🚨 BREAKING NEWS: ಉಡುಪಿ ಪೊಲೀಸರಿಂದ ಬ್ಲ್ಯಾಕ್‌ಮೇಲ್ ಮಾಫಿಯಾಗೆ ಬ್ರಹ್ಮಾಸ್ತ್ರ..!🚨ಡಿಜಿಟಲ್ ಕಿರಾತಕರ ನಿದ್ದೆಗೆಡಿಸಿದ ಎಸ್‌ಪಿ ಹರಿರಾಮ್ ಶಂಕರ್, ಪತ್ರಿಕೋದ್ಯಮದ ಹೆಸರಲ್ಲಿ ಹಫ್ತಾ ವಸೂಲಿ ಮಾಡುತ್ತಿದ್ದ ಗ್ಯಾಂಗ್‌ಗೆ – ‘ಕೋಕಾ’ ಕಾಳ ಸರ್ಪದ ಭಯ..!

ಉಡುಪಿ ಏ.17

ಸಮಾಜದ ಸ್ವಾಸ್ಥ್ಯ ಕೆಡಿಸಿ, ಪವಿತ್ರವಾದ ಪತ್ರಿಕೋದ್ಯಮದ ಮುಖವಾಡ ಧರಿಸಿ ಉದ್ಯಮಿಗಳಿಗೆ ಬ್ಲ್ಯಾಕ್‌ ಮೇಲ್ ತಂತ್ರ ಹೂಡುತ್ತಿದ್ದ ವಂಚಕ ಜಾಲಕ್ಕೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ಹರಿರಾಮ್ ಶಂಕರ್ ಅವರು ಕಾನೂನಿನ ‘ಮಾರಿಹಬ್ಬ’ ಶುರು ಮಾಡಿದ್ದಾರೆ. ಯೂಟ್ಯೂಬ್ ಚಾನೆಲ್ ಹೆಸರಲ್ಲಿ ಗ್ಯಾಂಗ್ ಕಟ್ಟಿಕೊಂಡು ದರೋಡೆಗೆ ಇಳಿದಿದ್ದ ನಕಲಿಗಳಿಗೆ ಈಗ ‘ಕೋಕಾ’ (KOCA) ಕಾಯ್ದೆಯ ಬಿಸಿ ತಟ್ಟುವ ಕಾಲ ಸನ್ನಿಹಿತವಾಗಿದೆ!

🔥 ವರದಿಯ ಮುಖ್ಯಾಂಶಗಳು:-

🔹ನಕಲಿಗಳ ನವರಂಗಿ ಆಟಕ್ಕೆ ಬ್ರೇಕ್:-

ಪತ್ರಕರ್ತರೆಂದು ಪೋಸ್ ಕೊಟ್ಟು, ಸಮಾಜದ ಗೌರವಾನ್ವಿತ ವ್ಯಕ್ತಿಗಳನ್ನು ಗುರಿಯಾಗಿಸಿ “ವಿಡಿಯೋ ವೈರಲ್ ಮಾಡ್ತೀವಿ” ಎಂದು ಲಕ್ಷಾಂತರ ರೂಪಾಯಿ ಹಣ ಪೀಡಿಸುತ್ತಿದ್ದ ಈ ಡಿಜಿಟಲ್ ಕಳ್ಳರ ಕೋಟೆಯನ್ನು ಎಸ್‌ಪಿ ನೇತೃತ್ವದ ತಂಡ ಧೂಳೀಪಟ ಮಾಡಿದೆ.

