ಟಿಪ್ಪು ಸುಲ್ತಾನರ ಇತಿಹಾಸವನ್ನು ಅರಿಯಬೇಕು ಎಂದ – ಮಹೆಬೂಬ್ ಖುರೇಷಿ.
ಮಾನ್ವಿ ನ.11

ಪಟ್ಟಣದಲ್ಲಿ ಟಿಪ್ಪು ಜಯಂತಿಯನ್ನು ಆಚರಿಸುವ ಮೂಲಕ ಟಿಪ್ಪು ಸುಲ್ತಾನ್ ಸಂಘದ ಅಧ್ಯಕ್ಷ ಮಹೆಬೂಬ್ ಖುರೇಷಿ ನೇತೃತ್ವದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು.
ಮಾನ್ವಿ ಪಟ್ಟಣದ ಸಿಮೆಂಟ್ ರೋಡ್ ರಸ್ತೆಯ ಬಳಿರುವ ಟಿಪ್ಪು ಸುಲ್ತಾನ್ ನಾಮಫಲಕಕ್ಕೆ ಗಣ್ಯಾತಿ ಗಣ್ಯರು ಮಾಲಾರ್ಪಣೆ ಮಾಡಿ ಟಿಪ್ಪು ಸುಲ್ತಾನ್ ಬಗ್ಗೆ ಗುಣಗಾನ ಮಾಡಿದರು.
ಟಿಪ್ಪು ಸುಲ್ತಾನ್ ಅವರು ಎಲ್ಲಾ ಜಾತಿಯ ಜನಾಂಗಕ್ಕೆ ಬೇಕಾದ ವ್ಯಕ್ತಿ. ಟಿಪ್ಪು ಸುಲ್ತಾನ್ ಅವರು ತಮ್ಮ ಅವಧಿಯಲ್ಲಿ ಜಾತಿ ಎನ್ನದೆ ಸರ್ವರಿಗೂ ಸಮಾಜ ಸೇವೆ ಮಾಡಿದ ಇತಿಹಾಸ ಇದೆ.ಹೀಗಾಗಿ ಅವರ ವಿಚಾರ ತಿಳಿದುಕೊಳ್ಳಬೇಕು ಎಂದು ಟಿಪ್ಪು ಸುಲ್ತಾನ್ ಸಂಘದ ಅಧ್ಯಕ್ಷ ಮಹೆಬೂಬ್ ಖುರೇಷಿ ಮಾಧ್ಯಮಕ್ಕೆ ತಿಳಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ

