ಕೂಡ್ಲಿಗಿ ವಿಧಾನಸಭಾ ಮತ ಕ್ಷೇತ್ರಕ್ಕೆ ಭೇಟಿ ಹಾಗೂ ಸ್ಥಳ ಪರಿಶೀಲಿಸಿದ ಚುನಾವಣೆ ಅಧಿಕಾರಿಗಳ ತಂಡ
ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣಕ್ಕೆ ಆಗಮಿಸಿದ ಮಾನ್ಯ ಚುನಾವಣಾಧಿಕಾರಿಗಳಾದ ಈರಪ್ಪ ಬಿರಾದಾರ್ ಆಯುಕ್ತರು ನಗರಾಭಿವೃದ್ಧಿಪ್ರಾಧಿಕಾರ ಹೊಸಪೇಟೆ ಹಾಗೂ ವಿಶೇಷ ಕರ್ತವ್ಯ ಅಧಿಕಾರಿಗಳು ಡಿ ಎಂ ಎಫ್ ಇವರು 96- ಕೂಡ್ಲಿಗಿ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸೆಕ್ಟರ್ ಅಧಿಕಾರಿಗಳೊಂದಿಗೆ ಮತ್ತು ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕ್ ಪಂಚಾಯತಿ ಕೂಡ್ಲಿಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಾರ್ವಜನಿಕ ಶಿಕ್ಷಣ ಇಲಾಖೆ ಕೂಡ್ಲಿಗಿ ಮತ್ತು ಮಾಸ್ಟರ್ ಟ್ರೈನರ್ಗಳಿಗೆ ತಹಶೀಲ್ದಾರ್ ಸಮ್ಮುಖದಲ್ಲಿ ಈ ದಿನ ಮಧ್ಯಾಹ್ನ 3 ಗಂಟೆಗೆ ಸಭೆಯನ್ನು ನಡೆಸಲಾಯಿತು ನಂತರ ಚುನಾವಣೆ ಅಧಿಕಾರಿಗಳು ಸರ್ಕಾರಿ ಸಂಯುಕ್ತ ಪದವಿಪೂರ್ವ ಕಾಲೇಜೆಗೆ ಭೇಟಿ ನೀಡಿ ಸ್ಟ್ರಾಂಗ್ ರೂಮ್ ಮತ್ತು ಮಾಸ್ಟರಿಂಗ್ ಹಾಗೂ ಡಿಮಾಸ್ಟರಿಂಗ್ ಸ್ಥಳವನ್ನು ಪರಿಶೀಲನೆ ಮಾಡಿದರು ಸಭೆಯಲ್ಲಿ ಮತಗಟ್ಟೆಗಳ ಮೂಲಭೂತ ಸೌಲಭ್ಯಗಳ ಬಗ್ಗೆ ಚರ್ಚಿಸಲಾಯಿತು ಈ ಸಂದರ್ಭದಲ್ಲಿ ಪ.ಪಂ.ಮುಖ್ಯಾಧಿಕಾರಿಗಳಾದ ಪೀರೋಜ್ ಖಾನ್ ಹಾಗೂ ಚುನಾವಣಾ ಸಿಬಂದಿಯಾದ ಟಿ.ಶಿವುಕುಮಾರ್ ದ್ವಿ.ದ.ಸ.ಹಾಗೂ ಈಶಪ್ಪ ಹಾಗೂ ಸಿಬಂದಿ ವರ್ಗದವರು ಇದ್ದರು*
*ವರದಿ ರಾಘವೇಂದ್ರ ಸಾಲುಮನೆ ಕೂಡ್ಲಿಗಿ*