ಅಂತರ್ ರಾಜ್ಯ ಕಳ್ಳರ ಬಂಧನ ಪವಾಡ ಬಸವೇಶ್ವರರ ಮೂರ್ತಿ – ಕರಗಿಸಿ ಮಾರಿದ್ದ ಗಟ್ಟಿ ಬೆಳ್ಳಿ ವಶಕ್ಕೆ.
ಬಸರಕೋಡ ಆ.07


ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಬಸರಕೋಡ ಗ್ರಾಮದ ಪವಾಡ ಬಸವೇಶ್ವರ ದೇವಸ್ಥಾನದಲ್ಲಿ ನಡೆದ ಕಳ್ಳತನ ಪ್ರಕರಣದ ಬೇದಿಸಿರುವ ವಿಜಯಪುರ ಜಿಲ್ಲೆಯ ಪೊಲೀಸರು ಗುಜರಾತ್ ಮೂಲದ ಅಂತರ್ ರಾಜ್ಯ ಮಟ್ಟದ ಮೂವರು ಕಳ್ಳರನ್ನು ಬಂಧಿಸಿ ಅವರಿಂದ ತುಂಡರಿಸಿದ ಬೆಳ್ಳಿ ಹಾಗೂ ಬೆಳ್ಳಿ ತುಣುಕು ಸೇರಿ ಹಲವು ಸಾಮಗ್ರಿ ವಶಕ್ಕೆ ಪಡೆದಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡದ ಬೆಳಗಾವಿ ಉತ್ತರ ವಲಯದ ಐ.ಜಿ.ಪಿ ಸಂದೀಪ್ ಪಾಟೀಲ್ ಅವರು ಕಳೆದ ಜು. 5 ರಂದು ರಾತ್ರಿ ಬಸರಕೋಡದ ಪವಾಡ ಬಸವೇಶ್ವರ ದೇವಸ್ಥಾನದ ಕಬ್ಬಿಣದ ಬಾಗಿಲುಗಳಿಗೆ ಹಾಕಿದ ಕೀಲಿಗಳನ್ನು ಮುರಿದು ದೇವಸ್ಥಾನದಲ್ಲಿದ್ದ 32 ಕೆಜಿ ತೂಕದ ಬೆಳ್ಳಿಯ ಮೂರ್ತಿ ಕಳುವು ಮಾಡಲಾಗಿತ್ತು,
ಇದರ ಮೌಲ್ಯ 51. 20 ಲಕ್ಷ ರೂ. ಎಂದು ಅಂದಾಜಿಸಲಾಗಿತ್ತು, ಈ ಕುರಿತು ದೇವಸ್ಥಾನದ ಕಮಿಟಿ ಅಧ್ಯಕ್ಷ ಕರನಂದೇಪ್ಪ ಯಮನಪ್ಪ ಬಿರಾದಾರ ಮುದ್ದೇಬಿಹಾಟ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪ್ರಕರಣದ ಪತ್ತೆಗೆ ಎಸ್.ಪಿ ಲಕ್ಷ್ಮಣ್ ನಿಂಬರಿಗಿ ಅವರ ಮಾರದರ್ಶನದಲ್ಲಿ ವಿಶೇಷ ತನಿಕಾ ತಂಡ ರಚಿಸಿದ್ದರು, ಬ. ಬಾಗೇವಾಡಿ ಡಿ ಎಸ್ ಪಿ ಚಂದ್ರಕಾಂತ್ ನಂದರೆಡ್ಡಿ, ಮುದ್ದೇಬಿಹಾಳ ಸಿಪಿಐ ಮಮ್ಮದ್ ಪಸಿಯೂದ್ದಿನ, ಪಿಎಸ್ಐ ಸಂಜಯ್ ತಿಪ್ಪಾರೆಡ್ಡಿ, ಅಪರಾಧ ವಿಭಾಗದ ಪಿಎಸ್ಐ ಆರ್ ಎಸ್ ಬಂಗಿ ಹಾಗೂ ನುರಿತ ಸಿಬ್ಬಂದಿಯನ್ನೊಳ ಗೊಂಡ ಒಟ್ಟು 4 ತನಿಕಾ ತಂಡಗಳನ್ನು ರಚಿಸಿದ್ದರು.
ಆಯಾಮಗಳಲ್ಲಿ ತನಿಖೆ ಕೈಗೊಂಡು ಅಧಿಕಾರಿಗಳು ಗುಜರಾತ್ ವರೆಗೂ ತೆರಳಿ ಕಳ್ಳರನ್ನು ಪತ್ತೆ ಹಚ್ಚುವಲ್ಲಿ ಸಫಲರಾಗಿದ್ದಾರೆ ಎಂದು ತಿಳಿಸಿದರು. ಬಂಧಿತರ ಪೈಕಿ ಗುಜರಾತ್ ಮೂಲದ ಸುರೇಶ್ ಕುಮಾರ್ ಶಾಂತಿಲಾಲ್ ಸೋನಿ (51) ಈತನ ಮೇಲೆ ಈಗಾಗಲೇ ಗುಜರಾತ್ ರಾಜಸ್ಥಾನದ ವೀರಪುರಿ ಸ್ಥಾನಗಳಲ್ಲಿ 5 ಪ್ರಕರಣಗಳು ದಾಖಲಾಗಿವೆ.
