ಅಸಂಕ್ರಾಮಿಕ ರೋಗಗಳನ್ನು ತಡೆಗಟ್ಟಿ – ಭಾರತೇಶ್.
ತರೀಕೆರೆ ಮೇ.25

ಹೃದಯ ಕಾಯಿಲೆ,ಸಕ್ಕರೆ ಕಾಯಿಲೆ, ರಕ್ತದೊತ್ತಡ, ಪೇರಲಿಸಿಸ್ ಮತ್ತು ಎಲ್ಲಾ ಬಗೆಯ ಕ್ಯಾನ್ಸರ್ ಇಂತಹ ಕಾಯಿಲೆಗಳನ್ನು ತಡೆಗಟ್ಟಲು ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಿರಿ ಎಂದು ಕ್ಷಯರೋಗ ಮೇಲ್ವಿಚಾರಕ ಭಾರತೇಶ್ ಇಂದು ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಎನ್.ಸಿ.ಡಿ. ಸಿಬ್ಬಂದಿಗಳು ಏರ್ಪಡಿಸಿದ್ದ, ಅಸಂಕ್ರಾಮಿಕ ರೋಗಗಳನ್ನು ತಡೆಗಟ್ಟುವ, ಕ್ಷಯರೋಗ ನಿರ್ಮೂಲನ ಅರಿವು ಮತ್ತು ತಪಾಸಣಾ ಶಿಬಿರದಲ್ಲಿ ಮಾತನಾಡಿದರು.

ರೋಗಗಳಿಗೆ ಚಿಕಿತ್ಸೆ ನೀಡುವುದಕ್ಕಿಂತಲೂ ರೋಗ ಬರದಂತೆ ತಡೆಗಟ್ಟಲು ಆರೋಗ್ಯಕರ ಆಹಾರವಾದ ಮೊಟ್ಟೆ,ಮೀನು, ಸೊಪ್ಪು,ತರಕಾರಿ,ಹಣ್ಣು,ಹಾಲು ಹಾಗೂ ಸಸ್ಯ ಮೂಲದ ಮತ್ತು ಪ್ರಾಣಿಜನ್ಯ ಮೂಲದ ಆಹಾರಗಳಿಂದ ಉತ್ತಮ ದೇಹಕ್ಕೆ ಆರೋಗ್ಯಕ್ಕೆ ಪೂರಕವಾಗಿದೆ. ಸಮಗ್ರ ಆರೋಗ್ಯಕ್ಕೆ ವ್ಯಾಯಾಮ ಕ್ರೀಡೆ ಆಟಗಳು ದೈಹಿಕ ಚಟುವಟಿಕೆಗಳಿಂದ ಸ್ನಾಯುಗಳಲ್ಲಿ ದೃಢತೆ ಬರುತ್ತದೆ, ಯೋಗದಿಂದ ದೈಹಿಕ ಮತ್ತು ಮಾನಸಿಕ ಸಮತೋಲನ ಕಾಯ್ದುಕೊಳ್ಳಬಹುದು. ಧೂಮಪಾನ ತಂಬಾಕು ಮದ್ಯಪಾನದಿಂದ ದೂರವಿರಬೇಕು, ಆಗ ಅಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಬಹುದು ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಪ್ರಾಥಮಿಕ ಆರೋಗ್ಯ ಸಂರಕ್ಷಣಾಧಿಕಾರಿ ದ್ರಾಕ್ಷಾಯಿಣಮ್ಮ, ಸಮುದಾಯ ಆರೋಗ್ಯ ಅಧಿಕಾರಿ ಎಲ್ವಿನ್, ಹಾಗೂ ಎನ್. ಸಿ. ಡಿ. ಸಿಬ್ಬಂದಿಗಳಾದ ಭಾಗ್ಯ, ಶಿಲ್ಪ, ಡಿಯಲ್ ರೇವತಿ, ಆಶಾ ಕಾರ್ಯಕರ್ತೆ ನಿರ್ಮಲ ಮುಂತಾದವರು ಉಪಸ್ಥಿತರಿದ್ದು ತಪಾಸಣೆ ಮಾಡಿದರು.
ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್.ತರೀಕೆರೆ