ಖಾನಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ದಲಿತರ ಕುಂದು ಕೊರತೆ ಸಭೆ ….

ಖಾನಹೊಸಹಳ್ಳಿ (ಮೇ.18) :

ಕೂಡ್ಲಿಗಿ ಅಕ್ರಮ ಮಧ್ಯ ಮಾರಾಟ ಮತ್ತು ಜೂಜಾಟವನ್ನು ತಡೆಗಟ್ಟುವುದರ ಜೊತೆಗೆ ಯಾವುದೆ ರೀತಿಯ ಅಕ್ರಮ ಚಟುವಟಿಕೆಗಳು ನಡೆಯದಂತೆ ಸೂಕ್ತವಾದ ಕಾನೂನು ಕ್ರಮಗಳನ್ನು ಕೈಗೊಳ್ಳುವುದಾಗಿ ಡಿವೈಎಸ್ಪಿ ಎಂ.ಬಿ ಮಲ್ಲಾಪುರ ತಿಳಿಸಿದರು. ತಾಲೂಕಿನ ಖಾನಹೊಸಹಳ್ಳಿ ಪೋಲೀಸ್ ಠಾಣೆಯಲ್ಲಿ ಏರ್ಪಡಿಸಿದ್ದ ದಲಿತರ ಕುಂದು ಕೊರತೆ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಗ್ರಾಮೀಣ ಪ್ರಧೇಶಗಳಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವುದು ಅತ್ಯವಶ್ಯಕವಾಗಿದ್ದು ಈ ನಿಟ್ಟಿನಲ್ಲಿ ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸಲು ಕಟ್ಟುನಿಟ್ಟಿನ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದೆಂದು ತಿಳಿಸಿದರು.

