ರೆಡ್ಡಿ ರಾಜಕೀಯ ಶುರು..!
ಜನಾರ್ಧನ್ ರೆಡ್ಡಿ ರಾಜಕೀಯ ಗೇಮ್ ಆರಂಭವಾಗಿದ್ದು, ಗಡಿನಾಡು ಬಳ್ಳಾರಿಯಲ್ಲಿ ಬಿಜೆಪಿಯ ಮೊದಲ ವಿಕೆಟ್ ಪತನವಾಗಿದೆ. ಬಳ್ಳಾರಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ದಮ್ಮೂರ ಶೇಖರ್ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ನೀಡಿರುವ ಅವರು, ಶೀಘ್ರದಲ್ಲೇ ರೆಡ್ಡಿ ಅವರೊಂದಿಗೆ ಕೈಜೋಡಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು, ಬಿಜೆಪಿ ಪಕ್ಷದಿಂದ ಬೇಸತ್ತು ಹೊರನಡೆದಿರುವ ರೆಡ್ಡಿ, ‘ಕಲ್ಯಾಣ ರಾಜ್ಯ ಪ್ರಗತಿ ಪಕ್ಷ’ ವನ್ನು ಇತ್ತೀಚಿಗೆ ಘೋಷಣೆ ಮಾಡಿದ್ದರು.