ಪ್ರಧಾನಿ ಸಹೋದರನ ಕಾರು ಅಪಘಾತ.!
ಮೈಸೂರು :
ಇಂದು ಮಧ್ಯಾಹ್ನ ಕರ್ನಾಟಕದ ಮೈಸೂರು ತಾಲೂಕಿನ ಕಡಕೋಳ ಬಳಿ ಪ್ರಧಾನಿ ನರೇಂದ್ರ ಮೋದಿಯವರ ಕಾರು ಅಪಘಾತಕ್ಕೀಡಾಗಿ ಅವರ ಸಹೋದರ ಪ್ರಹ್ಲಾದ್ ಮೋದಿ ಗಾಯಗೊಂಡಿದ್ದಾರೆ.ಮಧ್ಯಾಹ್ನ 2 ಗಂಟೆ ಸುಮಾರಿಗೆ ಪ್ರಹ್ಲಾದ್ ಮೋದಿ ಅವರ ಬೆಂಜ್ ಕಾರ್ ಬಂಡೀಪುರಕ್ಕೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ.
ಪ್ರಹ್ಲಾದ್ ಮೋದಿ ಅವರು ಪತ್ನಿ, ಮಗ, ಸೊಸೆ ಮತ್ತು ಮೊಮ್ಮಗನೊಂದಿಗೆ ಮರ್ಸಿಡಿಸ್ ಬೆಂಜ್ ಕಾರಿನಲ್ಲಿ ಬಂಡೀಪುರಕ್ಕೆ ತೆರಳುತ್ತಿದ್ದ ವೇಳೆ ಮಧ್ಯಾಹ್ನ 2 ಗಂಟೆ ಸುಮಾರಿಗೆ ಡಿವೈಡರ್‌ಗೆ ಡಿಕ್ಕಿ ಹೊಡೆದಿದ್ದಾರೆ. ಅಪಘಾತ ಸಂಭವಿಸಿದಾಗ ಅವರ ಬೆಂಗಾವಲು ಪಡೆ ಕೂಡ ಅವರೊಂದಿಗೆ ಪ್ರಯಾಣಿಸುತ್ತಿತ್ತು.

ಪ್ರಹ್ಲಾದ್ ಮೋದಿಯವರ ಮೊಮ್ಮಗನ ಕಾಲಿಗೆ ಮೂಳೆ ಮುರಿತವಾಗಿದ್ದು ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಮೈಸೂರಿನ ಜೆಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ್ದ ಮೈಸೂರು ಎಸ್ಪಿ ಸೀಮಾ ಲಾಟ್ಕರ್, ಗಾಯಾಳುಗಳನ್ನು ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲದೆ ಮುಖ್ಯಮಂತ್ರಿಯವರ ಕಾರ್ಯಾಲಯಕ್ಕೆ ಮಾಹಿತಿ ನೀಡಿದ್ದಾರೆ.