ನಾಗಠಾಣದಲ್ಲಿ ಸಂಭ್ರಮದ ಚೌಡೇಶ್ವರಿ ಜಾತ್ರೆ.
ನಾಗಠಾಣ ಮೇ.19
ಪಾರ್ವತಿ ದೇವಿಯ ಅವತಾರವಾಗಿರುವ ಚೌಡೇಶ್ವರಿ ದೇವಿಯು ದೇವಾಂಗ ಪಂಗಡದ ಜನರ ಕುಲದೇವಿ.ಈಕೆಯನ್ನು ಅತ್ಯಂತ ಶಕ್ತಿಶಾಲಿ ದೇವತೆಗಳಲ್ಲಿ ಒಬ್ಬಳೆಂದು ಪರಿಗಣಿಸಲಾಗುತ್ತದೆ. ಈಕೆಯ ಬಳಿ ಏನೇ ಬೇಡಿಕೊಂಡರೂ ಅದು ಈಡೇರುತ್ತದೆ ಎನ್ನುವ ನಂಬಿಕೆ ಭಕ್ತರಲ್ಲಿದೆ.
ದಿವ್ಯ ಶಕ್ತಿದೇವತೆಯಾದ ಚೌಡೇಶ್ವರಿ ದೇವಿಯನ್ನು ಪೂಜಿಸುವುದರಿಂದ ಆಕೆಯು ನಮ್ಮ ಮನಸ್ಸು ಮತ್ತು ದೇಹವನ್ನು ಆಕ್ರಮಿಸಿಕೊಂಡಿರುವ ದುಷ್ಟ ಶಕ್ತಿಗಳನ್ನು ನಾಶಮಾಡುತ್ತಾಳೆ. ನಮ್ಮಲ್ಲಿ ಜ್ಞಾನವನ್ನು, ಉತ್ತಮ ಗುಣಗಳನ್ನು ತುಂಬುತ್ತಾಳೆ. ಅವಳು ಆರೈಕೆ ಮಾಡುವವಳು ಮತ್ತು ಪ್ರೀತಿಯ ತಾಯಿಯಾಗಿ ವರ್ತಿಸುತ್ತಾಳೆ. ನಮಗೆ ಏನೇ ಸಮಸ್ಯೆಗಳಿದ್ದರೂ ಆಕೆ ಅದನ್ನು ತಿಳಿದುಕೊಂಡು ಸೂಕ್ತ ಸಮಯದಲ್ಲಿ ನಮಗೆ ಸೂಕ್ತ ಪರಿಹಾರ ನೀಡುತ್ತಾಳೆ. ಅವಳು ನಮ್ಮ ರೋಗಗಳು ಮತ್ತು ಮನಸ್ಸಿಗೆ ಸಂಬಂಧಿಸಿದ ಸಮಸ್ಯೆಗಳನ್ನು ತೊಡೆದುಹಾಕುತ್ತಾಳೆ ಮತ್ತು ನಮ್ಮ ಜೀವನದ ಪ್ರತಿ ಕ್ಷಣದಲ್ಲಿ ನಮ್ಮೊಂದಿಗೆ ಬರುತ್ತಾಳೆ. ನಮ್ಮ ಜೀವನದಲ್ಲಿ ಸಾಕಷ್ಟು ಸಕಾರಾತ್ಮಕ ಬದಲಾವಣೆಗಳು ಆಗುತ್ತವೆ.

ಭಕ್ತ ಮಹಿಳೆಯರು ಜಾತ್ರೆಯ ಮುನ್ನಾ ದಿನ ರಾತ್ರಿ ಅಂಬಲಿ ಬಿಂದಿಗೆ ಹೊತ್ತುಕೊಂಡು ಕಳಸ ಹಾಗೂ ಬಾಸಿಂಗ ಜೊತೆ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ತೆರಳುವುದು ವಿಶೇಷವಾಗಿತ್ತು.ಅಮಾವಾಸ್ಯೆ ದಿನ ಬೆಳಿಗ್ಗೆ ಚೌಡೇಶ್ವರಿ ದೇವಿಯ ಮುಖ ಹೊತ್ತು,ಗ್ರಾಮದ ಭಕ್ತರ ಮನೆ ಮನೆಗೆ ಭೇಟಿ ನೀಡಿ ಕಾಯಿ,ನೈವೇದ್ಯ ಪಡೆದು ಆಶೀರ್ವದಿಸುವದು ಸಂಪ್ರದಾಯ. ಮಧ್ಯಾಹ್ನ ಕುಂಬಾರ ಮನೆತನದ ಮಹಿಳೆಯರು ಹಾಡುತ್ತಾ ಕಿಚಡಿಯನ್ನು ಗ್ರಾಮದ ನಡು ಬಜಾರಕ್ಕೆ ತರುವರು.ಅಲ್ಲಿ ಹಾಕಿದ ಹಂದರದಲ್ಲಿ ದೇವಿಯು ಮಜ್ಜಿಗೆಯನ್ನು ಕಡೆದು ಭಕ್ತರಿಗೆ ಕೊಡುವದು.ಆ ನಂತರ ಮೂಲ ದೇವಸ್ಥಾನಕ್ಕೆ ಸಕಲ ವಾದ್ಯಮೇಳದೊಂದಿಗೆ ಬರುವ ಸಂಪ್ರದಾಯ ಅನಾದಿ ಕಾಲದಿಂದಲೂ ನಡೆದು ಬಂದಿದ್ದು,ಜಾತ್ರಾ ವೈಶಿಷ್ಟ್ಯವಾಗಿದೆ.
ಕುಂಬಾರ ಮನೆತನದ ಅಮೋಘಸಿದ್ದ,ಮಲ್ಲು,ಭೀಮು, ಸಿದ್ದು,ಪವಾಡೇಶ,ಅಮೋಘಸಿದ್ದ, ಶರಣಪ್ಪ,ಶ್ರೀಶೈಲ, ಹಣಮಂತ,ಮಹಾಂತೇಶ, ಬಸವರಾಜ, ಚೌಡಪ್ಪ,ಸದಾನಂದ,ಬಾಬು,ಪುಂಡಲೀಕ, ಶಿವಾನಂದ, ನರಸಪ್ಪ,ಶ್ರೀಶೈಲ,ಮಲ್ಲಿಕಾರ್ಜುನ, ಗಿರಿಮಲ್ಲ,ಹಣಮಂತ, ಸಿದ್ದು,ಭೀಮಾಶಂಕರ,ಶಿವು,ಮಲ್ಲು,ಅರವಿಂದ,ಅಪ್ಪಾಸಿ,ಸಾಯಬಣ್ಣ,ಮಲ್ಲಿಕಾರ್ಜುನ, ನವೀನ ಹಾಗೂ ಬಂಡೆ ಕುಟುಂಬದ ಶಿವಾನಂದ, ಸುಭಾಸ,ಚಿದಾನಂದ, ಕಾಶೀನಾಥ,ಸಂತೋಷ, ಸಂಗಮೇಶ,ಈರಣ್ಣ,ಶ್ರೀಧರ,ಸಿದ್ಧಾರೂಢ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು:ಶಿವಪ್ಪ.ಹರಿಜನ.ಇಂಡಿ