‘ಜೈಗದಾ ಕೇಸರಿ’ ನ.7 ಕ್ಕೆ – ರಾಜ್ಯಾದ್ಯಂತ ಬಿಡುಗಡೆ.
ಹೊಸಪೇಟೆ ನ.05

ಬಿ.ಬಿ ಮೂವ್ಹಿ ಕ್ರಿಯೇಶನ್ಸ್ ಅವರ ‘ಜೈ ಗದಾ ಕೇಸರಿ’ ನ.7 ರಂದು ರಾಜ್ಯದಾದ್ಯಂತ ಬಿಡುಗಡೆ ಆಗುತ್ತಿದೆ. ರಾಮ ಮತ್ತು ಹನುಮಂತನ ಕುರಿತಾದ ಸಾಕಷ್ಟು ವಿಷಯಗಳನ್ನು ಚಿತ್ರದಲ್ಲಿ ಹೇಳಲಾಗಿದೆ.
ಆಂಜನೇಯನ ಗದೆಗೆ ಹೆಚ್ಚಿನ ಪ್ರಾಮುಖ್ಯತೆ ಇದರಲ್ಲಿದೆ. ಊರಿನ ದೇವಸ್ಥಾನದಲ್ಲಿರುವ ಪೌರಾಣಿಕ ಗದೆಯ ಮೇಲೆ ಆಕ್ರಮಣ ಮಾಡಲು ದುರುಳರು ಬಂದಾಗ ಅದನ್ನು ರಕ್ಷಣೆ ಮಾಡಲು ಇಬ್ಬರು ಹುಡುಗರು ಮುಂದಾಗುತ್ತಾರೆ.
ಆ ನಂತರ ಯಾವ ರೀತಿ ಬೆಳವಣಿಗೆ ಆಗುತ್ತವೆ ಎಂಬುದೆ ಚಿತ್ರದಲ್ಲಿದೆ. ಚಿತ್ರವನ್ನು ನ.7 ರಂದು ರಾಜ್ಯಾದ್ಯಂತ ಬಿಡುಗಡೆ ಮಾಡುತ್ತಿದ್ದು ಪ್ರೇಕ್ಷಕರು ಚಿತ್ರ ನೋಡಿ ಪ್ರೋತ್ಸಾಹಿಸಬೇಕೆಂದು ನಿರ್ಮಾಪಕ ಬಸವರಾಜು ಹೇಳಿದರು.
ಚಿತ್ರದ ತಾರಾಗಣದಲ್ಲಿ ಈಶ್ವರ ನಾಯಕ, ರಾಜ್ ಚರಣ್ ಬ್ರಹ್ಮಾವರ್ ಮತ್ತು ಜೀವಿತಾ ವಸಿಷ್ಠ ಹಾಗೂ ಕೋಮಲಾ ನಾಯಕಿಯರಾಗಿ ಕಾಣಿಸಿ ಕೊಂಡಿದ್ದಾರೆ. ಉಳಿದಂತೆ ಅವಿನಾಶ್, ಹೊನ್ನವಳ್ಳಿ ಕೃಷ್ಣ, ಧರ್ಮ, ಅರವಿಂದ ರಾವ್, ಜಯರಾಮ್, ಪ್ರಶಾಂತ್ ಸಿದ್ದಿ, ಲಕ್ಷ್ಮಣದಾಸ್, ವರುಣ, ರಮೇಶ್ ಮೊದಲಾದವರಿದ್ದಾರೆ.
ಶ್ಯಾಮ್ ಸಿಂಧನೂರ. ಎಸ್. ನಾಗರಾಜ್ ಛಾಯಾಗ್ರಹಣ, ಕಾರ್ತಿಕ್ ವೆಂಕಟೇಶ್, ಪ್ರಸನ್ನ ಬೋಜಶೆಟ್ಟರ್, ಜಾರ್ಜ್ ಥಾಮಸ್ ಸ್ಯಾಮ್ ಸಂಗೀತ ಸಂಯೋಜಿಸಿದ್ದಾರೆ. ಪೂಜಾ ಸಂಕಲನ, ಸುಬ್ಬುಸೂರಿ, ರಾಮದೇವ್ ಜಾನಿ, ವೈಲೆಂಟ್ ವೇಲು, ಅಲ್ಟಿಮೇಟ್ ಶಿವು ಸಾಹಸ ನಿರ್ದೇಶನ, ಪಿ.ಆರ್.ಓ ಡಾ, ಪ್ರಭು ಗಂಜಿಹಾಳ, ಡಾ, ವೀರೇಶ ಹಂಡಿಗಿ, ಕಲೆ ಗುರು ಯಲ್ಲಾಪೂರ, ನಾಗಮೂರ್ತಿ ಮತ್ತು ಕುಮಾರ್ ಕೋ ಡೈರಕ್ಟರ್, ಯತೀಶಕುಮಾರ್. ವಿ.ಮಂಜು ಹೊಸಪೇಟೆ ಜಂಟಿಯಾಗಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ತಿಪ್ಪೆಸ್ವಾಮಿ (ಗೌಳಿ) ಕಾರ್ಯಕಾರಿ ನಿರ್ಮಾಪಕರು, ಸಹ ನಿರ್ಮಾಪಕರು ಈಶ್ವರ ನಾಯಕ, ಚಿತ್ರಕ್ಕೆ ಕೊಪ್ಪಳ ಮೂಲದ ಉದ್ಯಮಿ ಬಸವರಾಜ್ ಭಜಂತ್ರಿ ಬಂಡವಾಳ ಹೂಡಿದ್ದಾರೆ. ಚಿತ್ರದಲ್ಲಿ ಹಿರಿಯ ಚಿತ್ರ ಕಲಾವಿದರೊಂದಿಗೆ ಕಲ್ಯಾಣ ಕರ್ನಾಟಕದ ಕಲಾವಿದರೂ ಅಭಿನಯಿಸಿದ್ದು ವಿಶೇಷವಾಗಿದೆ.
*****
ಡಾ, ಪ್ರಭು ಗಂಜಿಹಾಳ
ಮೊ:9448775346

