ಮಹಿಳೆಯರಿಗೆ ಶಿಕ್ಷಣ.ಮೀಸಲಾತಿ ಹಕ್ಕು ನೀಡಿದರು. ಡಾ.ಬಿ.ಆರ್ ಅಂಬೇಡ್ಕರ್ ರವರು
ತರೀಕೆರೆ ಏ.14-
ದೇಶದಲ್ಲಿ ಎಲ್ಲಾ ಜಾತಿ, ಧರ್ಮದವರು ವಿದ್ಯಾವಂತರಾಗಬೇಕು, ಶಿಕ್ಷಣ ಪಡಿಯಬೇಕು ಎಂದು ಉಪ ವಿಭಾಗಾಧಿಕಾರಿ ಸಿದ್ಧಲಿಂಗ ರೆಡ್ಡಿ ಅವರು ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ಏರ್ಪಡಿಸಿದ್ದ ಡಾ. ಬಿಆರ್ ಅಂಬೇಡ್ಕರ್ ಅವರ 132ನೇ ಜನ್ಮ ದಿನಾಚರಣೆ ಹಾಗೂ ಬಾಬು ಜಗಜೀವನ ರಾಮ್ ರವರ ಜನ್ಮದಿನಾಚರಣೆ ಸಮಾರಂಭದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಪುತ್ತಳಿಗೆ ಪುಷ್ಪ ಹಾರ ಹಾಕಿ ನಮನವನ್ನು ಸಲ್ಲಿಸಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದರು.
ಬಾಬಾ ಸಾಹೇಬ್ ಅಂಬೇಡ್ಕರ್ ರವರು ಈ ದೇಶಕ್ಕೆ ಅತ್ಯುತ್ತಮವಾದ ಸಂವಿಧಾನವನ್ನು ನೀಡಿದ್ದಾರೆ ಹಾಗೂ ಭಾರತ ಸರ್ಕಾರವು ಭಾರತೀಯ ರಿಸರ್ವ್ ಬ್ಯಾಂಕ್ ಸ್ಥಾಪನೆಗೆ ಮುಖ್ಯ ಕಾರಣಕರ್ತರಾಗಿದ್ದರು. ರೂಪಾಯಿ ಮೌಲ್ಯವನ್ನು ಹೆಚ್ಚಿಸಿದ ಆರ್ಥಿಕ ತಜ್ಞರಾಗಿದ್ದರು,ಎಲ್ಲಾ ಜಾತಿ ಸಮಾಜದವರಿಗೂ ಸಮಾನತೆಗಾಗಿ ಹೋರಾಟ ಮಾಡಿದ್ದಾರೆ. ಇಂದು ಕೋಡ್ ಬಿಲ್ ಜಾರಿ ಮಾಡಬೇಕು ಮಹಿಳೆಯರಿಗೆ ಸಾಮಾಜಿಕ ಸಮಾನತೆ ಶಿಕ್ಷಣದ ಸಮಾನತೆ ಹಕ್ಕು ನೀಡಬೇಕೆಂದು ಹೋರಾಟ ಮಾಡಿ ಸದನದಲ್ಲಿ ಇವರು ಮಂಡಿಸಿದ ಬಿಲ್ ತಿರಸ್ಕರಿಸಿದಕ್ಕೆ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು.

