ್ರೇರಣೆಯಾಗಿದೆ. ಸರ್ಕಾರದ ಈ ಮಹತ್ವದ ಕೆಲಸವನ್ನು ಚಾಚೂ ತಪ್ಪದೆ ನಿರ್ವಹಿಸುತ್ತಿರುವ ಅವರ ಬದ್ಧತೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ದಕ್ಷತೆ, ಸ್ನೇಹಪರತೆ ಮತ್ತು ಕರ್ತವ್ಯ ನಿಷ್ಠೆಯ ಮೂಲಕ ಪಿ.ಆರ್ ಗುರುರಾಜ್ ಅವರು ಉಡುಪಿ ತಾಲ್ಲೂಕು ಕಚೇರಿಯನ್ನು ನಿಜವಾದ ಅರ್ಥದಲ್ಲಿ ಜನ ಸ್ನೇಹಿ ಕಚೇರಿ ಯನ್ನಾಗಿ ಪರಿವರ್ತಿಸಿದ್ದು, ರಾಜ್ಯದ ಇತರ ಅಧಿಕಾರಿಗಳಿಗೆ ಮಾದರಿ ಯಾಗಿದ್ದಾರೆ.
ವರದಿ:ಆರತಿ.ಗಿಳಿಯಾರು.ಉಡುಪಿ

