ಇಂದಿನಿಂದ ತಾವರಾಖೇಡ ದಿಂದ ಮುಗಳಕೋಡ ವರೆಗೆ – ನೂತನ ಬಸ್ ಪ್ರಾರಂಭ.
ತಾವರಖೇಡ ಆ.17



ದಿನಾಂಕ 17 ಆಗಸ್ಟ್ 2026 ರಂದು ಬೆಳಿಗ್ಗೆ 6 ಗಂಟೆಗೆ ತಾವರಾಖೇಡದಲ್ಲಿ ವೇದಮೂರ್ತಿ ಮಹಾಂತಯ್ಯ ಹಿರೇಮಠ್ ಬಸ್ಸಿಗೆ ಪೂಜೆ ಸಲ್ಲಿಸಿ ಚಾಲಕ ಆಸ್ಪಕ್ ಮುಲ್ಲಾ ನಿರ್ವಾಹಕ ಪಿ.ಜಿ ಹಿರೇಕುರಬರ ಇವರಿಗೆ ಶಾಲು ಹೊಂದಿಸಿ ಹೂ ಮಾಲೆ ಹಾಕಿ ಸಿಹಿ ತಿನಿಸಿದರು.
ತಾವರಖೇಡ ಹಿರಿಯರಾದ ಸಿದ್ದು.ಅಪಜಲಪುರ್, ಸುರೇಶ್ ಪೂಜಾರಿ, ಶರಣಪ್ಪ ನಾಟಿಕರ್, ಶಿವುಗೌಡ ಬಗಲಿ, ಅಣ್ಣರಾಯ ಬಗಲಿ, ಶೇಖನಗೌಡ ಪಾಟೀಲ್, ಮಲ್ಲುಗೌಡ ಬೊಗೊಂಡಿ, ಮಲ್ಲನಗೌಡ ಬಿರಾದಾರ್, ಅಣ್ಣಾರಾಯ ಬಿರಾದರ, ರಾವುತ ಜಮಾದಾರ್, ರೇವಣಸಿದ್ದಗೌಡ ಬಿರಾದಾರ್, ಮಲ್ಲುಗೌಡ ಬಗಲಿ, ಈರಣ್ಣ ಬಿರಾದರ್, ಕಡಣಿ ಗ್ರಾಮದ ಸುಧಾಕರ್ ಜೇರಟಗಿ, ಷಣ್ಮುಖಪ್ಪ ಪತ್ತಾರ್, ಮುಗಳಕೋಡಕ್ಕೆ ಪ್ರಯಾಣ ಬೆಳೆಸಿದರು. ಯಲ್ಲಾಲಿಂಗ ಮಹಾರಾಜರು ಮಿರಗಿ ಗ್ರಾಮದ ತಂದೆ ಶಿವಪ್ಪ ತಾಯಿ ಕಾಶಿಬಾಯಿ ದಂಪತಿಗಳ ಮಗನಾಗಿ ಜನಿಸಿದರು. ಬಾಲ್ಯದಿಂದಲೂ ಕುರಿ ಕಾಯುತ್ತ ಕುಸ್ತಿ ಪೈಲ್ವಾನರಾಗಿದ್ದರು ಮಿರಗಿ ಗ್ರಾಮದ ಸುತ್ತಮುತ್ತಲಿನ ಗ್ರಾಮಗಳಾದ ಕಡಣಿ, ತಾವರೆಖೇಡ, ಬಾಸಗಿ, ಕರಜಗಿ ಗ್ರಾಮಗಳಲ್ಲಿ ಕುಸ್ತಿ ಆಡಿ ಯಲ್ಲಾಲಿಂಗ ಪೈಲ್ವಾನ್ ಎಂಬ ಹೆಸರು ಮಾಡಿದ್ದರು.
