🔥BREAKING NEWS🔥🚨ವಿಶೇಷ ವರದಿ🚨 💥ಶಾಸ್ತ್ರೋಕ್ತ ಸೇವೆಯ ಹೊಸ ಕ್ರಾಂತಿ, ಸಾಸ್ತಾನದ ಮಣ್ಣಲ್ಲಿ – ಉಚಿತ ಆಂಬ್ಯುಲೆನ್ಸ್ ಧಮಾಕ..!💥
ಉಡುಪಿ/ಸಾಸ್ತಾನ ಆ.13

ಗಲ್ಲಿ-ಗಲ್ಲಿಗಳಲ್ಲಿ ಈಗ ಒಂದೇ ಮಾತು, ಒಂದೇ ಸುದ್ದಿ. ಹಸಿದವನಿಗೆ ಅನ್ನ, ಆಪತ್ತಿನಲ್ಲಿದ್ದವನಿಗೆ ಆಸರೆ—ಈ ಮಾತನ್ನು ನಾವು ಪತ್ರಿಕೆಗಳಲ್ಲಿ ದಿನವೂ ಓದುತ್ತೇವೆ, ಆದರೆ ಅನುಭವಿಸುವುದು ಅಪರೂಪ. ಅಂತಹ ಅಪರೂಪದ ಕರುಣೆಯ ಕಥೆಯೊಂದು ಈಗ ಸಾಸ್ಥಾನದ ಅಂಗಳದಲ್ಲಿ ಜೀವ ತಳೆದಿದೆ!
ಅದು ಬರಿ ಆಂಬ್ಯುಲೆನ್ಸ್ ಅಲ್ಲ;-
ಸಾವು-ಬದುಕಿನ ನಡುವೆ ಹೋರಾಡುವ ಕಣ್ಣೀರಿಗೆ ಒರೆಸುವ ಕೈ.
‘A 2 Z Scrap’ ಸಂಸ್ಥೆಯ ಬೆನ್ನೆಲುಬಿನ ಸಹ ಭಾಗಿತ್ವದಲ್ಲಿ ‘ಸೌಹಾರ್ದ ಟ್ರಸ್ಟ್ ಸಾಸ್ಥಾನ’ ಕಟ್ಟಿರುವ ಈ ಅಪ್ರತಿಮ ಸೇವಾ ಕಲ್ಪನೆ, ಅಗಸ್ಟ್ 15ರ ಸ್ವತಂತ್ರೋತ್ಸವದ ಶುಭಗಳಿಗೆಯಲ್ಲಿ ಲೋಕಾರ್ಪಣೆ ಗೊಳ್ಳಲು ಸಜ್ಜಾಗಿದೆ.

🚨 ಏನಿದು ಘಟನೆ? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್..!
ಬಡವನಿಗೆ ಅರ್ಧ ರಾತ್ರಿಯಲ್ಲಿ ಹುಷಾರಿಲ್ಲ ಅಂದರೆ ಸಾಕು, ಟ್ಯಾಕ್ಸಿಯವನಿಗೆ ಕೈ ಮುಗಿದು, ಖಾಸಗಿ ಆಂಬ್ಯುಲೆನ್ಸ್‌ಗೆ ಜೇಬು ಖಾಲಿ ಮಾಡಬೇಕಾದ ಅಸಹಾಯಕ ಸ್ಥಿತಿ ನಮಗಿನ್ನೂ ಹೊಸದಲ್ಲ.
ಈ ಕ್ರೂರ ವ್ಯವಸ್ಥೆಗೆ ಸರಿಯಾದ ಉತ್ತರ ಕೊಡಲು ಸೌಹಾರ್ದ ಟ್ರಸ್ಟ್ ರಂಗಕ್ಕಿಳಿದಿದೆ. ದಿನದ 24 ಗಂಟೆಯೂ, ವಾರದ 7 ದಿನವೂ ಉಚಿತವಾಗಿ ಓಡಾಡುವ “ಸೌಹಾರ್ದ ಆಂಬ್ಯುಲೆನ್ಸ್” ಸೇವೆ ಈಗ ಸಾಸ್ಥಾನ ನಿವಾಸಿಗಳ ನೆರವಿಗೆ ಬರಲಿದೆ.
ದಿನಾಂಕ & ಸ್ಥಳ:-
15-08-2026, ಶನಿವಾರ ಬೆಳಿಗ್ಗೆ 9.30ಕ್ಕೆ
ಸ್ಥಳ:-
ಶಿವರಾಮ ಶೆಟ್ಟಿ ಆದರ್ಶ ಐಸ್‌ಪ್ಲಾಂಟ್ ಕಂಪೌಂಡ್ ಸಾಸ್ತಾನ , ಪಾಂಡೇಶ್ವರ

