ಪವಿತ್ರತೆಯ ಸಾಕಾರ ಮೂರುತಿ ಶ್ರೀಮಾತೆ ಶಾರದಾದೇವಿ – ಶ್ರೀಮತಿ ಜಿ.ಯಶೋಧಾ ಪ್ರಕಾಶ್.
ಚಳ್ಳಕೆರೆ ಏ.17

ಶ್ರೀಮದ್ ಭಗವದ್ಗೀತೆಯ ಶ್ಲೋಕಗಳ ಕಲಿಕಾ ತರಗತಿ
ಶ್ರೀಮಾತೆ ಶಾರದಾದೇವಿಯವರು ಸಾಕ್ಷಾತ್ ಪವಿತ್ರತಾ ಸ್ವರೂಪಿಣಿಯಾಗಿ ಅತ್ಯಂತ ಪರಮ ಪರಿಶುದ್ಧ ಸಾರ್ಥಕ ಜೀವನವನ್ನು ನಡೆಸಿದವರು ಎಂದು ಚಳ್ಳಕೆರೆಯ ಶಿವ ನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಮುಖ್ಯಸ್ಥರಾದ ಶ್ರೀಮತಿ ಜಿ.ಯಶೋಧಾ ಪ್ರಕಾಶ್ ತಿಳಿಸಿದರು.

ಶ್ರೀಮತಿ ಜಿ ಯಶೋಧಾ ಪ್ರಕಾಶ್ ಅವರಿಂದ ಶ್ರೀಶಾರದಾದೇವಿ ಜೀವನಗಂಗಾ 📒 ಗ್ರಂಥ ಪಾರಾಯಣ ಕಾರ್ಯಕ್ರಮ.
ಶಿವ ನಗರದ ತಮ್ಮ ಜಿ.ವಿ.ಎಸ್ ನಿವಾಸದಲ್ಲಿ ಆಯೋಜಿಸಿದ್ದ ವಾರದ ಸತ್ಸಂಗ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು “ಶ್ರೀಶಾರದಾದೇವಿ ಜೀವನಗಂಗಾ” ಗ್ರಂಥ ಪಾರಾಯಣ ಮಾಡುತ್ತ ‘ಮುನ್ನಡೆಸುವ ಮಹಾಶಕ್ತಿ’ ಎಂಬ ಅಧ್ಯಾಯವನ್ನು ಓದುತ್ತಾ ಮಾತನಾಡಿದರು.

ಸದ್ಭಕ್ತ ಗಡಣ 💐
ಸತ್ಸಂಗದ ಅಂಗವಾಗಿ ಸದ್ಭಕ್ತರಿಂದ ಸಾಮೂಹಿಕ ಭಜನೆ, ಶ್ರೀಮದ್ ಭಗವದ್ಗೀತೆಯ ಶ್ಲೋಕಗಳ ಕಲಿಕಾ ತರಗತಿ, ಪ್ರಸಾದ ವಿನಿಯೋಗ ನಡೆಯಿತು.
ಸತ್ಸಂಗದಲ್ಲಿ ಶ್ರೀಮತಿ ಶಾಂತಮ್ಮ, ವಿಜಯಲಕ್ಷ್ಮೀ, ರಶ್ಮಿ ರಮೇಶ್, ಸರಸ್ವತಿ, ಶೈಲಜಾ, ಕೃಷ್ಣವೇಣಿ, ಭ್ರಮರಂಬಾ, ಯತೀಶ್ ಎಂ ಸಿದ್ದಾಪುರ, ಮಂಗಳಾ ಭಾಗವಹಿಸಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

