ಭಾರತೀಯ ಮಾಜಿ ಸೈನಿಕ – ಟಿ.ಆರ್ ವೆಂಕಟೇಶ್ ನಿಧನ.

ತರೀಕೆರೆ ಜು.01

ಭಾರತೀಯ ಸೈನ್ಯ ದ ಮಾಜಿ ಸೈನಿಕ ಟಿ.ಆರ್ ವೆಂಕಟೇಶ್ ರವರು ಇಂದು ಅಂದರೆ ದಿನಾಂಕ:-31-6-2026 ರಂದು ನಿಧನರಾಗಿರುತ್ತಾರೆ . ಇವರು ಕಾರ್ಗಿಲ್ ಯುದ್ಧದಲ್ಲಿ ಭಾಗಿಯಾಗಿದ್ದರು, ದೇಶಕ್ಕೆ ಜಯ ತರುವಲ್ಲಿ ಇವರು ಸಹ ಪಾತ್ರ ಧಾರಿಗಳಾಗಿರುತ್ತಾರೆ. ಪತ್ನಿ ಮತ್ತು ಎರಡು ಜನ ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ದೇಶದ ವೀರ ಯೋಧನ ಶವ ಸಂಸ್ಕಾರಕ್ಕೂ ಮುನ್ನ ತರೀಕೆರೆ ಮಾಜಿ ಸೈನಿಕರ ಸಂಘದ ಅಧ್ಯಕ್ಷರಾದ ಮಿಲ್ಟ್ರಿ ಶ್ರೀನಿವಾಸ್ ಕಾರ್ಯದರ್ಶಿ ಎಸ್ ಹೆಚ್ ಕುಮಾರ್ ಖಜಾಂಚಿ ದೇವೇಂದ್ರಪ್ಪ ಹಾಗೂ ಮಾಜಿ ಸೈನಿಕರಾದ ಗೋವಿಂದಪ್ಪ, ಹನುಮಂತಪ್ಪ, ಜಗನ್ನಾಥ, ಶಾಂತಕುಮಾರ್, ರೇವಣ್ಣ, ದೇವಸಾಗಯಂ, ಯತಿರಾಜ್, ಪಾಲಾಕ್ಷಪ್ಪ, ಟಿ.ಎಸ್ ಮಂಜುನಾಥ, ಸೋಮಶೇಖರ್ ಮುಂತಾದವರು ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿ ಶ್ರದ್ಧಾಂಜಲಿಯನ್ನು ಅರ್ಪಿಸಿದರು.

ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್: ಎನ್.ವೆಂಕಟೇಶ್ ತರೀಕೆರೆ ಚಿಕ್ಕಮಗಳೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button