ಸಿದ್ದಾಪುರ ಪಿ.ಟಿ ಗ್ರಾಮದಲ್ಲಿ ಶ್ರೀ ಅಮೋಘಸಿದ್ದೇಶ್ವರ ದೇವಸ್ಥಾನದ ಲೋಕಾರ್ಪಣೆ – ಆಮಂತ್ರಣ ಪತ್ರಿಕೆ ಬಿಡುಗಡೆ.
ಸಿದ್ದಾಪುರ.ಪಿ ಟಿ ಏ.17

ಮುದ್ದೇಬಿಹಾಳ ತಾಲೂಕಿನ ಸುಕ್ಷೇತ್ರ ಸಿದ್ದಾಪುರ.ಪಿ ಟಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾದ ಶ್ರೀ ಅಮೋಘಸಿದ್ದೇಶ್ವರ ದೇವಸ್ಥಾನದ ನೂತನ ಕಟ್ಟಡ ಉದ್ಘಾಟನಾ ಸಮಾರಂಭ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಯನ್ನು ಗ್ರಾಮದ ದೇವಸ್ಥಾನದ ಆವರಣದಲ್ಲಿ ಗುರುವಾರ ಬಿಡುಗಡೆ ಮಾಡಲಾಯಿತು.
ದೇವಸ್ಥಾನದ ಆಡಳಿತ ಮಂಡಳ ಹಾಗೂ ಗ್ರಾಮದ ಹಿರಿಯರ ಸಮ್ಮುಖದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿ, ಏಪ್ರಿಲ್ 17 ರಿಂದ ಏಪ್ರಿಲ್ 20 ರ ವರೆಗೆ ನಡೆಯಲಿರುವ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಲಾಯಿತು.
ನಾಲ್ಕು ದಿನಗಳ ಕಾಲ ಧಾರ್ಮಿಕ ಸಂಭ್ರಮ ಏಪ್ರಿಲ್ 17 ರಂದು ಶುಕ್ರವಾರ ಹನಗಂಡಿ ಗ್ರಾಮದಿಂದ ಕಳಸದ ಆಗಮನ, ಗಂಗ ಸ್ಥಳ ಪೂಜೆ ಹಾಗೂ ವಾದ್ಯ ವೈಭವ ಗಳೊಂದಿಗೆ ದೇವಸ್ಥಾನಕ್ಕೆ ಕಳಸ ತರುವುದು. ಏಪ್ರಿಲ್ 18 ರಂದು ಶನಿವಾರ ಶ್ರೀ ಭೂತಾಳ ಸಿದ್ದೇಶ್ವರ ದೇವಸ್ಥಾನ ದಿಂದ ಪಲ್ಲಕ್ಕಿ ಉತ್ಸವ ಕುಂಭಮೇಳ ಹಾಗೂ ರಾತ್ರಿ 10 ಗಂಟೆಗೆ ಸುಪ್ರಸಿದ್ಧ ವಾದಿ- ಪ್ರತಿವಾದಿ ಡೊಳ್ಳಿನ ಪದಗಳ ಕಾರ್ಯಕ್ರಮ, ಏಪ್ರಿಲ್ 19 ರಂದು ಭಾನುವಾರ ನಸುಖಿನ ಜಾವ ಹೋಮ- ಹವನ, ಮೂರ್ತಿ ಪ್ರತಿಷ್ಠಾಪನೆ ಕಳಶಾರೋಹನ್ ಹಾಗೂ ಧರ್ಮ ಸಭೆ ನಡೆಯಲಿದೆ, ರಾತ್ರಿ 9:00 ಗಂಟೆಗೆ’ ಶ್ರೀ ಅಮೋಘಸಿದ್ದೇಶ್ವರ ಮಹಾತ್ಮೆ ‘ಭಕ್ತಿ’ ಪ್ರಧಾನ ನಾಟಕ ಪ್ರದರ್ಶನ ಗೊಳ್ಳಲಿದೆ. ಏಪ್ರಿಲ್ 20 ರಂದು ಸೋಮವಾರ ಶ್ರೀ ಅಮೋಘಸಿದ್ದೇಶ್ವರ ಮೂರ್ತಿಯು ಸಕಲ ವಾದ್ಯ ವೈಭವಗಳೊಂದಿಗೆ ತೊನಿಶಿಹಾಳ ಗ್ರಾಮಕ್ಕೆ ಬನ್ನಿಗೆ ತೆರಳುವ ಮೂಲಕ ಕಾರ್ಯಕ್ರಮ ಸಂಪನ್ನ ಗೊಳ್ಳಲಿದೆ.

