ದೇವರ ದರ್ಶನಕ್ಕೆಂದು ಹೋದವರು ಹೆಜ್ಜೇನು ಕಡಿತದಿಂದ ಆಸ್ಪತ್ರೆಯ ಪಾಲಾದರು…
ತರೀಕೆರೆ (ಏ.28) :

ಕಾಲಕ್ಕೆ ಸರಿಯಾಗಿ ಮಳೆ ಬರಲಿ ಎಂದು ಲಕ್ಕವಳ್ಳಿ ಹೋಬಳಿ ಬರಗೇನಹಳ್ಳಿ ಗ್ರಾಮಸ್ಥರು ಪ್ರತಿ ವರ್ಷವೂ ಯುಗಾದಿ ಹಬ್ಬ ಕಳೆದ ಮೇಲೆ ಏಪ್ರಿಲ್ ಮಾಹೆಯಲ್ಲಿ ಬೀರನಹಳ್ಳಿ ಕಾಡಿನಲ್ಲಿರುವ ಗಂಗಮ್ಮನ ಕಟ್ಟೆಯ, ಗಂಗಮ್ಮ ದೇವರ ಪರೇವು ಮಾಡಿಕೊಂಡು ಬರುತ್ತಿದ್ದರು, ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ಅಲ್ಲಿಯೇ ಅಡುಗೆ ಮಾಡಿ ಬಂದ ಭಕ್ತಾದಿಗಳೆಲ್ಲರೂ ಪ್ರಸಾದ ಸ್ವೀಕರಿಸಿ ಮರಳುತ್ತಿದ್ದರು. ಆದರೆ ಈ ಬಾರಿ ಪೂಜೆ ಪ್ರಾರಂಭವಾಗುವ ಮೊದಲೇ ಅಡುಗೆ ಸಿದ್ಧತೆಯು ನಡೆಯುತ್ತಿದ್ದು ಅಷ್ಟರಲ್ಲಿ ಭಕ್ತರ ಮೇಲೆ ಅಲ್ಲಿದ್ದ ಹೆಜ್ಜೇನು ದಾಳಿ ಮಾಡಿದ ಪರಿಣಾಮ ಸುಮಾರು 50 ಜನರು ಹೆಜ್ಜೆನು ಕಡಿತಕ್ಕೆ ತುತ್ತಾಗಿ ರಂಗೇನಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಮತ್ತು ತರೀಕೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಗೆ ದಾಖಲಾಗಿ ಶಿವರಾಜ್, ಅನಿತಾ, ನಚಿಕೇತ್ ಗೌಡ, ನಾಮದೇವಪ್ಪ, ಮುಂತಾದವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಹೆಜ್ಜೇನು ದಾಳಿಯಿಂದ ಗಂಗಮ್ಮ ದೇವರ ಪರೇವು ನಿಂತಿತು ಭಕ್ತಾದಿಗಳು ದಿಕ್ಕಾಪಾಲಾಗಿ ಓಡಿ ರಕ್ಷಣೆ ಪಡೆದರು .
ಜಿಲ್ಲಾ ವರದಿಗಾರರು: ಎನ್.ವೆಂಕಟೇಶ್.ತರೀಕೆರೆ