ನಟರಾಜನೊಂದಿಗೆ ಶಾಮೀಲಾದ – ಉಪ ನಿರ್ದೇಶಕಿ ಸಿಂಧು.
ಮಾನ್ವಿ ನ.05

ಸಮಾಜ ಕಲ್ಯಾಣ ಇಲಾಖೆಯ ಪ್ರಭಾರಿ ಅಧಿಕಾರಿ ನಟರಾಜನ ದುರಾಡಳಿತ ಹೆಚ್ಚಾಗಿದ್ದು, ಕಚೇರಿಗೆ ಸರಿಯಾಗಿ ಬರುತ್ತಿಲ್ಲವೆಂದರು ಸಹ ರಾಯಚೂರು ಉಪ ನಿರ್ದೇಶಕಿ ಸಿಂಧು ಮೇಡಂ ಕ್ರಮ ಜರುಗಿಸದೆ ನಟರಾಜನೊಂದಿಗೆ ಶಾಮೀಲಾಗಿದ್ದಾರೆಂದು ದಲಿತ ಮುಖಂಡ ಹೊಳೆಯಪ್ಪ ಉಟಕನೂರು ಗಂಭೀರವಾಗಿ ಆರೋಪಿಸಿದ್ದಾರೆ.
ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ನಟರಾಜ ಕೇಂದ್ರ ಸ್ಥಾನದಲ್ಲಿ ಇರದೆ ನಿತ್ಯ ಮಸ್ಕಿಯಿಂದ ಬರುತ್ತಿದ್ದು, ಸರಕಾರದ ಕಾರು ತಮ್ಮ ಸ್ವಂತಕ್ಕೆ ಬಳಕೆ ಮಾಡಿಕೊಂಡು ನಿಯಮಗಳನ್ನೇ ಗಾಳಿಗೆ ತೂರಿದ್ದು,ಕೂಡಲೇ ಎತ್ತಂಗಡಿ ಮಾಡಬೇಕು ಎಂದು ಒತ್ತಾಯಿಸಿದರು.
ನಟರಾಜನ ಕರ್ಮಕಾಂಡದ ಬಗ್ಗೆ ಹೋರಾಟ ಮಾಡಿದರು ಸಹ ರಾಯಚೂರು ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಸಿಂಧು ಅವರು ಕ್ರಮ ಜರುಗಿಸದೆ ಮೌನ ತಾಳಿರುವುದು ನೋಡಿದರೆ ನಟರಾಜನೊಂದಿಗೆ ಶಾಮೀಲಾಗಿದ್ದಾರೆಂದು ಕಿಡಿಕಾರಿದರು.
ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ

