ಬಡವನಿಗೆ ರಾಜಕೀಯ ಶಕ್ತಿ ನೀಡಿ.ಆಳಾಗಿ ಸೇವೆ ಮಾಡುವೆ ಬಿ.ಡಿ.ಪಾಟೀಲ
ಸಾಲೋಟಗಿ ಮೇ.6
ವಿಜಯಪೂರ ಜಿಲ್ಲೆಯ ಇಂಡಿ ತಾಲೂಕಿನ ಸಾಲೋಟಗಿ ಗ್ರಾಮದಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆ ಹಾಗೂ ಪಕ್ಷ ಸೇರ್ಪಡೆ ಸಮಾರಂಭದಲ್ಲಿ ಭಾಗವಹಿಸಿ ಅಭ್ಯರ್ಥಿ ಬಿ ಡಿ ಪಾಟೀಲರು ಮಾತನಾಡಿ ನಾನು ಒಬ್ಬ ಬಡ ಹೋರಾಟಗಾರ ಗ್ರಾಂ ಪಂಚಾಯತ ಸದಸ್ಯನಾಗಿ,ತಾಲೂಕಾ ಪಂಚಾಯತ ಸದಸ್ಯರಾಗಿ, ಜಿಲ್ಲಾ ಪಂಚಾಯತ್ ಸದಸ್ಯರಾಗಿ ತಮ್ಮ ಸೇವೆ ಮಾಡಿದ್ದೇನೆ.ಯಾವುದೆ ಕಳಂಕ ಭ್ರಷ್ಟಾಚಾರ,ಸ್ವಜನ ಪಕ್ಷಪಾತ ಮಾಡದೆ ಸಾಮಾಜಿಕ ನ್ಯಾಯದ ಪರವಾಗಿ ಸೇವೆ ಮಾಡಿದ್ದೇನೆ.

2023ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ತಮ್ಮೂರಿಗೆ ಮತಯಾಚಿಸಿಸಲು ಬಂದಿದ್ದೇನೆ ನನಗೆ ತಮ್ಮ ಮನೆಯ ಮಗ, ಸಹೋದರನೆಂದು ತಿಳಿದು ಆಶೀರ್ವಾದ ನೀಡಬೇಕು ಎಂದು ಕಳಕಳಿಯ ಮನವಿಯನ್ನು ಮಾಡಿದರು.ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶಿವಯೋಗಪ್ಪ ನೇದಲಗಿ ಮಾತನಾಡಿ ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೂಂದಿದ ಬಿ ಡಿ ಪಾಟೀಲರು ವಿಶೇಷವಾಗಿ ನೀರಾವರಿ ಹೋರಾಟಗಾರ ಹಾಗೂ ಬಡವರ ಪಾಲಿಗೆ ಆಶಾಕಿರಣವಾಗಿದ್ದಾರೆ , ಇಂಥವರಿಗೆ ಅಮುಲ್ಯವಾದ ಮತನೀಡಬೇಕೆಂದು ಮನವಿ ಮಾಡಿದರು,ಮಾಜಿ ಶಾಸಕರಾದ ಶ್ರೀರವಿಕಾಂತ ಪಾಟೀಲ ಮಾತನಾಡಿ ಹಾಲುಮತ ಸಮಾಜದ ಜನರು ನನಗೆ ಈ ಹಿಂದೆ ಬೆಂಬಲ ವ್ಯಕ್ತಪಡಿಸಿದ್ದಾರೆ ಅವರ ಋಣವನ್ನು ತೀರಿಸಲು ಈ ಸಂದರ್ಭದಲ್ಲಿ ಜೆಡಿಎಸ್ ಅಭ್ಯರ್ಥಿ ಬಿ ಡಿ ಪಾಟೀಲರಿಗೆ ನನಗೆ ಅವಕಾಶ ಸಿಕ್ಕಿದೆ ಎಂದು ಮಾತನಾಡಿದರು.ಜೆಡಿಎಸ್ ಮುಖಂಡರಾದ ಅಶೋಕಗೌಡ ಬಿರಾದಾರ,ಆರ್ ಪಿ ಐ ಅಧ್ಯಕ್ಷ ನಾಗೇಶ್ ತಳಕೇರಿ, ಅಕ್ತರ್ ಪಟೇಲ್, ಜೆಡಿಎಸ್ ರಾಜ್ಯಮುಖಂಡರಾದ ಅಯೂಬ್ ನಾಟೀಕರ, ಶ್ರೀಶೈಲಗೌಡ ಪಾಟೀಲ, ರಾಮು ರಾಠೋಡ,ನೀಲಕಂಠ ಸಾವಳಗಿ ಮಾತನಾಡಿದರು,ಸಿದ್ದು ಅರಳಗುಂಡಗಿ, ಭೀಮರಾಯಗೌಡ ಪಾಟೀಲ,ರಾಜುಗೌಡ ಪಾಟೀಲ,ಮಳಸಿದ್ದ ಬ್ಯಾಳಿ, ಮುತ್ತಪ್ಪ ಪೋತೆ, ಸಿದ್ದು ಡಂಗಾ,ಮಿನಾಕ್ಷಿ ಪೀರಗಾ, ನಂದಾ ಗುನ್ನಾಪೂರ, ವಿಠ್ಠಲ ಗೌರ,ದಯಾನಂದ ಪಿ ಎಮ್ ಪರುತಯ್ಯ,ಚಿಕ್ಕಪಟ್ಟ,ಮಹಿಬೂಬ ಬೇವನೂರ, ಪ್ರಶಾಂತಗೌಡ ಪಾಟೀಲ ಕಲ್ಲಯ್ಯ ಚಿಕ್ಕಪಟ್ಟ,ಆದಂ ಅಗರಖೇಡ, ಧರ್ಮರಾಯ ಸಾಲೋಟಗಿ, ಮಹೇಶ ಚಾಂದಕವಟೆ,ಮಲ್ಕುಸಾವುಕ ದೂಡ್ಡಿ,ಬಾಳು ಆಳೂರ,ಪತ್ತೇಪೂರ ಅಪ್ಪು ಹ್ಯಾಟಿ,ದಾನಯ್ಯ ಮಠಪತಿ, ನಿಯಾಝ್ ಅಗರಖೇಡ ರಾಜು ಮುಲ್ಲಾ, ಮುಂತಾದ ನಾಯಕರು ಉಪಸ್ಥಿತರಿದ್ದರು. ಜಿಲ್ಲಾ ವರದಿಗಾರರು:ಬೀ.ಎಸ್.ಹೊಸೂರ್.ವಿಜಯಪುರ