‎ಡಾ, ಬಿ.ಆರ್ ಅಂಬೇಡ್ಕರ್ ರವರ ಆದರ್ಶ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿ ಕೊಂಡು ಸಮ ಸಮಾಜವನ್ನು ಕಟ್ಟುವಲ್ಲಿ ಯುವಕರ ಪಾತ್ರ ಬಹು ಮುಖ್ಯ – ಟಿ.ಶಿವಮೂರ್ತಿ ಅಭಿಮತ.

ಚಳ್ಳಕೆರೆ ಏ.17

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ತಳಕು ಹೋಬಳಿಯ ಕೊಡಿಹಳ್ಳಿಯಲ್ಲಿ ನಿನ್ನೆ ಡಾ, ಬಿ.ಆರ್ ಅಂಬೇಡ್ಕರ್ ರವರ 135 ನೇ. ಜಯಂತಿ ಆಚರಣೆ ಮಾಡಲಾಯಿತು.

ಈ ಕಾರ್ಯಕ್ರಮದಲ್ಲಿ ಸಮುದಾಯದ ಎಲ್ಲಾ ಯುವಕರ ಸಮ್ಮುಖದಲ್ಲಿ ಮುಖಂಡರಾದ ಶ್ರೀ ಸಣ್ಣ ನಾಗಯ್ಯ,ದೊಡ್ಡ ಓಬಯ್ಯ ಗ್ರಾಮ ಪಂಚಾಯಿತಿ ಸದಸ್ಯರಾದ ರೇವಣ್ಣ ಇತರೆ ಸಮುದಾಯದ ಮುಖಂಡರು ಅಂಬೇಡ್ಕರ್ ರವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ,ಪುಷ್ಪಾರ್ಚನೆ ಮಾಡಿ ಕೇಕ್ ಕತ್ತರಿಸುವ ಮೂಲಕ ಚಾಲನೆ ನೀಡಿದರು.‎

ನಂತರ ಭಾರತದ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಮಹಾ ನಾಯಕನ ಸಾಧನೆಗಳ ಮತ್ತು ಅವರ ಜೀವನದ ಆದರ್ಶ ಮೌಲ್ಯಗಳನ್ನು ಯುವಕರು ಜೀವನದಲ್ಲಿ ಅಳವಡಿಸಿ ಕೊಂಡು ಉನ್ನತ ಶಿಕ್ಷಣ ಪಡೆಯುವ ಮೂಲಕ ಯುವಕರು ಮಾದರಿ ಸಮಾಜವನ್ನು ನಿರ್ಮಿಸ ಬೇಕು ಎಂದು ಜನರಿಗೆ ತಿಳಿಸಲಾಯಿತು.

ನಂತರ ಸಂಘದ ಅಧ್ಯಕ್ಷರಾದ ಟಿ.ಶಿವಮೂರ್ತಿ ಸಂವಿಧಾನ ಪ್ರತಿಜ್ಞಾ ವಿಧಿಯನ್ನು ಬೋಧಿಸುವ ಮೂಲಕ ಯುವ ಜನತೆಯಲ್ಲಿ ಹಾಗೂ ಗ್ರಾಮಸ್ಥರಲ್ಲಿ ಜಾಗೃತಿಯನ್ನು ಮೂಡಿಸಲಾಯಿತು.‎‎

ನಂತರ ಭಾಗವಹಿಸಿರುವ ಎಲ್ಲರಿಗೂ ಕೇಕ್ ವಿತರಿಸಲಾಯಿತು ನಂತರ ಸಮುದಾಯದ ಯಜಮಾನರು, ಯುವಕರಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಲಘು ಉಪಹಾರ, ಮಜ್ಜಿಗೆ, ಬಾಳೆ ಹಣ್ಣು ವಿತರಿಸಲಾಯಿತು.

ಈ ಸಂದರ್ಭದಲ್ಲಿ‎ ಎಂ.ಏಚ್ ತಿಪ್ಪೇಸ್ವಾಮಿ, ಕೆ.ಇ.ಬಿ ಮಲ್ಲಯ್ಯ, ಹನುಮಂತಪ್ಪ, ಪುಟ್ಟಣ್ಣ, ತಿಪ್ಪೇಸ್ವಾಮಿ, ಓಬಣ್ಣ, ದುರುಗಣ್ಣ, ನಿಂಗಣ್ಣ, ಲಿಂಗರಾಜು.ಡಿ, ಮಲ್ಲಿಕಾರ್ಜುನಯ್ಯ.ಟಿ, ಕುಮಾರ ಸ್ವಾಮಿ. ಟಿ,ವಿನಯ್ ಕುಮಾರ್.ಬಿ.ಎಂ, ಮಂಜುನಾಥ್. ಎಂ.ಟಿ, ರುದ್ರಮುನಿ. ಏಚ್, ಶ್ರೀಧರ್.ಏಚ್, ನಿಂಗರಾಜು.ಟಿ,  ವಿಜಯ್ ಕುಮಾರ್.ಡಿ, ತಿಪ್ಪೇಸ್ವಾಮಿ.ಯು, ರಮೇಶ್.ಎಂ, ಗುರುಮೂರ್ತಿ, ತಿಪ್ಪೇಸ್ವಾಮಿ.ಪಿ.ಎಂ ಚಿದಾನಂದ್,ಮೋಹನ್ .ಡಿ ನಂದೀಶ್. ಓ, ರಾಜು.ಡಿ,ಮಹೇಶ್, ಮನೋಜ್ ಕುಮಾರ್.ಎಂ‎ ಉಪೇಂದ್ರ, ರವೀಶ್, ಮಲ್ಲಿಕಾರ್ಜುನ್.ಜಿ, ಅರುಣ್ ಕುಮಾರ್.ಟಿ, ದಯಾನಂದ.ಟಿ, ತಿಪ್ಪೇಶ್ ,ಮನೋಜ್ ಕುಮಾರ್.ಟಿ, ಜಯಂತ್, ನಾಗೇಶ್, ಮಂಜು, ಕಿರಣ್, ಸ್ವಾಮಿ.ಆರ್, ಕೋಟೆಶ್, ಗೋಪಿನಾಥ್, ಮೈಲಾರಿ, ದುರುಗೇಶ್, ಅಭಿಷೇಕ್, ವಿಜಯ್.ಎಸ್, ಮಾರಣ್ಣ, ಶಿವಪ್ಪ, ಪರಶುರಾಮ್, ಕಣುಮೇಶ್ , ಮಹೇಶ್, ಕೊಲ್ಲಾರಿ, ಜೀವನ್,ಗಣೇಶ್, ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

ಮತ್ತು ಸಮುದಾಯದ ಎಲ್ಲಾ ಮುಖಂಡರು, ಯಜಮಾನರು ಸಮಸ್ತ ಯುವಕ ಯುವತಿಯರು, ಸರ್ವ ಸದಸ್ಯರ ಸಹಕಾರದೊಂದಿಗೆ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿ ಗೊಳಿಸಿದರು ಎಂದು ವರದಿಯಾಗಿದೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button