ತಂದೆ ತಾಯಿಯ ಅಭಿಪ್ರಾಯದಂತೆ ಶಿವಬಾಯಿಯನ್ನು ಮದುವೆಯಾದರು. ಯಲ್ಲಾಲಿಂಗನ ಮಡದಿ ಹೆರಿಗೆ ಸಮಯದಲ್ಲಿ ಹೆರಿಗೆಯಾಗದೆ ಮೃತ ಪಟ್ಟಳು ಯಲ್ಲಾಲಿಂಗ ಕುಸ್ತಿ ಆಡಲು ಬಾಸಗಿ ಗ್ರಾಮದಲ್ಲಿದ್ದು ಕುಸ್ತಿಯಲ್ಲಿ ಗೆದ್ದು ಸಂಭ್ರಮಿಸುತ್ತಿದ್ದಾಗ ಮಡದಿ ತೀರಿಕೊಂಡ ದುಃಖದ ವಿಷಯ ಕೇಳಿ ಸ್ಮಶಾನಕ್ಕೆ ಬಂದು ಮಡದಿಯನ್ನು ಕಿಚ್ಚು ಕೊಟ್ಟು ನಿಂತಿರುವ ಸಮಯದಲ್ಲಿ ಹೊಟ್ಟೆಯಲ್ಲಿರುವ ಮಗು ಸಿಡಿದು ಯಲ್ಲಾಲಿಂಗರ ಪಾದದ ಹತ್ತಿರ ಬಿದ್ದಾಗ ಮಗುವನ್ನು ತಾಯಿಯ ಕಿಚ್ಚಿನಲ್ಲಿ ಹಾಕಿ ಸಂಸಾರ ತ್ಯಜಿಸಿ ಸ್ಮಶಾನದಿಂದ ಮನೆಗೆ ಹಿಂತಿರುಗದೆ ಜೀವನ ನಶ್ವರ ಎಂದು ತಿಳಿದು ಸಂಚರಿಸುತ್ತಾ ಲಚ್ಯಾಣಕ್ಕೆ ಬಂದು ಶ್ರೀ ಸಿದ್ಧಲಿಂಗರ ಸೇವೆ ಮಾಡುತ್ತಾ ಪ್ರೀತಿಯ ಶಿಷ್ಯನಾದರು.
ಶ್ರೀ ಸಿದ್ದಲಿಂಗ ಮಹಾರಾಜರು ಯಲ್ಲಾಲಿಂಗರನ್ನು ಕರೆದು ನೀನು ನನ್ನ ಸೇವೆ ಮಾಡಿರುವುದು ಸಾಕು ಇಂದು ರಾತ್ರಿ ಹೊರಟು ಎಲ್ಲಿ ಬೆಳಗಾಗುವುದು ಅಲ್ಲಿ ನೀನು ನೆಲೆಸು ನೀನು ನೆಲೆಸಿದ ನೆಲ ಭೂ ಕೈಲಾಸ ವಾಗುವುದು ಅಲ್ಲಿಂದ ನಿನ್ನ ಪವಾಡಗಳು ಪ್ರಾರಂಭಿಸು ಪ್ರತಿ ನಿತ್ಯ ಜೋಳಿಗೆ ಹಾಕಿ ಭಿಕ್ಷ ಕಾಯಕ ಮಾಡಿ ಭಕ್ತರಿಗೆ ಅನ್ನದಾಸೋಹ ಮಾಡು “ಯಲ್ಲಾಲಿಂಗರ ಜೊಳಿಗೆ ದೇಶದ ತುಂಬಾ ಹೋಳಿಗೆ” ಎಂಬ ಮಾತು ಶಾಶ್ವತವಾಗಲಿ ಎಂದು ಆಶೀರ್ವದಿಸಿದ್ದರು.
ಶ್ರೀ ಸಿದ್ದಲಿಂಗ ಮಹಾರಾಜರ ಮಾತಿನಂತೆ ಯಲ್ಲಾಲಿಂಗ ಮಹಾರಾಜರು ಅನೇಕ ಪವಾಡಗಳನ್ನು ಮಾಡಿ ನೂರಾರು ಮಠಗಳನ್ನು ಕಟ್ಟಿ ನಿರಂತರ ದಾಸೋಹ ನಡೆಯುತ್ತಿದ್ದು ಭಕ್ತರ ಬೇಡಿಕೆಗಳನ್ನು ಈಡೇರಿಸಿದ ಭಕ್ತರ ಪಾಲಿನ ಕಾಮಧೇನು ಎಂದು ಭಕ್ತರು ನಂಬಿಕೆಯಿಂದ ಮುಗಳಕೋಡಕ್ಕೆ ಶ್ರೀಯಲ್ಲಾಲಿಂಗ ಮಹಾರಾಜರ ದರ್ಶನಕ್ಕೆ ತೆರಳುವ ಭಕ್ತರ ಸಂಖ್ಯೆ ಹೆಚ್ಚಾಗಿರುವುದರಿಂದ ಭಕ್ತರಿಗೆ ಹೋಗಲು ಅನುಕೂಲ ಮಾಡುವ ನಿಟ್ಟಿನಲ್ಲಿ.
