ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ದಿಢೀರ್ ಕುಸಿತ ; ಚಿನ್ನ, ಬೆಳ್ಳಿ ಕೊಳ್ಳಲು ಇದೇ ಸೂಕ್ತ ಸಮಯ…!
ದಿನೇ ದಿನೇ ಚಿನ್ನದ ದರದಲ್ಲಿ ಏರಿಕೆಯಾಗುತ್ತಿದ್ದು ಇಂದು ಏಕಾಏಕಿ ಕುಸಿದಿದೆ. ಇತ್ತೀಚೆಗೆ ಚಿನ್ನದ ದರ ಏರಿಕೆ ಗ್ರಾಹಕರಿಗೆ ಭಾರೀ ಬಿಸಿ ಮುಟ್ಟಿಸಿತ್ತು. ಈಗ ದರ ಇಳಿಕೆ ಚಿನ್ನ ಪ್ರಿಯರಿಗೆ ಸಂತಸ ತಂದಿರುವುದಂತು ನಿಜ.
ಹೌದು ನಿರಂತರವಾಗಿ ಏರುತ್ತಲೇ ಇದ್ದ ಚಿನ್ನದ ದರ ಬಜೆಟ್ ಮಂಡನೆ ಬಳಿಕವಂತೂ ಸಾರ್ವಕಾಲಿಕ ದಾಖಲೆ ಸೃಷ್ಟಿಸಿತ್ತು.
ಏಕಾಏಕಿ ಚಿನ್ನದ ದರದಲ್ಲಾದ ಬದಲಾವಣೆ ಖರೀದಿದಾರರಿಗೆ ಭಾರೀ ನಿರಾಸೆಯುಂಟು ಮಾಡಿತ್ತು. ಚಿನ್ನದ ದರ ಕುಸಿಯಬಹುದು, ಬಳಿಕ ಇದನ್ನು ನಾವು ಖರೀದಿಸಬಹುದು ಎಂದು ಭಾವಿಸಿದ್ದವರಿಗೆ ಏರಿಕೆ ಭಾರೀ ಹೊಡೆತ ನೀಡಿತ್ತು.ಆದರೆ ಈಗ ಬಜೆಟ್ ಮಂಡನೆ ಬಳಿಕ ಚಿನ್ನದ ದರ ಮೊದಲ ಬಾರಿ ಕುಸಿದಿದೆ. ಇದು ಖರೀದಿದಾರರಿಗೆ ಸಂತಸ ನೀಡಿದೆ.
ಮಾರುಕಟ್ಟೆಯಲ್ಲಿ ಇಂದಿನ ಬಂಗಾರದ ದರಗಳ ಕುರಿತು ನೋಡುವುದಾದರೆ ಒಂದು ಗ್ರಾಂ (1GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ. 5,315 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) – ರೂ. 5,798 ಆಗಿದೆ. ಎಂಟು ಗ್ರಾಂ (8GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ. 42,520 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) – ರೂ. 46,384 ಆಗಿದ್ದು.
ಹತ್ತು ಗ್ರಾಂ (10GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ. 53,150 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) – ರೂ. 57,980 ಆಗಿದೆ. ನೂರು ಗ್ರಾಂ (100GM) 22 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ. 5,31,500 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) – ರೂ. 5,79,800 ಆಗಿದೆ.
ದೇಶದ ವಿವಿಧ ನಗರಗಳಲ್ಲಿ ಚಿನ್ನದ ರೇಟ್ ಹೇಗಿದೆ ಎಂದು ನೋಡುವುದಾದರೆ, ಬೆಂಗಳೂರಿನಲ್ಲಿ ಪ್ರತಿ ಹತ್ತು ಗ್ರಾಂ 22 ಕ್ಯಾರಟ್ ಬಂಗಾರದ ಬೆಲೆ ರೂ. 53,150 ಆಗಿದ್ದರೆ, ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 53,100, ರೂ. 53,100, ರೂ. 53,100 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 53,250 ರೂ. ಆಗಿದೆ.
ಚಿನ್ನದಂತೆ ಬೆಳ್ಳಿ ಬೆಲೆಯೂ ಇಳಿಕೆಯಾಗಿದೆ. ಪ್ರತಿ ಕೆಜಿ ಬೆಳ್ಳಿ ಬೆಲೆ ದರವು ಇಂದು ರೂ. 74,700ಕ್ಕೆ ಬಂದು ತಲುಪಿದೆ.
ಬೆಳ್ಳಿಯ ಬೆಲೆಯು ಅಂತಾರಾಷ್ಟ್ರೀಯ ದರಗಳು ಹಾಗೂ ಭಾರತೀಯ ರೂಪಾಯಿಯ ಡಾಲರ್ ವಿರುದ್ಧದ ಪ್ರದರ್ಶನದ ಮೇಲೆ ಹೆಚ್ಚು ಅವಲಂಬಿತವಾಗಿದೆ. ಹಾಗಾಗಿ ಇದರ ಬೆಲೆಯಲ್ಲೂ ಏರಿಳಿತಗಳನ್ನು ಕಾಣಬಹುದಾಗಿದೆ.
ಬೆಂಗಳೂರು ನಗರ ನೋಡುವುದಾದರೆ ಇಂದು ನಗರದಲ್ಲಿ ಬೆಳ್ಳಿ ಬೆಲೆಯಲ್ಲಿ ಹೆಚ್ಚಿನ ಏರಿಕೆಯಾಗಿದೆ. ಪ್ರತಿ 10gm, 100gm, 1000gm (1ಕೆಜಿ) ಬೆಳ್ಳಿ ಬೆಲೆಗಳು ಕ್ರಮವಾಗಿ ರೂ. 778, ರೂ. 7,780 ಹಾಗೂ ರೂ. 77,800 ಗಳಾಗಿವೆ. ಮಿಕ್ಕಂತೆ ದೇಶದ ಇತರೆ ಮಹಾನಗರಗಳಾದ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 77,800 ಆಗಿದ್ದರೆ, ದೆಹಲಿಯಲ್ಲಿ ರೂ. 74,700, ಮುಂಬೈನಲ್ಲಿ ರೂ. 74,700 ಹಾಗೂ ಕೊಲ್ಕತ್ತದಲ್ಲೂ ರೂ. 77,800 ಗಳಾಗಿದೆ.
- ಸೂಚನೆ :
- ಇಲ್ಲಿ ಕೊಡಲಾದ ಎಲ್ಲ ದರಗಳು ಮಾರುಕಟ್ಟೆಯ ಬೆಲೆಗಳನ್ನು ಪ್ರತಿನಿಧಿಸುತ್ತವೆ.
- GST, TCS ಹಾಗೂ ಇನ್ನಿತರೆ ಶುಲ್ಕಗಳನ್ನು ಒಳಗೊಂಡಿರುವುದಿಲ್ಲ. ನಿಖರ ಬೆಲೆಗಳಿಗಾಗಿ ನಿಮ್ಮ ಹತ್ತಿರದ ಆಭರಣದ ವ್ಯಾಪಾರಿಗಳನ್ನು ಸಂಪರ್ಕಿಸಿ.