ಇವರೆಂದು ಅಧಿಕಾರಕ್ಕೆ ಅಂಟಿಕೊಂಡವರಲ್ಲ. ಹಾಗೆಯೇ ಡಾ. ಬಾಬು ಜಗಜೀವನ ರಾಮ್ ರವರು ಸಹ ದೇಶದ ರೈಲ್ವೆ ಸಚಿವರಾಗಿ,ಕೃಷಿ ಸಚಿವರಾಗಿ, ಕಾರ್ಮಿಕ ಸಚಿವರಾಗಿ, ರಕ್ಷಣಾ ಸಚಿವರಾಗಿ,ಹಾಗೂ ಉಪ ಪ್ರಧಾನಮಂತ್ರಿಯಾಗಿ ಸೇವೆ ಸಲ್ಲಿಸಿ, ಹಸಿರು ಕ್ರಾಂತಿಯ ಹರಿಕಾರಾಗಿದ್ದಾರೆ ಎಂದು ಹೇಳಿದರು. ನಾಡ ಹಬ್ಬಗಳ ಸಮಿತಿ ಅಧ್ಯಕ್ಷರಾದ ತಹಶೀಲ್ದಾರ್ ಸಿ ಎಸ್ ಪೂರ್ಣಿಮಾ ರವರು ಮಾತನಾಡಿ ಶಿಕ್ಷಣದಿಂದಲೇ ಬದಲಾವಣೆ ಸಾಧ್ಯ ಎಂದು ಹೇಳಿದ ಅಂಬೇಡ್ಕರ್ ರವರು ಶಿಕ್ಷಣಕ್ಕೆ ಹೆಚ್ಚು ಮಹತ್ವವನ್ನು ನೀಡಿದ್ದರು. ಪ್ರಪಂಚದಲ್ಲಿ ಅತಿ ದೊಡ್ಡ ಪ್ರಬುದ್ಧ ಅದ್ಭುತವಾದ ಸಂವಿಧಾನ ನೀಡಿದ ಅವರು ಮಹಾನ್ ಚೇತನರು. ಸಾಮಾಜಿಕ, ಸಮಾನತೆಯ ಹರಿಕಾರರು ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಕಾರ್ಯಾ ನಿವಾಹಣಾ ಅಧಿಕಾರಿಯಾಗಿದ್ದ ಎಸ್ ಗೀತಾ ಶಂಕರ್ ರವರು ಮಾತನಾಡಿ ಅಂಬೇಡ್ಕರ್ ಅವರು ಈ ದೇಶದ ಪ್ರತಿಯೊಬ್ಬ ವಯಸ್ಕರರು ಮತದಾನ ಮಾಡಬೇಕೆಂದು ಎಲ್ಲರಿಗೂ ಮತದಾನದ ಹಕ್ಕು ನೀಡಿದ್ದಾರೆ. ಅವರ ಆಶಯದಂತೆ ಪ್ರತಿಯೊಬ್ಬರೂ ಸಹ ಮತದಾನದಲ್ಲಿ ಭಾಗವಹಿಸಬೇಕು ಎಂದು ಹೇಳಿ ಪ್ರತಿಜ್ಞೆಯನ್ನು ಬೋಧಿಸಿದರು. ಕಾರ್ಯಕ್ರಮದಲ್ಲಿ ಕ ದ ಸಂ ಸ,ರಾಜ್ಯ ಸಂಘಟನಾ ಸಂಚಾಲಕರಾದ ತರೀಕೆರೆ ಎನ್ ವೆಂಕಟೇಶ್, ಪತ್ರಕರ್ತರದ ಬಿ ಕೃಷ್ಣ ನಾಯ್ಕ, ಎಸ್ ಎನ್ ಸಿದ್ದರಾಮಯ್ಯಪ್ಪ, ಜಿ ಟಿ ರಮೇಶ್, ಎಸ್ ಕೆ ಸ್ವಾಮಿ, ಅನಂತ ನಾಡಿಗ್, ಕೆ ಆರ್ ರಮೇಶ್, ಎಪಿಎಂಸಿ ಮಾಜಿ ಅಧ್ಯಕ್ಷರಾದ ನಾಗರಾಜ್, ಸಿ ಡಿ ಪಿ ಓ ಜ್ಯೋತಿ ಲಕ್ಷ್ಮಿ, ಪುರಸಭಾ ಮುಖ್ಯ ಅಧಿಕಾರಿಯದ ಹೆಚ್ಚು ಮಹಾಂತೇಶ್, ತಹಸಿಲ್ದಾರ್ ಗ್ರೇಡ್ 2 ಗೋವಿಂದಪ್ಪ, ಶಿರಸ್ತೆದಾರ್ ಶಿವಮೂರ್ತಿ ನಾಯ್ಕ, ಮುಂತಾದವರು ಉಪಸ್ಥಿತರಿದ್ದು, ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಮಂಜುನಾಥ್ ರವರು ಸ್ವಾಗತಿಸಿ ವಂದಿಸಿದರು.
ಜಿಲ್ಲಾ ವರದಿಗಾರರು:ಎನ್ ವೆಂಕಟೇಶ್.ತರೀಕೆರೆ