ಗ್ರಾಮ ಪಂಚಾಯಿತಿಯ ಅಧ್ಯಕ್ಷ ಬಸಲಿಂಗಪ್ಪ ಕತ್ತಿ, ಸದಸ್ಯ ಸುರೇಶ್ ಪೂಜಾರಿ, ಶರಣಪ್ಪ ನಾಟಿಕರ್ ಸಿಂದಗಿಯ ಜನಪ್ರಿಯ ಶಾಸಕರಾದ ಅಶೋಕ್ ಮನಗೂಳಿ ಅವರಿಗೆ ಭೇಟಿಯಾಗಿ ಮಾತನಾಡಿ ಮುಗಳಖೋಡಕ್ಕೆ ಹೋಗಲು ತಾವರಖೇಡ ದಿಂದ ಬಸ್ಸಿನ ಸೌಕರ್ಯ ಒದಗಿಸಬೇಕೆಂದು ಕೇಳಿದಾಗ ಕೂಡಲೇ ಸಿಂದಗಿ ಘಟಕದ ವ್ಯವಸ್ಥಾಪಕ ರೊಂದಿಗೆ ಮಾತನಾಡಿ ತಾವರಖೇಡ ಕಡಣಿ ಮುಗಳಖೋಡ ವಸತಿ ಬಸ್ಸನ್ನು ಮಾಡಿರುವ ನಮ್ಮ ಹೆಮ್ಮೆಯ ಶಾಸಕ ಅಶೋಕ್ ಮನಗೂಳಿ ಅವರಿಗೆ ತಾವರಕೇಡ ಕಡಣಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರಿಂದ ಧನ್ಯವಾದಗಳು ಅರ್ಪಿಸುತ್ತೇನೆ ಎಂದು ರೇವಣಸಿದ್ಧ ಅಪಜಲಪುರ್ ಹೇಳಿದರು.
ತಾವರಖೇಡ ದಿಂದ ಬೆಳಗ್ಗೆ 5:45 ಕ್ಕೆ ಬಸ್ ಹೊರಡುವುದು 9:00 ಗೆ ವಿಜಯಪುರ ತಲುಪುವುದು 12.30 ಕ್ಕೆ ಮುಗಳಖೋಡ ತಲುಪುವುದು. ಮರಳಿ ಮಧ್ಯಾಹ್ನ 1:30 ಕ್ಕೆ ಮುಗಳಖೋಡ ದಿಂದ ಬಿಡುವುದು. 5 ಗಂಟೆಗೆ ವಿಜಯಪುರ ತಲುಪುವುದು. ರಾತ್ರಿ 8.00 ಕ್ಕೆ ತಾವರಖೇಡ ವಸತಿ ಮಾಡುವುದು ಎಂದು ಕಂಡಕ್ಟರ್ ಪಿ ಜಿ ಹಿರೇಕುರುಬರ ಹೇಳಿದರು.
ಇದೇ ಸಂದರ್ಭದಲ್ಲಿ ರಮೇಶ್ ಅಪಜಲಪುರ್, ಮಲ್ಲು ಉಡುಪಿ, ಹನುಮಂತರಾಯ ಬಗಲಿ, ಯಲ್ಲಾಲಿಂಗ ಬಿರಾದಾರ್, ತಾವರಖೇಡ ಹಾಗೂ ಕಡಣಿ ಗ್ರಾಮದ ಹಿರಿಯರು, ಯುವಕರು ಇದ್ದರು ಎಂದು ವರದಿಯಾಗಿದೆ.
ವರದಿ:ಗಾಲೀಬಸಾಬ್.ನಾಗಾವಿ.