ದಲಿತ ಮಕ್ಕಳಲ್ಲಿ ಶಿಕ್ಷಣದ ಕೊರತೆ ಕಂಡು ಬರುತ್ತಿದ್ದು ಪಾಲಕರು ಅದನ್ನು ಗಂಭೀರವಾಗಿ ಪರಿಗಣಿಸಿ ಮಕ್ಕಳನ್ನು ಶಿಕ್ಷಣದ ಕಡೆಗೆ ಗಮನ ಹರಿಸಬೇಕೆಂದು ಹೇಳಿದರು. ಈ ವೇಳೆ ಪಿಎಸ್ಐ ಎರಿಯಪ್ಪ ಅಂಗಡಿ ಮಾತನಾಡಿ ಅಸ್ಪೃಶ್ಯತೆ ಮತ್ತು ಇತರೆ ಏನೇ ಸಮಸ್ಯೆ ಬಂದರೂ ನೇರವಾಗಿ ನನಗೆ ತಿಳಿಸಿ ಅಂತಹ ಘಟನೆಯ ಸ್ಥಳಕ್ಕೆ ನಾನೇ ಬರುತ್ತೇನೆ ನಿಮ್ಮ ಜೊತೆಗೆ ನಾನು ಬರುತ್ತೇನೆ ದೇವಸ್ಥಾನಕ್ಕೆ ಅಡ್ಡಿ ಪಡಿಸಿದರೆ ನಮ್ಮ ಇಲಾಖೆ ವತಿಯಿಂದ ಒಬ್ಬ ಪೊಲೀಸ್ ಕಳಿಸಿಕೊಡುತ್ತೇನೆ ಮತ್ತು ಅಂತಹ ಏರಿಯಾದಲ್ಲಿ ತಾಲೂಕು ಅಧಿಕಾರಿಗಳು ನಾವು ಸೇರಿ ಒಂದು ಸಭೆಯನ್ನು ಮಾಡುತ್ತೇವೆ ಅಂತ ಘಟನೆಗಳು ಘಟನೆಗಳು ನಡೆಯದಾಗೆ ನಾವು ನೋಡಿಕೊಳ್ಳುತ್ತೇವೆ ಎಂದರು. ಈ ಸಭೆಯ ಕುರಿತು ದಲಿತ ಮುಖಂಡರಾದ ಗಂಗಣ್ಣನವರು ಮಾತನಾಡಿ ಅಸ್ಪೃಶ್ಯತೆ ಎನ್ನುವುದು ನಮ್ಮಲ್ಲಿ ಈಗ ತೊಲಗಿ ಹೋಗಿದೆ. ದಲಿತ ಮಕ್ಕಳಲ್ಲಿ ಶಿಕ್ಷಣದ ಕೊರತೆ ಕಂಡು ಬರುತ್ತಿದ್ದು ಪಾಲಕರು ಅದನ್ನು ಗಂಭೀರವಾಗಿ ಪರಿಗಣಿಸಿ ಮಕ್ಕಳನ್ನು ಶಿಕ್ಷಣದ ಕಡೆಗೆ ಗಮನ ಹರಿಸಬೇಕೆಂದು ಹೇಳಿದರು. ಇನ್ನು ಬಿ.ಟಿ. ಗುದ್ದಿ ದುರುಗೇಶ್ ಮಾತನಾಡಿ ಅಸ್ಪೃಶ್ಯತೆ ಅನ್ನುವುದಕ್ಕಿಂತ ನಾವೆಲ್ಲರೂ ಜಾಗೃತರಾಗಬೇಕು ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟವನ್ನು ನಿಲ್ಲಿಸಬೇಕು ಮತ್ತು ಪ್ರತಿ ಹಳ್ಳಿಗೆ ಪೊಲೀಸ್ ಠಾಣೆಯಿಂದ ಪೊಲೀಸರನ್ನು ಗಸ್ತು ಹಾಕಬೇಕು. ಪೊಲೀಸರು ಹಳ್ಳಿಗೆ ಆಗಮಿಸಿದರೆ ಹಳ್ಳಿಗಳಲ್ಲಿ ಅಕ್ರಮವಾಗಿ ನಡೆಯುತ್ತಿರುವ ಚಟುವಟಿಕೆಗಳು ಕಡಿಮೆ ಆಗುತ್ತವೆ ಎಂದರು. ಈ ಸಭೆಯಲ್ಲಿ ಅಪರಾಧ ವಿಭಾಗ ಪಿಎಸ್ಐ ನಾಗರತ್ನಮ್ಮ, ಜುಮ್ಮೊಬನಹಳ್ಳಿ ಓಬಣ್ಣ ಹಾಗೂ ಬಿ.ಟಿ‌.ಗುದ್ದಿ ಚಂದ್ರಪ್ಪ ಮಾತನಾಡಿದರು, ದುರುಗಪ್ಪ ತಾಯಕನಹಳ್ಳಿ, ಹೊಸಹಳ್ಳಿ ಗ್ರಾ.ಪಂ ಉಪಾಧ್ಯಕ್ಷ ಬೋರಪ್ಪ, ಹಿರೇ ಕುಂಬಳಗುಂಟೆ ಮನೋಜ್ ಕುಮಾರ್, ಹುಲಿಕೆರೆ ದುರುಗೇಶ್, ಕೆಂಚಮಲ್ಲನಹಳ್ಳಿ ಓಬಳೇಶ್ ಸೇರಿದಂತೆ ಪರಿಶಿಷ್ಟ ಪಂಗಡ ಪರಿಶಿಷ್ಟ ಜಾತಿಯ ಎಲ್ಲಾ ಮುಖಂಡರು, ಪೋಲಿಸ್ ಸಿಬ್ಬಂದಿಗಳು ಈ ಸಭೆಯಲ್ಲಿ ಭಾಗವಹಿಸಿದರು. ಜಿಲ್ಲಾ ವರದಿಗಾರರು:ರಾಘವೇಂದ್ರ.ಸಾಲುಮನಿ. ಕೂಡ್ಲಿಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button