ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಒಟ್ಟು 12.ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು. 4 ಅಭ್ಯರ್ಥಿ ತಮ್ಮ ಉಮೇದುವಾರಿಕೆಯನ್ನು ವಾಪಸ್ ತೆಗೆದುಕೊಂಡಿದ್ದಾರೆ
ಕೂಡ್ಲಿಗಿ ಏ.24

ವಿಜಯನಗರ ಜಿಲ್ಲೆ ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರ ಚುನಾವಣೆಯ ಕ್ಷೇತ್ರದಿಂದ ಕರ್ನಾಟಕ ವಿಧಾನ ಸಭೆ ನಡೆಯತಕ್ಕ ಚುನಾವಣೆ 2023 ರ ಉಮೇದು ವಾರಿಕೆಗಳನ್ನು ಹಿಂಪಡೆಯುವ ಇಂದು ಕೊನೆಯ ದಿನಾಂಕವಾಗಿದ್ದು ಚುನಾವಣಾ ನಾಮಪತ್ರವನ್ನು ಒಟ್ಟು 12 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು ,ಇವರಲ್ಲಿ ಈ ಉಮೇದುವಾರನು ತಮ್ಮ ಏಜೆಂಟ್ ಮೂಲಕ ನಮೂನೆ- 5 ರ 1)ಬಂಗಾರಿ ಹನುಮಂತು ಹಾಗೂ 2)ರಾಘವೇಂದ್ರ ಗುರಿಕಾರ್ 3)ಕೆ .ಲಲಿತಾ , 4)ಬಿ. ಹುಲಿಕುಂಟೆಪ್ಪ ಹೀಗೆ ನಾಲ್ಕು ಜನ ಉಮೇದುವಾರಿಕೆಗಳು ಕ್ರಮಬದ್ಧವಾಗಿ ನಾಮನಿರ್ದೇಶನ ಮಾಡಲ್ಪಟ್ಟ ಉಮೇದುವಾರರು ಈ ದಿನ ತಮ್ಮ ಉಮೇದುವಾರಿಕೆಯನ್ನು ವಾಪಸ್ ತೆಗೆದುಕೊಂಡಿದ್ದಾರೆ, 96- ಕೂಡ್ಲಿಗಿ ವಿಧಾನಸಭಾ ಕ್ಷೇತ್ರ ಚುನಾವಣೆ ಅಧಿಕಾರಿಗಳು ಪತ್ರಿಕೆಗೆ ತಿಳಿಸಿರುತ್ತಾರೆ. ಈ ಬಾರಿ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದಲ್ಲಿ ಎಂಟು ಜನ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದು ತಮ್ಮ ತಮ್ಮ ಗೆಲುವಿಗಾಗಿ ಅಭ್ಯರ್ಥಿಗಳು ಜಿದ್ದಾಜಿದ್ದಿಯಲ್ಲಿದ್ದು ಮತದಾರರ ಬಳಿ ತಮ್ಮ ತಮ್ಮ ಪ್ರಣಾಳಿಕೆಗಳನ್ನು ತಿಳಿಸುವುದರೊಂದಿಗೆ ಮತದಾರರ ಮನಸ್ಸನ್ನು ಸೆಳೆಯುವ ಕೆಲಸಗಳಲ್ಲಿ ಹಗಲಿರುಳು ಎನ್ನದೆ ತಮ್ಮನ್ನು ತಾವು ಮತ ಕೇಳುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬುದನ್ನು ನೋಡಬಹುದಾಗಿದೆ ಆದರೆ ಅದು ಏನೇ ಇದ್ದರೂ ಕೂಡ್ಲಿಗಿ ಕ್ಷೇತ್ರದ ಜನತೆ ಯಾವ ಅಭ್ಯರ್ಥಿಯನ್ನು ಜನರು ಆಯ್ಕೆ ಮಾಡ್ತಾರೋ ಗೆಲ್ಲಿಸಿ ಗದ್ದುಗೆ ಹೇರಲು ಕಳಿಸುತ್ತಾರೋ ಅನ್ನೋದೇ ಯಕ್ಷ ಪ್ರಶ್ನೆಯಾಗಿದೆ? ಈ ಕಾತುರತೆಯನ್ನು ಕೂಡ್ಲಿಗಿ ಕ್ಷೇತ್ರದ ಜನ ಏನು? ಅನ್ನೋದನ್ನು ಕಾದು ನೋಡಬೇಕಾಗಿದೆ
ಜಿಲ್ಲಾ ವರದಿಗಾರರು:ರಾಘವೇಂದ್ರ. ಸಾಲುಮನೆ. ಕೂಡ್ಲಿಗಿ