ಆಗಸ್ಟ್ 2 ರಂದು ಬಣಜಿಗ ಸಮಾಜದ – ತಾಲೂಕು ಸಮಾವೇಶ ಆಯೋಜನೆ.
ಆಲಮೇಲ ಜು.30

ಕರ್ನಾಟಕ ರಾಜ್ಯ ಬಣಜಿಗೆ ಸಮಾಜದ ಕ್ಷೇಮಾಭಿವೃದ್ಧಿ ಸಂಘ (ರಿ) ಬೆಂಗಳೂರು ಹಾಗೂ ಆಲಮೇಲದ ತಾಲೂಕು ಘಟಕ ಆಶ್ರಯದಲ್ಲಿ ಬಣಜಿಗೆ ಸಮಾಜದ ಆಲಮೇಲ ತಾಲೂಕಿನ ಸಮಾವೇಶ ಆಯೋಜಿಸಿದೆ.
ಹಾಗೂ ನೂತನ ತಾಲೂಕ ಪದಾಧಿಕಾರಿಗಳ ಪದಗ್ರಹಣ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಅಗಸ್ಟ್ 2 ರಂದು (ಭಾನುವಾರ ) ಬೆಳಿಗ್ಗೆ 10 ಗಂಟೆಗೆ ಆಲಮೇಲ ಪಟ್ಟಣದ ಶ್ರೀ ವಿಶ್ವೇಶ್ವರ ದೇವಸ್ಥಾನದಲ್ಲಿ ನಡೆಯಲಿದೆ ಎಂದು ತಾಲೂಕು ಅಧ್ಯಕ್ಷ ಸಿದ್ದಲಿಂಗ ಜಿ. ಸುಭೇದಾರ ತಿಳಿಸಿದರು. ಸಮಾರಂಭವನ್ನು ಮಾಜಿ ಮುಖ್ಯಮಂತ್ರಿ ಹಾಗೂ ಬೆಳಗಾವಿ ಸಂಸದ ಜಗದೀಶ್ಮ ಶೆಟ್ಟರ ಉದ್ಘಾಟಸಲಿದ್ದಾರೆ.
ರಾಮರೂಢ ಮಠದ ಶಂಕರಾರೂಢ ಮಹಾ ಸ್ವಾಮಿಗಳು (ಶಿರೋಳ) ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯರು ಶ್ರೀ ಗುರು ಸಂಸ್ಥಾನ ಹಿರೇಮಠ ಆಲಮೇಲ. ಶ್ರೀ ಜಗದೇವ ಮಲ್ಲಿಬೊಮ್ಮಯ್ಯ ಮಹಾಸ್ವಾಮಿಗಳು ವೀರಕ್ತ ಮಠ ಅಲಮೇಲ. ಶ್ರೀ ಶ್ರೀಶೈಲಯ್ಯ ಮಹಾಸ್ವಾಮಿಗಳು ಆಳ್ಳೊಳಿ ಹಿರೇಮಠ ಆಲಮೇಲ. ದಿವ್ಯ ಸಾನಿಧ್ಯ ವಹಿಸಲಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿಶ್ವಗುರು ಬಸವೇಶ್ವರರ ಭಾವ ಚಿತ್ರಕ್ಕೆ ಸಿಂದಗಿ ಶಾಸಕ ಅಶೋಕ ಎಂ ಮನಗೂಳಿ ಪುಷ್ಪಾರ್ಪಣೆ ಮಾಡಲಿದ್ದಾರೆ.
ವೀರವಿರಾಗಿನಿ ಅಕ್ಕಮಹಾದೇವಿ ಭಾವ ಚಿತ್ರಕ್ಕೆ ವಿಜಯಪುರದ ಮಾಜಿ ಸಚಿವ ಅಪ್ಪ ಸಾಹೇಬ ಎಂ ಪಟ್ಟಣಶೆಟ್ಟಿ ಪುಷ್ಪಾರ್ಪಣೆ ಸಲ್ಲಿಸಲಿದ್ದಾರೆ.
ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ದಿ ಸಂಘದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ್ ಜಿ. ರೋಡಗಿ. ಮಾಜಿ ಶಾಸಕ ರಮೇಶ ಬಾಳಪ್ಪ ಭೂಸನೂರ. ಮಾಜಿ ವಿಧಾನ ಪರಿಷತ್ ಸದಸ್ಯ ಅರುಣ ಆರ್ ಶಹಾಪುರ ಹಾಗೂ ಮಾಜಿ ಶಾಸಕ ದೊಡ್ಡಪ್ಪಗೌಡ ಎಸ್ ಪಾಟೀಲ. ಗೌರವ ಉಪಸ್ಥಿತ ವಹಿಸಲಿದ್ದಾರೆ.
ಸಮಾರಂಭದಲ್ಲಿ ಸಂಘದ ರಾಜ್ಯದ ಉಪಾಧ್ಯಕ್ಷ ಅಂದಪ್ಪ ಜವಳಿ ಹಾಗೂ ಜಿಲ್ಲಾ ಅಧ್ಯಕ್ಷ ಮುತ್ತು ಆರ್ ಕಿಣಗಿ. ಸ್ಮರಣಿಕ ಬಿಡುಗಡೆ ಮಾಡಲಿದ್ದಾರೆ.
ತಾಲೂಕು ಗೌರವಾಧ್ಯಕ್ಷ ಶರಣಪ್ಪ ಕೆ. ಗುಬ್ಬೆವಾಡ ಗೌರವಾಧ್ಯಕ್ಷತೆ ವಹಿಸಲಿದ್ದು. ತಾಲೂಕು ಅಧ್ಯಕ್ಷ ಸಿದ್ದಲಿಂಗ ಜಿ ಸುಭೇದಾರ ಅಧ್ಯಕ್ಷತೆ ವಹಿಸಲಿದ್ದಾರೆ. ಸಾಹಿತಿ ಅಶೋಕ ಹಂಚಲಿ ವಿಶೇಷ ಉಪನ್ಯಾಸ ನೀಡಲಿದ್ದಾರೆ.
ಇದೇ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳಿಗೆ ಪದಗ್ರಹಣ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪ್ರತಿಭಾವಂತರಿಗೆ ಸನ್ಮಾನ ಮತ್ತು ಪ್ರತಿಭಾ ಪುರಸ್ಕಾರ ನಡೆಯಲಿದೆ ಎಂದು ತಿಳಿಸಿದರು.
ಸಮಾಜದ ಎಲ್ಲಾ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಬೇಕು ಎಂದು ಸಿದ್ದಲಿಂಗ ಜಿ ಸುಭೇದಾರ ಮನವಿ ಮಾಡಿದರು.
ಪತ್ರಿಕೆ ಗೋಷ್ಠಿಯಲ್ಲಿ ಶಿವು ಸರ್ ಗುಂದಗಿ. ರವೀಂದ್ರ ವಾರದ. ಶಿವಾನಂದ ಮಾರ್ಸನಳ್ಳಿ. ನೀಲಪ್ಪ ಗುಣಾರಿ. ಗೋಲ್ಲಾಳ ಉಪ್ಪಿನ. ರಾಜಶೇಖರ ಹಿಪ್ಪರಗಿ. ಅಂಬರೀಶ್ ಸಾಲಕ್ಕಿ. ಶರಣು ಶ್ರೀ ಗಿರಿ. ಬಾಬು ಜಾನಾ. ಆನಂದ ಲಾಳಸಂಗಿ. ಶರಣು ತಲ್ಲೂರ. ಹಾಗೂ ಸಮಾಜದ ಮುಖಂಡರು ಭಾಗವಹಿಸಿದರು.
ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರೇವಣಸಿದ್ದಪ್ಪ ಹಿರೇಮಠ ಆಲಮೇಲ.

