ಸಾವಿರಾರು ಜನಸ್ತೋಮದ ಜೊತೆ ಭರ್ಜರಿ ಮೆರವಣಿಗೆ ಜೆಡಿಎಸ್ ಅಭ್ಯರ್ಥಿ ಪೂಜಾರಿ ಭೀಮಣ್ಣ (ಕೋಡಿಹಳ್ಳಿ)
ಕೂಡ್ಲಿಗಿ ಏ.20
ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ ಇಂದು ವಾಸವಿ ಕಲ್ಯಾಣ ಮಂಟಪದ ಮುಂಭಾಗದಿಂದ ಆಂಜನೇಯ ದೇವಸ್ಥಾನ ಪೂಜೆ ಸಲ್ಲಿಸ ಸಾವಿರಾರು ಕಾರ್ಯಕರ್ತ ಹಾಗೂ ಅಭಿಮಾನಿಗಳೊಂದಿಗೆ ಅಪಾರವಾದ ಜನಸ್ತೋಮದ ಜೊತೆ ತೆರೆದ ಎತ್ತಿನ ಬಂಡಿಯಲ್ಲಿ ಮೆರವಣಿಗೆ ಮೂಲಕ ಹೊರೆ ಹೊತ್ತ ಮಹಿಳೆಯೊಂದಿಗೆ ಪ್ರಮುಖ ರಸ್ತೆಯಲ್ಲಿ ಆಡಳಿತ ಸೌಧದ ವರೆಗೂ ಮೆರವಣಿಗೆ ಮೂಲಕ ಆಗಮಿಸಿ ನಾಮಪತ್ರವನ್ನು ಜೆಡಿಎಸ್ ಅಭ್ಯರ್ಥಿ ಪೂಜಾರ್ ಭೀಮಣ್ಣ (ಕೋಡಿಹಳ್ಳಿ )ಇವರು ಮಾನ್ಯ ಚುನಾವಣೆ ಅಧಿಕಾರಿಗಳಾದ ಈರಪ್ಪ ಬಿರಾದಾರ್ ಇವರಿಗೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿಗಳಾದ ಟಿ. ಜಗದೀಶ್ ಹಾಗೂ ಸಿಬ್ಬಂದಿ ವರ್ಗದವರು ಸಿದ್ದು ,ಮತ್ತು ಅಭ್ಯರ್ಥಿಯ ಬೆಂಬಲಿಗರಾದ ಜಿಲ್ಲಾ ಪರಿಶಿಷ್ಟ ಪಂಗಡದ ಜಿಲ್ಲಾಧ್ಯಕ್ಷರಾದ ಗುಪ್ಪಲ್ ಕಾರಪ್ಪ ಬ್ಯಾಳಿ ವೀಜಯ ಕುಮಾರ ಗೌಡ ತಾಲೂಕು ಅಧ್ಯಕ್ಷರು,ಸಚೀನ್ ಪ.ಪಂ.ಸದಸ್ಯರು,ಸಿರಿಬಿ ಮಂಜನಾಥ ಪ.ಪಂ.ಸದಸ್ಯರು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿದರು, ಹಾಗೂ ಕಾರ್ಯಕರ್ತ ಜೊತೆ ಹೊರ ಬಂದ ಬಳಿಕ ಮಾಧ್ಯಮದ ಜೊತೆ ಮಾತನಾಡಿ ಕೂಡ್ಲಿಗಿ ತಾಲೂಕು ಬಹಳ ಹಿಂದೂಳಿದ ತಾಲೂಕು ಎಂಬ ಹಣೆ ಪಟ್ಟಿ ಕಟ್ಟಿರುವುದರಿಂದ ಎಲ್ಲಾ ಪಕ್ಷಗಳನ್ನು ನೋಡಿದ್ದು ಆಯ್ತು ಈ ಬಾರಿ ಜೆಡಿಎಸ್ ನಿಂದ ಕೂಡ್ಲಿಗಿ ತಾಲೂಕು ಬದಲಾವಣೆಯನ್ನು ಬಯಸುತ್ತಿದ್ದಾರೆ ತಾಲೂಕನ ಜನ ಇಂದು ನಮ್ಮ ಬೆಂಬಲಕ್ಕೆ ಅತಿ ಹೆಚ್ಚಾಗಿ ರೈತರು ಮತ್ತು ಮಹಿಳೆಯರು ಹಾಗೂ ಯುವಕರುಗಳು ಭಾಗವಹಿಸಿ ಜನ ಸಾಗರದಂತೆ ಹರಿದು ಬಂದಿದ್ದಾರೆ ಎಂದು ತುಂಬಾ ಸಂತೋಷದಿಂದ ಈ ದಿನವೆ ಗೆಲುವಿನಹಾರ ಎಂದು ಹೂವ್ವಿನಹಾರ ಹಾಕುತ್ತಿದ್ದಾರೆ. ಎಂದು ಸಂತಸ ವ್ಯಕ್ತಪಡಿಸಿತ್ತಾ ತಿಳಿಸಿದರು.ಈ ಸಂದರ್ಭದಲ್ಲಿ ನೂರಾರು ಕರ್ಯಕರ್ತರು ಹಾಗೂ ಬೆಂಗಲಿಗರು ಇದ್ದರು
ಜಿಲ್ಲಾ ವರದಿಗಾರರು:ರಾಘವೇಂದ್ರ. ಸಾಲುಮನೆ. ಕೂಡ್ಲಿಗಿ