ಇನ್ನೂಳಿದಂತೆ ಬ್ರಹ್ಮರ ಟೋಪಿಯಾ ನೆಟ್ (35) ಹಾಗೂ ಇಂದ್ರಜಿತ್ ಮನಿಯಾರ್ ನೆಟ್ (33) ಬಂಧಿತರಾಗಿದ್ದಾರೆ. ವಿಚಾರಣೆ ವೇಳೆ ಕಳ್ಳತನ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ ಕಳ್ಳತನ ಮಾಡಿದ ಬಸವೇಶ್ವರ ಮೂರ್ತಿ ಪೈಕಿ ಮೂರ್ತಿಯ ಪ್ರಮುಖ ಭಾಗವನ್ನು ನಾಲ್ಕು ಭಾಗಗಳಾಗಿ ತುಂಡರಿಸಿ, ನೂಲಿನ ಭಾಗವನ್ನು ಕರಗಿಸಿ ಗಟ್ಟಿಗಳನ್ನಾಗಿ ಮಾಡಿ ಮಾರಾಟ ಮಾಡಿದ ಬಗ್ಗೆ ಹೇಳಿದ್ದು, ಆ ಪ್ರಕಾರ ತನಿಖೆ ಕೈಗೊಂಡು ಸಾಮಗ್ರಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸ್.ಪಿ ಲಕ್ಷ್ಮಣ್ ನಿಂಬುರಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಡಿವೈಎಸ್ಪಿ ಚಂದ್ರಕಾಂತ್ ನಂದರೆಡ್ಡಿ, ಸಿಪಿಐ ಮೊಹಮ್ಮದ್ ಪಸಿವೂದ್ದೀನ್, ಪಿ.ಎಸ್.ಐ ಸಂಜಯ್ ತಿಪ್ಪಾರೆಡ್ಡಿ, ಎಸ್ ಆರ್ ಬಂಗಿ, ಆರೀಫ್ ಮೂಸಾಪುರಿ ಸೇರಿದಂತೆ ಹಲವರು ಇದ್ದರು. ವಶಪಡಿಸಿ ಕೊಂಡ ಸಾಮಗ್ರಿ 4 ಕೆಜಿಯ ಮೂರ್ತಿಯ ತುಂಡರಿಸಿದ ತುಣುಕುಗಳು, 23 ಕೆಜಿ ತೂಕದ ಬೆಳ್ಳಿಯ ತುಣುಕು, 67.600 ರೂ , ನಗದು, 2 ಮೊಬೈಲ್ ಫೋನ್, ಕೃತ್ಯಕ್ಕೆ ಬಳಸಿದ ಕಾರ್, ಕೃತ್ಯಕ್ಕೆ ಬಳಸಿದ ಎರಡು ಕಬ್ಬಿಣದ ರಾಡುಗಳನ್ನು ವಶಕ್ಕೆ ಪಡೆಯಲಾಗಿದೆ.
ಒಟ್ಟು 52,70,000 ರೂ, ಮೌಲ್ಯದ ಸಾಮಗ್ರಿಗಳನ್ನು ವಶಪಡಿಸಿ ಕೊಳ್ಳಲಾಗಿದೆ. ಇನ್ನೂ ಕೆಲವು ಆರೋಪಿತರು ಕೃತ್ಯದಲ್ಲಿ ಭಾಗಿಯಾದ ಬಗ್ಗೆ ತಿಳಿದು ಬಂದಿದ್ದು ಅವರ ಪತ್ತೆ ಕಾರ್ಯ ಮುಂದುವರಿದಿದೆ ಎಂದು ಎಸ್.ಪಿ ಲಕ್ಷ್ಮಣ್ ನಿಂಬುರಗಿ ತಿಳಿಸಿದ್ದಾರೆ.
ಕಳ್ಳರನ್ನು ಬಂಧಿಸಿದ ಪೊಲೀಸರಿಗೆ ಸನ್ಮಾನ ಪತ್ರ, ಅಭಿನಂದನೆ ಒಂದು ತಿಂಗಳಗಳ ಕಾಲ ಪವಾಡ ಬಸವೇಶ್ವರ ಬೆಳ್ಳಿ ಮೂರ್ತಿ ಕಳ್ಳತನದ ಪ್ರಕರಣಗಳನ್ನು ಬೆನ್ನತ್ತಿ ಆರೋಪಿಗಳ ಎಡೆಮುರಿ ಕಟ್ಟಿದ ಪೊಲೀಸ್ ತಂಡಕ್ಕೆ ಐ.ಜಿ.ಪಿ ಎಸ್.ಪಿ ಅವರು ಪ್ರಶಂಸನೀಯ ಪತ್ರ ನೀಡಿ ಗೌರವಿಸಿದರು. ಅಲ್ಲದೆ ಈ ಘಟನೆಯ ಯಶಸ್ಸನ್ನು ಡಿ.ಐ.ಜಿ ಕಚೇರಿಗೆ ಪತ್ರ ಬರೆದು ತಿಳಿಸಲಾಗುವುದು ಎಂದು ಐಜಿಪಿ ಅವರು ಮಾಹಿತಿ ನೀಡಿದರು.
ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಬಸವರಾಜ ಸಂಕನಾಳ ಮುದ್ದೇಬಿಹಾಳ
