ಅಮೀನಗಡದಲ್ಲಿ ದಾನ, ಧರ್ಮದ ಪವಿತ್ರ ಹಬ್ಬ ರಂಜಾನ್

ಒಂದು ತಿಂಗಳ ಕಾಲ ಮುಸ್ಲಿಮರು ಉಪವಾಸ ವೃತ ಆಚರಿಸಿದ್ದಾರೆ. ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಅನ್ನ, ನೀರು ಬಿಟ್ಟು ಉಪವಾಸ ವ್ರತ ಆಚರಿಸುತ್ತಾರೆ. ಉಪವಾಸ (ರೋಜಾ) ಮಾತ್ರವಲ್ಲದೇ ದಾನ (ಝಕಾತ್) ನಮಾಜ್, ಕುರಾನ್ ಪಠನ, ತರಾವಿ ಮಾಡುವ ಮೂಲಕ ದೇವರನ್ನು ( ಅಲ್ಲಾಹ್ ನನ್ನು ಸ್ಮೃತಿಸಲಾಗುತ್ತದೆ.

ಇಸ್ಲಾಮಿಕ್ ಕ್ಯಾಲೆಂಡರ್ ಪ್ರಕಾರ, ಇದು ಒಂಬತ್ತನೇ ತಿಂಗಳು. ಲೂನಾರ್ ಕ್ಯಾಲೆಂಡರ್ ಅನ್ನು ಇಸ್ಲಾಂ ಧರ್ಮದವರು ಅನುಸರಿಸುತ್ತಾರೆ. ಕಾರಣ, ಅದರಲ್ಲಿ ರಂಜಾನ್ ದಿನಾಂಕ ಬದಲಾಗುತ್ತಿರುತ್ತದೆ. ಈ ಆಚರಣೆಯ ನಂಬಿಕೆಯಂತೆ, ಅಲ್ಲಾನೊಂದಿಗಿನ ತಮ್ಮ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಲು, ಉಪವಾಸ ಎಂಬುದು ಆತ್ಮಸ್ಥೆರ್ಯ ಹೆಚ್ಚಿಸಲು, ಹಸಿವಿನ ಮಹತ್ವ ಮತ್ತು ಅದೃಷ್ಟ ಸಂಪಾದನೆ ಮಾಡಲು ಶ್ರದ್ಧೆಯಿಂದ ಉಪವಾಸವನ್ನು ಆಚರಿಸುತ್ತಾರೆ.

ತಿಂಗಳ ಪ್ರತಿಯೊಂದು ದಿನ ಮುಸ್ಲಿಮರು, ಈ ಹಬ್ಬದ ಆಚರಣೆ ಮೂಲಕ ಅಲ್ಲಾನಲ್ಲಿ ನಂಬಿಕೆ ಇಟ್ಟುಕೊಳ್ಳುತ್ತಾರೆ. ಪ್ರಾರ್ಥನೆ, ಕುರಾನ್ ಪಠಣ ಮತ್ತು ದಾನ-ಧರ್ಮದಲ್ಲಿ ತೊಡಗುವುದು ಮಾತ್ರವಲ್ಲದೇ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ತಮ್ಮ ಒಡನಾಟವನ್ನು ಇನ್ನಷ್ಟು ಗಟ್ಟಿಯಾಗಿಸುತ್ತಾರೆ. ಸೂರ್ಯೋದಯದಕ್ಕಿಂತ ಮುಂಚೆ ಕುಟುಂಬ ಸದಸ್ಯರೊಂದಿಗೆ ಸೇವಿಸುವ ಆಹಾರ ವೇಳೆ (ಸಹಿರಿ) ಹಾಗೂ ಸೂರ್ಯಾಸ್ತದ ವೇಳೆ ಉಪವಾಸ ಮುರಿಯುವ ವೇಳೆ (ಇಪ್ತಾರ್) ಉಪವಾಸದ ಪ್ರಮುಖ ಸಮಯ ಈಫ್ತಿಯಾರ ವೇಳೆಯಲ್ಲಿ ಎಲ್ಲರೂ ಒಂದೇ ಕಡೆ ಸೇರಿ ಮಸೀದಿಗಳಲ್ಲಿ, ಕೆಲವರು ಮನೆಗಳಲ್ಲಿ ಸೇರಿ ಖರ್ಜೂರ, ಬಾಳೆ ಹಣ್ಣು, ಕಲ್ಲಂಗಡಿ ಸೇರಿದಂತೆ ಎಲ್ಲಾ ಬಗೆಯ ಹಣ್ಣು ಹಂಪಲು ತಂದು ಒಂದೆಡೆ ಸೇರಿಸಿ ಸಾಮೂಹಿಕವಾಗಿ ಸೇವಿಸುವ ಮೂಲಕ ಉಪವಾಸ ವ್ರತ ಮುಗಿಸುತ್ತಾರೆ. ಆ ಮೂಲಕ ಬಡವ, ಶ್ರೀಮಂತ ಉನ್ನತ, ಕನಿಷ್ಟ ಎಂಬ ಬೇಧಬಾವ ಮರೆತು ಮಾನವಿಯತೆ ಮೆರೆಯುವ ಮೂಲಕ ಸಂಬಂಧವನ್ನು ಗಟ್ಟಿಗೊಳಿಸಿಕೊಳ್ಳುತ್ತಾರೆ.