ಈ ಸಂದರ್ಭದಲ್ಲಿ ಲಕ್ಕಪ್ಪ ಸೋಮನಾಳ ಅವರು ಮಾತನಾಡಿ ಗ್ರಾಮದ ಹಲವು ವರ್ಷಗಳ ಗ್ರಾಮಸ್ಥರ ಕನಸು ಇಂದು ನನಸಾಗುತ್ತಿದೆ, ಅತ್ಯಂತ ಭಕ್ತಿ ಭಾವದಿಂದ ನಿರ್ಮಿಸಲಾದ ಈ ನೂತನ ಮುರುಡೇಶ್ವರ ಸಿಗಂದೂರೆ ಶ್ವರಿ ಶಿಲ್ಪ ಕಲೆ ಜಗದೀಶ್ ನಾಯಕ್ ಅವರಿಂದ, ಶ್ರೀ ಅಮೋಘಸಿದ್ದೇಶ್ವರ ದೇವಸ್ಥಾನದ ನೂತನ ಕಟ್ಟಡವನ್ನು ಭಕ್ತ ಸಹಾಯದಿಂದ ನಿರ್ಮಾಣವಾಗಿದೆ.
ಈ ದೇವಸ್ಥಾನದ ಉದ್ಘಾಟನೆಗೆ ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದರ್ಶನ ಪಡೆದು ಪುನೀತರಾಗ ಬೇಕು ಎಂದು ಮನವಿ ಮಾಡಿದರು. ಕಾರ್ಯಕ್ರಮದ ಭಕ್ತಾದಿಗಳಿಗೆ ನಿರಂತರವಾಗಿ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿದೆ ಎಂದು ಕಮಿಟಿ ಸದಸ್ಯರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಜಾತ್ರೆಯ ಪತ್ರಿಕೆ ಬಿಡುಗಡೆಯಲ್ಲಿ ಶ್ರೀ ಸಂಗಯ್ಯ ಒಡೆಯರ್,ಶಾಂತಯ್ಯ ಒಡೆಯರ್, ಶ್ರೀಕಾಂತಯ್ಯ ಒಡೆಯರ್ ಶ್ರೀಶೈಲ್ ವಡೆಯರ್, ಅರವಿಂದಯ್ಯ ನಿವೃತ್ತಿ ಶಿಕ್ಷಕ ಹಿರಿಯರಾದ ವಡೆಯರ್, ಹೆಚ್, ಬಿ,ಅಸ್ಕಿ ಮಾಜಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬಸಪ್ಪ ಚಲವಾದಿ, ಶಿವಪ್ಪ ಸೋಮನಾಳ, ದ್ಯಾವಪ್ಪ ಮೇಟಿ, ಗುರುಪಾದಪ್ಪ ಹಲ್ಯಾಳ, ಹನುಮಂತ, ರಾ,ಸೋಮನಾಳ, ಡಾಕ್ಟರ್ ಸಿದ್ದು ಮುತ್ತತ್ತಿ, ಎಂ, ಬಿ, ಹಲ್ಯಾಳ, ಲಕ್ಕಪ್ಪ ಸೋಮನಾಳ, ಗುರುಪಾದ ಅಸ್ಕಿ, ಸಿದ್ದಲಿಂಗಪ್ಪ ಸೋಮನಾಳ, ಎಲ್ಲಪ್ಪ ಗೋಡೇಕಾರ್, ತಿಪ್ಪಣ್ಣ ಹಾಲ್ಯಾಳ ಅಮೋಗಿ ಮೇಟಿ ಸೇರಿದಂತೆ ಸಿದ್ದಾಪುರ್.ಪಿ ಟಿ ಗ್ರಾಮದ ಸಮಸ್ತ ಗುರು ಹಿರಿಯರು ದೈವ ಮಂಡಳಿ ಸದಸ್ಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್:ಬಸವರಾಜ. ಸಂಕನಾಳ ಮುದ್ದೇಬಿಹಾಳ

