BREAKING NEWS : ಜಾತಿ ಆಧಾರದಲ್ಲಿ ಕಾಂಗ್ರೆಸ್ ನಲ್ಲಿ ಸಿಎಂ ಆಯ್ಕೆ ನಡೆಯಲ್ಲ , ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್.
ಬಾಗಲಕೋಟೆ :
ಜಾತಿ ಆಧಾರದಲ್ಲಿ ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಆಯ್ಕೆ ಮಾಡಲ್ಲ ಎಂದು ಮಾಜಿ ಡಿಸಿಎಂ ಡಾ.ಜಿ. ಪರಮೇಶ್ವರ್ ಹೇಳಿಕೆ ನೀಡಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಅನಗವಾಡಿ ಗ್ರಾಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಲ್ಲಿ ಜಾತಿಯಾಧರದಲ್ಲಿ ಸಿಎಂ ಆಯ್ಕೆ ಮಾಡಲ್ಲ. ಆ ಕಾಲಕ್ಕೆ ಯಾರು ಸಮರ್ಥರಿದ್ದಾರೋ ಅವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಇನ್ನು ದಲಿತ ಸಿಎಂ ಆಗಬೇಕೆಂದು ಸಮುದಾಯದವರು ಅಭಿಲಾಷೆ ಪಡುತ್ತಾರೆ. ಅವರುಆಸೆ ಪಡುವುದು ಸಹಜ, ಅದನ್ನು ತಡೆಯಲುಸಾಧ್ಯವಿಲ್ಲ. ದುರ್ದೈವ ಅಂದ್ರೆ ಈಗ ಜಾತಿ ಆಧಾರದಮೇಲೆ ರಾಜಕೀಯ ನಿಂತಿದೆ ಎಂದು ಹೇಳಿದ್ದಾರೆ.