“ವಿಶ್ವಗುರು ಬಸವಣ್ಣ”…..

ಬಾಲ್ಮದಲ್ಲಿಯೇ ಜನಿವಾರವಕಿತ್ತೊಗೆದು ಜಾತಿ ಬೇಧದ ಪೊರೆಯ ಕಳಚಲೆತ್ನಿಸಿದಜಗದನಾಯಕ ಬಸವಣ್ಣ।।
ಮೌಢ್ಯತೆಯ ಕಿತ್ತೊಗೆದುವೈಚಾರಿಕತೆಯ ಬೆಳೆಸಿದ ಮಹಾನಾಯಕ ಚಿಂತಕ ವಿಶ್ವಗುರು ಬಸವಣ್ಣ।।
ಹರಳಯ್ಯ ಮಧುವರಸರಮಕ್ಕಳಿಗೆ ಶುಭ ಲಗ್ನವಮಾಡಿಸಿದ ಸಮಾನತೆಯತತ್ವಕಾರ ಬಸವಣ್ಣ।।
ಅನುಭವ ಮಂಟಪದಿಅಕ್ಕನ ವೈರಾಗ್ಯ ಪ್ರಶ್ನಿಸಿದ ಅಲ್ಲಮಪ್ರಭುವಿನ ದಿಟ್ಟತನಜಗತ್ತಿಗೆ ಬೆಳಕಾಯಿತಣ್ಣ।।
ಕಾಯಕವೇ ಕೈಲಾಸವೆಂದುದಾಸೋಹವೇ ದೇವರೆಂದುಅಂತರಂಗ ಬಹಿರಂಗ ಶುದ್ಧಿಗಳಅರುಹಿದ ಮಹಾಶರಣ ಬಸವಣ್ಣ। ।
ಇವ ನಮ್ಮವ ಇವ ನಮ್ಮವ ಎನುತ ಮಾನವೀಯತೆಯ ಮೆರೆದ ಯುಗಪುರುಷ ನೀಜಗದಲೆಂದು ಅಜರಾಮರ।।
-ಕೆ.ಎಸ್ ತಿಪ್ಪಮ್ಮ ನಾಗರಾಜು,
ಚಿತ್ರದುರ್ಗ.
ದೂರವಾಣಿ:-9110678387

