“ಭಾರತ ಮಾತೆಗೆ ನಮಿಸುವೆ”…..

ಭಾರತ ಮಾತೆಗೆ ವಂದನೆ


ಸ್ವಾತಂತ್ರ್ಯಸಿರಿ ಸವಿಯುವೆ
ಮಹಿನಿಯರಿಗೆ ಅಭಿನಂದನೆ
ದೇಶ ರಕ್ಷಕ ಸೈನಿಕರಿಗೆ ನಮಿಸುವೆ
ಅನ್ನದಾತ ಭಾಗ್ಯದಾತನಿಗೆ ನೆನೆಯುವೆ
ಕೇಸರಿ ಬಿಳಿ ಹಸಿರು ತ್ಯಾಗ ನಿಶ್ವಾರ್ಥ
ಸಮೃದ್ಧಿಯು
ಸರಳ ನೀತಿ ನಿಯಮ ನ್ಯಾಯದ ಅಶೋಕ
ಚಕ್ರವು
ತ್ರಿವರ್ಣ ಧ್ವಜ ಬಾನೆತ್ತರದಿ ಹಾರಿಸುತ
ನಲಿಯುವೆ
ಸಮನಾತೆ ಮಾನವೀಯತೆ ಸಂವಿಧಾನ
ಪಾಲಿಸುವೆ ಭಾಷೆ ಸಂಸೃತಿ ಕವಿಜನ ಕುಲಜರ
ದೇಶಗೀತೆ ಹಾಡುವೆ ನಿತ್ಯ ಹಸಿರು ಸಿರಿಯ
ಬೆಳಸುತ ಬಾಳುವೆ
ನೊಂದವರ ಅವಶ್ಯ ಇರುವಂಗೆ ನನ್ನಲಿರುವ
ಸಹಾಯವ ನೀಡುವೆ
ಮಕ್ಕಳ ಹಿರಿಯರ ಅನುಭವಿಕರ ಕಥೆ ಕೇಳುವೆ
ಸಕಲ ಜೀವರಾಶಿಗಳ ನಲಿವಿಗೆ ಉಳಿವಿಗೆ
ಶ್ರಮಿಸುವೆ
ದೇಶ ಸೇವೆ ಈಶ ಸೇವೆ ಸದಾ ನೆನಪಿಡುವೆ
ಭಾರತಾಂಬೆ ಜಯ ಘೋಷ ಜಗದಲಿ
ಹರಡುವೆ
ಭಾರತ ಮಾತೆಗೆ ಅನವರತ ತಲೆ ಎತ್ತಿ
ನಮಿಸುವೆ
ವಂದೇ ಮಾತರಂ ಜೈಹಿಂದ್ ವಿಶ್ವದಿ ಸಾರುವೆ
ಭಾರತಾಂಬೆಯ ಮಡಿಲಲಿ ಸದಾ “ಸ್ವಾತಂತ್ರ್ಯ
ಜ್ಯೋತಿ ಎಂದೆಂದು ಬೆಳಗುತಿರಲಿ”
ಶ್ರೀ ಸುರೇಶ ಶಂಕ್ರೆಪ್ಪ ಅಂಗಡಿ
ದೇಶಂಸು ದೇವರ ಹಿಪ್ಪರಗಿ