ರಂಜಾನಿನ ಕೊನೆಯ ಹತ್ತು ದಿನಗಳಲ್ಲಿ ಪ್ರವಾದಿ ಮೊಹಮ್ಮದ್‌ರನ್ನು ಕುರಾನ್ ಮೂಲಕ ನೆನಪಿಸಿಕೊಳ್ಳುವುದು ಎಂಬ ನಂಬಿಕೆ ಇದೆ.

ಸದ್ಕ ಫಿತ್ರ : ಮುಸ್ಲಿಮರು ಆಸ್ತಿ ಒಳ್ಳವರು ಸದ್ಕ ಫಿತರ್ ಅಂದರೆ

ಮುಸ್ಲಿಮರು ಕುಟುಂಬದ ಪ್ರತಿ ಸದಸ್ಯರು ತಲಾ 2 ಕೆಜಿ ಗೋಧಿ ಅಥವಾ ಅಕ್ಕಿ ಇತರೆ ಧಾನ್ಯವನ್ನು ಒಟ್ಟು ಕುಟುಂಬ ಸದಸ್ಯರ ಲೆಕ್ಕದಲ್ಲಿ ತಲಾ 2 ಕೆಜಿ ದಾನ ಮಾಡಬೇಕು. ಇದು ಈದ್ ಉಲ್ ಫಿತರ್ ನಮಾಜ್ ಮಾಡುವ ಮುನ್ನ ಕಡ್ಡಾಯವಾಗಿ ನೀಡಬೇಕು. ಇಸ್ಲಾಂ ನಲ್ಲಿ ಬಡ, ನಿರ್ಗತಿಕರಿಗೆ ಸಹಾಯ ಮಾಡಲು ಕಡ್ಡಾಯವಾಗಿ ಈ ನಿಯಮ ರೂಪಿಸಲಾಗಿದೆ ಎಂದು ತಿಳಿಸಿದರು.

ಬಡವರಿಗೆ ದಾನ ಕಡ್ಡಾಯ

ಈದ್ ಉಲ್ ಫಿತರ್’ (ರಂಜಾನ್ ಹಬ್ಬ) ದಂದು ಇದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡುತ್ತಾರೆ. ಇದಕ್ಕಾಗಿ ಚಿಕ್ಕ ಮಕ್ಕಳು ಮಹಿಳೆಯರು ವಯೋ ವೃದ್ಧರಾದಿಯಾಗಿ ಎಲ್ಲರೂ ಹೊಸ ಬಟ್ಟೆ ಖರೀದಿಸುತ್ತಾರೆ. ಅಲ್ಲದೇ ಹಾಲಿನಿಂದ ತಯಾರಿಸುವ ಸುಖುರ್ಮಾ (ದೂದ್ ಖುರ್ಮಾ) ಸಿಹಿ ಪಾಯಸ ಮಾಡಿ ಸೇವಿಸುತ್ತಾರೆ.

ತಯಾರಿ ನಡೆಸುತ್ತಾರೆ. ಹೊಸ ಬಟ್ಟೆ ಚಪ್ಪಲಿ ಸುಗಂದ ದ್ರವ್ಯ ಹಾಗೂ ಇತರೆ ವಸ್ತು ಖರೀದಿಸುತ್ತಾರೆ. ಝಕಾತ್: ಇಸ್ಲಾಂ ನಲ್ಲಿ ಝಕಾತ್ ಗೆ ಮುಖ್ಯ ಸ್ಥಾನವಿದೆ. ಝಕಾತ್ ಅಂದರೆ ದಾನ ಎಂದರ್ಥ. ಪ್ರತಿ ಮುಸ್ಲಿಂ 7.5 ತೊಲೆ ಬಂಗಾರ 52.5 ತೊಲೆ ಬೆಳ್ಳಿ ಇದ್ದವರು ಅದರ ಪಾಲಿನಲ್ಲಿ ಶೇ 25 ರಷ್ಟು ದಾನ ಮಾಡಬೇಕು. ಅಥವಾ ಇಷ್ಟು ಮೊತ್ತದ ನಗದು ಹಣವಿದ್ದರೇ ಅದರ ಶೇ 2.5 ಭಾಗದಷ್ಟು ದಾನ ಮಾಡಬೇಕು.

ಇದು ಮುಸ್ಲಿಮರು ಸ್ವಯಂ ಆಗಿ ತಮ್ಮ ಆಸ್ತಿಯ ಭಾಗದಲ್ಲಿ ತೆರಿಗೆ ರೂಪದಲ್ಲಿ ಬಡವರಿಗೆ ದಾನ ಮಾಡುವುದಾಗಿದೆ. ಇದು ಕಡ್ಡಾಯ. ಆದರೆ ಬಡವರು ಸಾಲಭಾದೆ ಉಳ್ಳವರು ಝಕಾತ್ ನಿಂದ ವಿನಾಯಿತಿ ಇದೆ ಎಂದು ಇಮಾಮ್ ತಿಳಿಸಿದರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button