ಒತ್ತಡ ಮುಕ್ತ ಬದುಕಿಗೆ ಧ್ಯಾನ-ಪುಸ್ತಕ ಓದು ಸಹಕಾರಿ, ಆಪ್ತ ಸಮಾಲೋಚಕ – ಮನೋತಜ್ಞ ಆರ್ ಶ್ರೀನಾಗೇಶ್ ಅಭಿಪ್ರಾಯ.

ಚಿತ್ರದುರ್ಗ ಆ.13

ಆರ್ ಶ್ರೀನಾಗೇಶ್ ಸರ್ ಅವರಿಗೆ ಗೌರವ ಪೂರ್ವಕ ಸನ್ಮಾನ…..

ಕೆ.ಎಸ್ ತಿಪ್ಪಮ್ಮ ನಾಗರಾಜ್ ಅವರಿಗೆ ಸನ್ಮಾನ…..

ಇಂದಿನ ಆಧುನಿಕ ಬದುಕಿನ ಒತ್ತಡವನ್ನು ಕಡಿಮೆ ಮಾಡಿ ಕೊಳ್ಳಲು ಧ್ಯಾನ ಮತ್ತು ಪುಸ್ತಕ ಓದುವ ಹವ್ಯಾಸ ಅತ್ಯಂತ ಸಹಕಾರಿ ಎಂದು ಬೆಂಗಳೂರಿನ ಖ್ಯಾತ ಮನೋ ತಜ್ಞ ಆರ್ ಶ್ರೀನಾಗೇಶ್ ತಿಳಿಸಿದರು.

ಡಾ, ಪಾಲಾಕ್ಷಯ್ಯ ಸರ್ ಅವರಿಗೆ ಸನ್ಮಾನ…..

ಹಂಸದಾಸ ಶಂಕರ ಅವರಿಗೆ ಗೌರವ ಸಮರ್ಪಣೆ…..

ನಗರದ ಭಾರತೀಯ ವೈದ್ಯಕೀಯ ಸಂಘದ ಸಭಾ ಭವನದಲ್ಲಿ ಅಕ್ಷರ ಚಪ್ಪರ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ, ಚಿನ್ಮೂಲದ್ರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ, ಶರಣ ಸಾಹಿತ್ಯ ಪರಿಷತ್ ನ ಸಹಯೋಗದಲ್ಲಿ ಆಯೋಜಿಸಿದ್ದ “ಚಿನ್ಮೂಲದ್ರಿ ಅಕ್ಷರೋತ್ಸವ” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು “ಒತ್ತಡ ಮುಕ್ತ ಬದುಕು” ಎಂಬ ವಿಷಯವಾಗಿ ವಿಶೇಷ ಉಪನ್ಯಾಸ ನೀಡುತ್ತಾ ಮಾತನಾಡಿದರು.

ಬಿ.ಕೆ ರಹಮತ್ ವುಲ್ಲಾ ಅವರಿಗೆ ವೇದಿಕೆಯಿಂದ ಸನ್ಮಾನ…..

ಕಾರ್ಯಕ್ರಮವನ್ನು ಉದ್ಘಾಟಿಸಿ ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಡೀನ್ ಡಾ.ಪಾಲಾಕ್ಷಯ್ಯ ಮಾತನಾಡಿದರು.ಪ್ರಾಸ್ತವಿಕವಾಗಿ ಅಕ್ಷರ ಚಪ್ಪರ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯ ಸಂಸ್ಥಾಪಕ ಅಧ್ಯಕ್ಷೆ ಮಧುಶ್ರೀ, ಅತಿಥಿಗಳಾಗಿ ಭಾಗವಹಿಸಿದ್ದ ಬಿ.ಕೆ.ರಹಮತ್ ವುಲ್ಲಾ,ಡಾ.ಆರ್ ಗೌರಮ್ಮ,ಜಯಾ ಪ್ರಾಣೇಶ್, ಶಾರದಾ ಬಿ ಜೈರಾಂ ಮಾತನಾಡಿದರು.

ಮಧುಶ್ರೀ ಮೇಡಮ್ ಅವರಿಗೆ ಸನ್ಮಾನ…..

ಚಿನ್ಮೂಲದ್ರಿ ಅಕ್ಷರೋತ್ಸವದ ಪ್ರಯುಕ್ತ ಆಯೋಜಿಸಿದ್ದ ಕವಿಗೋಷ್ಠಿಯಲ್ಲಿ ಕರ್ನಾಟಕದ ಮೂವತ್ತಕ್ಕೂ ಹೆಚ್ಚು ಕವಿಗಳು ತಮ್ಮ ಕವಿತೆಗಳನ್ನು ವಾಚನ ಮಾಡಿದರು. ಕೆ.ಎಸ್ ತಿಪ್ಪಮ್ಮ ನಾಗರಾಜ್, ಹಂಸದಾಸ ಶಂಕರ, ಶಿವಾನಂದ ಬಂಡೇಹಳ್ಳಿ ಏಕಪಾತ್ರಾಭಿನಯ ಮಾಡಿ ಎಲ್ಲರನ್ನು ಮಂತ್ರ ಮುಗ್ಧರನ್ನಾಗಿ ಮಾಡಿದರು. ಯತೀಶ್ ಎಂ ಸಿದ್ದಾಪುರ ಅವರಿಂದ ಸಂಗೀತ, ಕುಂಚಿಗನಾಳ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಂದ ಮಹಾತ್ಮರ ವಿವಿಧ ಛದ್ಮವೇಷಗಳ ಪ್ರದರ್ಶನ, ಭರತನಾಟ್ಯ, ಸಮೂಹ ನೃತ್ಯಗಳು ನಡೆದವು.

ದಯಾ ಪುತ್ತೂರ್ಕರ್ ಅವರಿಗೆ ಗೌರವ ಸಮರ್ಪಣೆ…..

ಕಾರ್ಯಕ್ರಮದಲ್ಲಿ ಚಿನ್ಮೂಲದ್ರಿ ಸಾಹಿತ್ಯ ವೇದಿಕೆಯ ಸಂಸ್ಥಾಪಕ ಅಧ್ಯಕ್ಷೆ ದಯಾ ಪುತ್ತೂರ್ಕರ್, ದಿವ್ಯ ಕೊಂಡಜ್ಜಿ, ಭವ್ಯ ರಾಮಚಂದ್ರ, ಹೇಮಲತಾ, ಉಷಾರಾಣಿ, ಹೆಚ್ ಸತೀಶ್ ಕುಮಾರ್, ಸುಮಾ ರಾಜಶೇಖರ್, ವಿಜಯಾಗುರು, ಕ್ಲಾಸಿಕ್ ಚಂದ್ರಶೇಖರ್, ರಘು ಜಿ.ಪಿ, ಜಯದೇವಮೂರ್ತಿ, ತಿಪ್ಪೀರಮ್ಮ, ಪಿಲ್ಲಹಳ್ಳಿ ವೀರೇಶ್, ಬಸವರಾಜ್ ಹರ್ತಿ, ವಿನಾಯಕ, ಮಹಮದ್ ಸಾದತ್, ಶೃತಿ ದೀಕ್ಷಿತ್, ಕೆ.ಟಿ ಶಾಂತಮ್ಮ, ಶಿಲ್ಪಾ ಜಗದೀಶ್ ಸೇರಿದಂತೆ ಸಾಕಷ್ಟು ಸಂಖ್ಯೆಯಲ್ಲಿ ಕವಿಗಳು, ಸಾಹಿತ್ಯಾಸಕ್ತರು ಭಾಗವಹಿಸಿದ್ದರು.

ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button