ಮೇ. 21 ಕ್ಕೆ ಕಲ್ಮೇಶ್ವರ ಕಾಲೇಜಿನಲ್ಲಿ – ಕ್ಯಾಂಪಸ್ ಸಂದರ್ಶನ ಆಯೋಜನೆ.
ಹೊಳೆಆಲೂರ ಮೇ.19

ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಹೊಳೆಆಲೂರಲ್ಲಿ ಉತ್ತಮ ಉದ್ಯೋಗ ಉಜ್ವಲ ಭವಿಷ್ಯದ ಹಿನ್ನೆಲೆಯಲ್ಲಿ ಹೊಳೆಆಲೂರು ಹಾಗೂ ಸುತ್ತ ಮುತ್ತಲಿನ ಯುವಕ ಯುವತಿಯರಿಗೆ ಉದ್ಯೋಗಾವಕಾಶ ಕಲ್ಪಿಸುವ ಮಹತ್ವದ ಉದ್ದೇಶದಿಂದ ಇಲ್ಲಿನ ಪ್ರತಿಷ್ಠಿತ ವಿದ್ಯಾಸಂಸ್ಥೆ ಕವಿಪ್ರ ಸಮಿತಿಯ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಪದವಿ ಮಹಾವಿದ್ಯಾಲಯದಿಂದ ಇದೆ ಮೇ. 21 ರಂದು ಕ್ಯಾಂಪಸ್ ಸಂದರ್ಶನ ಆಯೋಜಿಸಿದೆ.
ಬೆಳಿಗ್ಗೆ 10 ಕ್ಕೆ ಮಹಾವಿದ್ಯಾಲಯದ ಆವರಣದಲ್ಲಿ ನಡೆಯಲಿದ್ದು, ಟಾಟಾ, ಎಲೆಕ್ಟ್ರಾನಿಕ್ಸ್ಮೋಟಾರ್ಸ್, ಇಂಡೋ ಮಿಮ್, ಮದರಸನ್ಸೇರಿದಂತೆ ಖ್ಯಾತ ಕೈಗಾರಿಕಾ ಸಂಸ್ಥೆಗಳು ನೇರಸಂದರ್ಶನ ನಡೆಸಲಿದ್ದು, ಎಸ್.ಎಸ್.ಎಲ್.ಸಿ/ಪಿಯು.ಸಿ ಡಿಪ್ಲೊಮಾ ಮತ್ತು ಯಾವುದೇ ಪದವಿ ಪಡೆದ 18 ರಿಂದ 26 ವರ್ಷದೊಳಗಿನ ಯುವಕರು/ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಪ್ರಾಚಾರ್ಯ ಡಾ, ಎಸ್.ಬಿ ಸಜ್ಜನರ ಹೇಳಿದ್ದಾರೆ.
ಅಭ್ಯರ್ಥಿಗಳು ಅಂಕಪಟ್ಟಿ, ಆಧಾರ್, ಪಾನ್ ಕಾರ್ಡ್ ಹಾಗೂ ಪಾಸ್‌ಪೋರ್ಟ್ ಗಾತ್ರದ ಎರಡು ಭಾವ ಚಿತ್ರಗಳನ್ನು ತರಬೇಕು. ಒಟ್ಟು ನಾಲ್ಕು ಸೆಟ್ ಮಾಡಿ ಕೊಂಡು ಬರಬೇಕೆಂದು ಸೂಚಿಸಲಾಗಿದೆ. ಸ್ಥಳದಲ್ಲೇ ಅರ್ಜಿಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಮಾಹಿತಿಗೆ 9353338277, 9632966801ಸಂಪರ್ಕಿಸಬಹುದು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯ ಡಾ, ಎಸ್.ಬಿ ಸಜ್ಜನರ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿಸಂಸ್ಥೆ ಅಧ್ಯಕ್ಷ ಬಿ.ಸಿ. ಪಾಟೀಲ ಹಾಗೂ ವಿವಿಧ ಗಣ್ಯರು ಭಾಗವಹಿಸಲಿದ್ದಾರೆ ಎಂದು ಆಯೋಜಕರಾದ ಡಾ, ಕುಮಾರ ವೈ.ಹಂಜಗಿ ತಿಳಿಸಿದ್ದಾರೆ.
ರಾಜ್ಯ ಮಟ್ಟದ ವಿಶೇಷ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಡಾ, ಪ್ರಭು ಗಂಜಿಹಾಳ ಗದಗ

