ಮನಸ್ಸಿನಲ್ಲಿ ಸದಾ ಸಾತ್ವಿಕ ಚಿಂತನೆ ಅವಶ್ಯಕ – ಪುಷ್ಪಲತಾ ವಿಜಯ್.
ಚಳ್ಳಕೆರೆ ಆ.17



ನಮ್ಮ ಮನಸ್ಸಿನಲ್ಲಿ ಯಾವಾಗಲೂ ಸಾತ್ವಿಕ ಚಿಂತನೆಗಳನ್ನು ಬೆಳೆಸಿ ಕೊಳ್ಳುವುದರಿಂದ ಜೀವನ ಸಕಾರಾತ್ಮಕವಾಗಿರುತ್ತದೆ ಎಂದು ಚಳ್ಳಕೆರೆಯ ತ್ಯಾಗರಾಜ ನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಸದಸ್ಯೆ ಹಾಗೂ ನಿವೃತ್ತ ಶಿಕ್ಷಕಿ ಶ್ರೀಮತಿ ಪುಷ್ಪಲತಾ ವಿಜಯ್ ತಿಳಿಸಿದರು.

ತ್ಯಾಗರಾಜ ನಗರದ ಸದ್ಭಕ್ತರಾದ ಶ್ರೀಮತಿ ನಂಜಮ್ಮ ಕೆಂಚಪ್ಪ ಶಿಕ್ಷಕರ ಸವಿತಾ ನಿವಾಸದಲ್ಲಿ ಆಯೋಜಿಸಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು “ಶ್ರೀಮದ್ ಭಗವದ್ಗೀತೆಯ ಪುರುಷೋತ್ತಮ ಯೋಗದ ಏಳನೇ ಶ್ಲೋಕದ ಪಠಣ-ಅರ್ಥ-ವಿವರಣೆ” ನೀಡುತ್ತ ಮಾತನಾಡಿದರು.

ಸನಾತನವಾದ ಭಗವಂತನ ಅಂಶವು ಸಂಸಾರದಲ್ಲಿ ಜೀವನಾಗಿ ಪ್ರಕೃತಿಯಲ್ಲಿರುವ ಮನಸ್ಸನ್ನು ಮತ್ತು ಪಂಚೇಂದ್ರಿಯಗಳನ್ನು ಸೆಳೆದು ಕೊಳ್ಳುತ್ತದೆ ಎಂದು ತಿಳಿಸಿದರು.

ಸತ್ಸಂಗದಲ್ಲಿ ನಂಜಮ್ಮ ಕೆಂಚಪ್ಪ, ಹೆಚ್ ಲಕ್ಷ್ಮೀದೇವಮ್ಮ, ಪ್ರೇಮಾ, ಸವಿತಾ ತಿಪ್ಪೇರುದ್ರಪ್ಪ, ವನಜಾಕ್ಷಿ ಪಂಚಾಕ್ಷರಿ, ಗೀತಾ ನಾಗರಾಜ್, ಗೀತಾ ಪ್ರಕಾಶ್, ಜ್ಯೋತಿ ನಾಗರಾಜ್, ಗೀತಾ ರವೀಂದ್ರನಾಥ, ಸೌಮ್ಯ ಪ್ರಸಾದ್, ಪ್ರಮೀಳಾ ಜಗದೀಶ್, ತಿಪ್ಪಮ್ಮ, ಸರಸ್ವತಿ, ಎಂ ಲಕ್ಷ್ಮೀದೇವಮ್ಮ, ಶೋಭಾ ರಮೇಶ್, ಯತೀಶ್ ಎಂ ಸಿದ್ದಾಪುರ, ಗೀತಾ ಸುಂದರೇಶ್ ಭಾಗವಹಿಸಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