🏆 ಧೂಳೆಬ್ಬಿಸಲಿದೆ ಕ್ರೀಡಾಕೂಟ ಮತ್ತು ಸನ್ಮಾನದ ಸಂಭ್ರಮ..!
ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ಮತ್ತು ಆಂಬ್ಯುಲೆನ್ಸ್ ಉದ್ಘಾಟನೆ ಮಾತ್ರವಲ್ಲ:-
ಮಧ್ಯಾಹ್ನ 12 ಗಂಟೆ ಯಾಗುತ್ತಿದ್ದಂತೆ ಅಲ್ಲಿ ರಕ್ತ ಕುದಿಯುವ ಕ್ರೀಡಾ ಸಂಭ್ರಮ ಶುರುವಾಗಲಿದೆ!
local ಮಣ್ಣಿನ ಗಂಡು ಮಕ್ಕಳಿಗೆ ಹಗ್ಗಜಗ್ಗಾಟ ಮತ್ತು ಕಬಡ್ಡಿ ಪಂದ್ಯಾಟಗಳನ್ನು ಆಯೋಜಿಸಲಾಗಿದ್ದು, ಇಡೀ ಸಾಸ್ಥಾನವೇ ಈ ರೋಮಾಂಚನಕ್ಕೆ ಕಾಯುತ್ತಿದೆ. ಇದೇ ವೇದಿಕೆಯಲ್ಲಿ ಸಮಾಜಕ್ಕಾಗಿ ರಕ್ತ,

ಬೆವರು ಹರಿಸಿದ ಮೂವರು ಸಾಧಕರಿಗೆ ಗೌರವದ ಸನ್ಮಾನ ನೆರವೇರಲಿದೆ:-
ಶ್ರೀ ಬಿ.ಕೆ. ಬಿಜೂರು (ನಿವೃತ್ತ ಪಿ.ಎಸ್.ಐ.) – ಖಾಕಿ ಸಮವಸ್ತ್ರದಲ್ಲಿದ್ದು ಜನ ಸೇವೆ ಮಾಡಿದ ನಿಷ್ಠಾವಂತ.
ಶ್ರೀ ನಿತ್ಯಾನಂದ ಒಳಕಾಡು (ಸಮಾಜ ಸೇವಕ) – ಅನಾಥ ಶವಗಳಿಗೆ ಬಂಧುವಾಗಿ, ಬೀದಿ ಬದಿಯ ಜೀವಗಳಿಗೆ ಆಸರೆಯಾದ ಕರುಣಾಮಯಿ.

ಶ್ರೀ ಈಶ್ವರ್ ಮಲ್ಪೆ (ಸಮಾಜ ಸೇವಕ) – ಆಳ ಸಮುದ್ರದ ಆಪತ್ಬಾಂಧವ, ಜೀವ ಉಳಿಸುವ ಧೀರ.
📞 ತುರ್ತು ಪರಿಸ್ಥಿತಿಯಲ್ಲಿ ನೆರವಾಗುವ ಸಂಪರ್ಕ ಸಂಖ್ಯೆಗಳು:-
ಆಪತ್ತಿನಲ್ಲಿರುವಾಗ ತಡ ಮಾಡಬೇಡಿ,

ಈ ಸಂಖ್ಯೆಗಳನ್ನು ತಕ್ಷಣವೇ ಸೇವ್ ಮಾಡಿ ಕೊಳ್ಳಿ:-
* 📲 8867075108
* 📲 9845338044
* 📲 9986369067
* 📲 9741421973
ಶುಭ ಕೋರುವವರು:-
ಶ್ರೀ ಸಂಕಪ್ಪ ಎ. (ವಕೀಲರು, ಉಡುಪಿ) ಹಾಗೂ ಸೌಹಾರ್ದ ಟ್ರಸ್ಟ್‌ನ ಗೌರವಾಧ್ಯಕ್ಷರು, ಕಾರ್ಯದರ್ಶಿ, ಉಪಾಧ್ಯಕ್ಷರು, ಸಲಹೆಗಾರರು ಮತ್ತು ಕಳಕಳಿಯ ಸಮಸ್ತ ಸದಸ್ಯರು.ಜನರ ಕಣ್ಣೀರು ಒರೆಸುವ ಈ ಮಹತ್ಕಾರ್ಯಕ್ಕೆ ಸಾಸ್ಥಾನದ ಸಮಸ್ತ ಜನತೆ ಸಾಕ್ಷಿಯಾಗಲಿದ್ದಾರೆ. ಆಗಸ್ಟ್ 15ರಂದು ನೀವೂ ಬನ್ನಿ, ಸೇವೆಯ ಈ ಬೃಹತ್ ಕ್ರಾಂತಿಯಲ್ಲಿ ಭಾಗಿಗಳಾಗಿ..!
ವರದಿ:ಆರತಿ.ಗಿಳಿಯರು.ಉಡುಪಿ

