ಶಿಕ್ಷಣ ಹೋರಾಟದಿಂದ ಬದಲಾವಣೆ ಸಾಧ್ಯ – ತರೀಕೆರೆ.ಎನ್ ವೆಂಕಟೇಶ್.
ಎನ್ ಆರ್ ಪುರ ಏ.20
ಜಾತಿ ಪದ್ಧತಿ ಅಸ್ಪೃಶ್ಯತೆಯ ನೋವು ಅನುಭವಿಸಿದ ಭೀಮರಾವ್ ರಾಮ್ ಜಿ ಅಂಬೇಡ್ಕರ್ ರವರು ಎಂದು ಮಹಾತ್ಮ ಪ್ರೊ ಬಿ ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕರಾದ ತರೀಕೆರೆ ಎನ್ ವೆಂಕಟೇಶ್ ರವರು ಹೇಳಿದರು ಅವರು ಇಂದು ಎನ್ ಆರ್ ಪುರ ತಾಲೂಕು ಮೆಣಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೀನ್ ಕ್ಯಾಂಪ್ ನಲ್ಲಿ ಏರ್ಪಡಿಸಿದ್ದ ಅಂಬೇಡ್ಕರ್ ರವರ 135 ನೇ. ಜನ್ಮ ದಿನಾಚರಣೆ ಸಮಾರಂಭದಲ್ಲಿ ಹೇಳಿದರು.

ಅಂಬೇಡ್ಕರ್ ಅವರು ಶಿಕ್ಷಣ ಹೋರಾಟದಿಂದ ಮಾತ್ರ ಬದಲಾವಣೆ ಸಾಧ್ಯ ಎಂದು ಹೇಳಿದ್ದಾರೆ ಆದ್ದರಿಂದ ನಿಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ ಉನ್ನತ ವ್ಯಾಸಂಗ ಕೊಡಿಸಿ ಎಂದು ಹೇಳಿದರು. ಕಾರ್ಯಕ್ರಮ ಉದ್ಘಾಟನೆ ಮಾಡಿದ ಆರಕ್ಷಕ ಉಪ ನಿರೀಕ್ಷಕರಾದ ನೂತನ್ ರವರು ಮಾತನಾಡಿ ಅಂಬೇಡ್ಕರ್ ರವರು ನೀಡಿದ ಸಂವಿಧಾನಾತ್ಮಕ ಹಕ್ಕುಗಳು ಮತ್ತು ಸಂಚಾರಿ ನಿಯಮಗಳು ಹಾಗೂ ಮಹಿಳೆಯರಿಗೆ ಯುವಕರಿಗೆ ಪೋಸ್ಕೋ ಕಾನೂನು ಅರಿವು ಮೂಡಿಸಿದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಕರ್ನಾಟಕ ದಲಿತ ಮಹಿಳಾ ಒಕ್ಕೂಟದ ರಾಜ್ಯ ಸಂಚಾಲಕಿಯಾದ ಎಂ ವಿ ಭವಾನಿ ಮಾತನಾಡಿ ಅಂಬೇಡ್ಕರ್ ಅವರು ಮಹಿಳೆಯರಿಗೆ ಸಮಾನತೆಯ ಹಕ್ಕನ್ನು ಸಂವಿಧಾನ ಬದ್ಧವಾಗಿ ನೀಡಿದ್ದಾರೆ ಎಂದು ಹೇಳಿದರು. ರಾಜ್ಯ ಸಮಿತಿ ಸದಸ್ಯರಾದ ರಾಜೇಶ್ ರವರು ಮಾತನಾಡಿ ಅಂಬೇಡ್ಕರ್ ಅಧ್ಯಯನ ಪೀಠ ಮತ್ತು ಬುದ್ಧ ವಿಹಾರ ನಿರ್ಮಾಣಕ್ಕಾಗಿ 70 ಎಕರೆ ಜಮೀನನ್ನು ಗುರುತಿಸಿದ್ದು ತಹಶೀಲ್ದಾರ್ ಅವರು ಸರ್ವೇ ಮಾಡಿ ಕೊಡುವುದಾಗಿ ತಿಳಿಸಿರುತ್ತಾರೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಸಂಚಾಲಕರಾದ ಸಿಜು ರವರು ಮಾತನಾಡಿ ಸರ್ವರಿಗೂ ಅಂಬೇಡ್ಕರ್ ಜಯಂತಿಯ ಶುಭಾಶಯಗಳು ಕೋರಿದರು. ತಾಲೂಕು ಸಂಘಟನಾ ಸಂಚಾಲಕರಾದ ರಾಜು, ಜಯರಾಮ್, ಮೀನ್ ಕ್ಯಾಂಪಿನ ರವಿ, ಚಂದ್ರಶೇಖರ್ ಹಾಗೂ ಮಹಿಳಾ ಸಮಿತಿಯ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು ಕಾರ್ಯಕ್ರಮದ ನಿರೂಪಣೆ ಮತ್ತು ಸ್ವಾಗತವನ್ನು ಜಿಲ್ಲಾ ಸಂಘಟನಾ ಸಂಚಾಲಕರಾದ ಮೃತ್ಯುಂಜಯ ರವರು ನೆರವೇರಿಸಿದರು. ತಾಲೂಕು ಸಂಚಾಲಕಿಯಾದ ವಾಸಂತಿ ರವರು ವಂದನಾರ್ಪಣೆ ಮಾಡಿದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್:ಎನ್. ವೆಂಕಟೇಶ್ ತರೀಕೆರೆ ಚಿಕ್ಕಮಗಳೂರು

