ತರೀಕೆರೆ ಕ್ಷೇತ್ರದಲ್ಲಿ ಕಾಂಗ್ರೆಸ್ಸಿಗೆ ಉತ್ತಮ ಭವಿಷ್ಯವಿದೆ–ಹೆಚ್. ಎಂ.ರೇವಣ್ಣ
ತರೀಕೆರೆ ಏ.28

ಈ ಹಿಂದೆ ಜಿಎಚ್ ಶ್ರೀನಿವಾಸ್ ತರೀಕೆರೆ ಕ್ಷೇತ್ರದಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದು ಕಾಂಗ್ರೆಸ್ ಪಕ್ಷದಿಂದ ರಾಜ್ಯದ ಮುಖ್ಯಮಂತ್ರಿ ಆಗಿ ಅಧಿಕಾರ ನಡೆಸಿದ ಸಿದ್ದರಾಮಯ್ಯನವರ ಸಹಕಾರದಿಂದ ಕ್ಷೇತ್ರಕ್ಕೆ ಸಾವಿರಾರು ಕೋಟಿ ಅನುದಾನವನ್ನು ತಂದು ಅಭಿವೃದ್ಧಿಪಡಿಸಿರುತ್ತಾರೆ ಎಂದು ಮಾಜಿ ಸಚಿವರಾದ ಎಚ್ಎಮ್ ರೇವಣ್ಣ ರವರು ಕಾಂಗ್ರೆಸ್ ಅಭ್ಯರ್ಥಿ ಜಿಎಚ್ ಶ್ರೀನಿವಾಸ್ ಪರ ಬಾವಿಕೆರೆ ಗ್ರಾಮದಲ್ಲಿ ಮತಯಾಚನೆಯೊಂದಿಗೆ ಸಭೆ ನಡೆಸಿ ಸುದ್ದಿಗಾರರಿಗೆ ಹೇಳಿದರು. ಆದರೆ ನಂತರದ ಚುನಾವಣೆಯಲ್ಲಿ ಶ್ರೀನಿವಾಸ್ ರವರಿಗೆ ಕಾಂಗ್ರೆಸ್ ಪಕ್ಷದ ಟಿಕೆಟ್ ಕೈತಪ್ಪಿದ್ದು ದುರಾದೃಷ್ಟಕರ ಆದರೆ ಇದನ್ನು ಹರಿತ ರಾಜ್ಯ ವರಿಷ್ಠ ನಾಯಕರು ಶ್ರೀನಿವಾಸ್ ಗೆ ಈ ಬಾರಿ ಟಿಕೆಟ್ ನೀಡಿದ್ದಾರೆ. ವಿವಿಧ ಸಮುದಾಯದ ಮತದಾರರು ಶ್ರೀನಿವಾಸ್ ರವರನ್ನು ಗೆಲ್ಲಿಸಲು ಪಣತೊಟ್ಟಿರುತ್ತಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಬೆಲೆ ಏರಿಕೆ ಮತ್ತು 40% ಕಮಿಷನ್ ದಂಧೆಯಿಂದ ಬಿಜೆಪಿ ಇಡೀ ರಾಷ್ಟ್ರದಲ್ಲಿಯೇ ಭ್ರಷ್ಟಾಚಾರವೆಂಬ ಅಪಖ್ಯಾತಿಗೆ ಪಾತ್ರವಾಗಿದೆ. ಜನ ಮೋದಿ ಅವರನ್ನು ಹೋದ ಕಡೆಯೆಲ್ಲ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಬರೀ ಪ್ರಚಾರಪ್ರಿಯ ರಾಗಿರುವ ಮೋದಿ ರಾಷ್ಟ್ರದಲ್ಲಿ ಯುವ ಸಮುದಾಯಕ್ಕೆ ಉದ್ಯೋಗ ನೀಡುವಲ್ಲಿ ವಿಫಲರಾಗಿದ್ದಾರೆ. ಆದರೆ ಕಾಂಗ್ರೆಸ್ ಸುಮಾರು 65 ವರ್ಷಗಳಿಂದ ಅಧಿಕಾರ ನಡೆಸಿದ್ದು 20 ಅಂಶದ ಕಾರ್ಯಕ್ರಮಗಳನ್ನು ಜಾರಿಗೆ ತರುವುದರ ಮೂಲಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಜನಾಂಗ ಮತ್ತು ಇನ್ನಿತರೆ ಎಲ್ಲಾ ಸಮುದಾಯಗಳನ್ನು ಆರ್ಥಿಕ ಪರಿಸ್ಥಿತಿಯಿಂದ ಅವರನ್ನು ಉತ್ತಮ ಜೀವನ ನಡೆಸುವತ್ತ ಅವರಿಗೆ ಸಹಕಾರ ನೀಡಿದೆ ಎಂದರು . ರಾಜ್ಯದಲ್ಲಿ ಅಧಿಕಾರ ನಡೆಸಿದ ಕಾಂಗ್ರೆಸ್ಸಿನ ಮಾಜಿ ಮುಖ್ಯಮಂತ್ರಿಗಳಾದ ಎಸ್ ನಿಜಲಿಂಗಪ್ಪ, ಡಿ ದೇವರಾಜ್ ಅರಸ್, ಎಸ್ ಎಮ್ ಕೃಷ್ಣ, ವೀರಪ್ಪ ಮೊಯ್ಲಿ, ಸಿದ್ದರಾಮಯ್ಯ ಕ್ರಮವಾಗಿ ರಾಜ್ಯದಲ್ಲಿ ಬಡವರ ಏಳಿಗೆಯನ್ನು ಮಾಡಿದ್ದಾರೆ. ಬಿಜೆಪಿಯವರಂತೆ ಯಾವುದೇ ಭರವಸೆಯನ್ನು ಜನರಿಗೆ ನೀಡಿರುವುದಿಲ್ಲ. ಹಾಗೆಯೇ ಹಲವು ಯೋಜನೆಗಳನ್ನು ಜಾರಿಗೆ ತರುವುದರ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಪರ್ವದ ಹಾದಿಯಲ್ಲಿ ಸಾಗಲಿದೆ ಮತ್ತು ಸಂಕ್ರಮಣದ ನಡಿಗೆಯನ್ನು ಮುಂದಿನ ದಿನಗಳಲ್ಲಿ ಪ್ರಾರಂಭಿಸಲಿದೆ ಎಂದು ಹೇಳಿದರು. ಕಾಂಗ್ರೆಸ್ ಅಭ್ಯರ್ಥಿಯಾದ ಜಿಎಚ್ ಶ್ರೀನಿವಾಸ್ ಮಾತನಾಡಿ ತಾಲೂಕಿನಾದ್ಯಂತ ಕಾಂಗ್ರೆಸ್ ಪಕ್ಷಕ್ಕೆ ಉತ್ತಮ ಬೆಂಬಲ ವ್ಯಕ್ತವಾಗಿದೆ ಈ ಹಿಂದೆ ನಾನು ಶಾಸಕನಾಗಿದ್ದ ಅವಧಿಯಲ್ಲಿ ಮಾಡಿದ ಜನಪರ ಕೆಲಸಗಳು ಇಂದು ನನಗೆ ಅನುಕೂಲವಾಗಲಿದೆ ಹಾಗೆಯೇ ಬಿಜೆಪಿಯ ಭ್ರಷ್ಟಾಚಾರದಿಂದ ಜನ ಬೇಸತ್ತಿದ್ದು ಜನ ಬದಲಾವಣೆಯನ್ನು ಬಯಸುತ್ತಿರುವುದರಿಂದ ಅದು ಈ ಬಾರಿ ನನಗೆ ವರದಾನವಾಗಲಿದೆ ಎಂದು ಹೇಳಿದರು. ವೀರಶೈವ ಸಮಾಜದ ಜಿಲ್ಲಾ ಉಪಾಧ್ಯಕ್ಷ ರವಿ ಶಾನಬೋಗ್ ಮಾತನಾಡಿ ಕ್ಷೇತ್ರದಲ್ಲಿ ವೀರಶೈವ ಸಮಾಜದ ಮುಖಂಡರೆಲ್ಲರೂ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದು ಜಿಎಸ್ ಶ್ರೀನಿವಾಸ್ ಗೆಲುವಿಗೆ ಸಹಕಾರವಾಗಲಿದೆ ಎಂದರು. ಈ ಸಂದರ್ಭದಲ್ಲಿ ಮುಖಂಡರಾದ ಎಸ್ ಸೇಬಯ ನಾಯಕ, ಮಾಜಿ ಪುರಸಭಾ ಸದಸ್ಯ ಕೃಷ್ಣ, ಚಿನ್ನಪ್ಪ, ಮಲ್ಲಿಕಾರ್ಜುನ, ಬಿ ಎಸ್ ಆರ್ ಶಂಕರ್, ಇರ್ಫಾನ್ ಅಹಮದ್ ಬೇಗ್, ಬಾವಿಕೆರೆ ವೆಂಕಟೇಶ್, ಮುಂತಾದವರು ಇದ್ದರು.
ಜಿಲ್ಲಾ ವರದಿಗಾರರು :ಎನ್.ವೆಂಕಟೇಶ್.ತರೀಕೆರೆ