‘ಕೋಕಾ’ ಎಂಬ ಅಂತಿಮ ಅಸ್ತ್ರ:-

ಸಂಘಟಿತವಾಗಿ ಅಪರಾಧ ಎಸಗುತ್ತಿರುವ ಈ ವಂಚಕ ಗುಂಪಿನ ವಿರುದ್ಧ ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (KOCA) ಪ್ರಯೋಗಿಸಲು ಸಿದ್ಧತೆ ನಡೆಸಲಾಗುತ್ತಿದೆ. ಈ ಕಾಯ್ದೆ ಅಡಿಯಲ್ಲೇ ಕೇಸ್ ದಾಖಲಾದರೆ, ಈ ಬ್ಲ್ಯಾಕ್‌ಮೇಲ್ ಪಿಶಾಚಿಗಳು ಸುದೀರ್ಘ ಕಾಲ ಜೈಲು ಕಂಬಿ ಎಣಿಸುವುದು ಗ್ಯಾರಂಟಿ!ಜನಸ್ನೇಹಿ ಸಿಂಗಂ ಆರ್ಭಟ:-ಒಂದೆಡೆ ‘ಫೋನ್-ಇನ್’ ಮೂಲಕ ಜನರ ಕಷ್ಟಕ್ಕೆ ಸ್ಪಂದಿಸುವ ಮೃದು ಸ್ವಭಾವ, ಇನ್ನೊಂದೆಡೆ ಕ್ರಿಮಿನಲ್‌ಗಳ ಪಾಲಿಗೆ ಸಿಂಹಸ್ವಪ್ನವಾಗಿರುವ ಹರಿರಾಮ್ ಶಂಕರ್ ಅವರ ಕಾರ್ಯ ವೈಖರಿಗೆ ಜಿಲ್ಲೆಯಾದ್ಯಂತ ಪ್ರಶಂಸೆಯ ಮಹಾ ಪೂರವೇ ಹರಿಯುತ್ತಿದೆ.

🔹ಡ್ರಗ್ಸ್ ಮತ್ತು ಮಾಫಿಯಾ ವಿರುದ್ಧ ಸಮರ:-

ಕೇವಲ ಬ್ಲ್ಯಾಕ್‌ಮೇಲ್ ಮಾತ್ರವಲ್ಲದೆ, ಕರಾವಳಿಯ ಶೈಕ್ಷಣಿಕ ಕೇಂದ್ರಗಳಲ್ಲಿ ಡ್ರಗ್ಸ್ ಜಾಲವನ್ನು ಬೇರುಸಹಿತ ಕಿತ್ತೆಸೆಯುವಲ್ಲಿ ಎಸ್‌ಪಿ ಅವರ ಮಿಂಚಿನ ಕಾರ್ಯಾಚರಣೆ ಅಸಂಖ್ಯಾತ ಪೋಷಕರಿಗೆ ನೆಮ್ಮದಿ ತಂದಿದೆ.

📢 ಸಾರ್ವಜನಿಕರ ಮೆಚ್ಚುಗೆ:-

“ಪೊಲೀಸ್ ಇಲಾಖೆ ಎಂದರೆ ಭಯಪಡುತ್ತಿದ್ದ ನಮಗೆ, ಹರಿರಾಮ್ ಶಂಕರ್ ಅವರು ಪೊಲೀಸರು ನಮ್ಮ ಮಿತ್ರರು ಎಂಬ ಧೈರ್ಯ ತುಂಬಿದ್ದಾರೆ. ಉದ್ಯಮಿಗಳನ್ನು ಪೀಡಿಸುವ ಇಂತಹ ನಕಲಿ ಪತ್ರಕರ್ತರಿಗೆ ಕೋಕಾ ಕಾಯ್ದೆಯೇ ಸರಿಯಾದ ಮದ್ದು.”ಎಂದು ಉಡುಪಿಯ ಪ್ರಜ್ಞಾವಂತ ನಾಗರಿಕರು ತಿಳಿಸಿದ್ದಾರೆ.

🛑 ಎಚ್ಚರಿಕೆ:-

ಪತ್ರಿಕೋದ್ಯಮವನ್ನು ಹಫ್ತಾ ವಸೂಲಿಗೆ ಬಳಸುವ ಪ್ರತಿಯೊಬ್ಬರಿಗೂ ಇದು ಎಸ್‌ಪಿ ನೀಡಿದ ಖಡಕ್ ಸಂದೇಶ. ನಿಮ್ಮ ಅಂತಿಮ ವಿಳಾಸ ಯೂಟ್ಯೂಬ್ ಕಚೇರಿಯಲ್ಲ, ಬದಲಾಗಿ ಕತ್ತಲು ಕೋಣೆ!

ವರದಿ:ಆರತಿ.ಗಿಳಿಯಾರು.ಉಡುಪಿ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button