ಪ್ಲಾಸ್ಟಿಕ್ ಮುಕ್ತತೆಗೆ ನಮ್ಮ ಜೊತೆ ಕೈಜೋಡಿಸಿರಿ ಹಾಗೂ ತಾಲೂಕ ಅಭಿವೃದ್ಧಿ ಕೆಲಸಗಳಿಗೆ ಹೆಚ್ಚಿನ ಆದ್ಯತೆ ನೀಡುವೆ ನೂತನ ಶಾಸಕರಾದ ಡಾll ಶ್ರೀನಿವಾಸ್ ಎನ್. ಟಿ.
ಕೂಡ್ಲಿಗಿ ಮೇ.28

ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಪ್ರವಾಸಿ ಮಂದಿರದ ಮುಂಭಾಗದಲ್ಲಿ ಶುಕ್ರವಾರದಂದು ನಡೆಸಿದಂತಹ ವಿದ್ಯಾರ್ಥಿಗಳು ಹಾಗೂ ದೇವದಾಸಿ ಮಹಿಳೆಯರು ಮತ್ತು ಕಾಂಗ್ರೆಸ್ ಕಾರ್ಯಕರ್ತರಗಳ ಸಮ್ಮುಖದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನೂತನ ಶಾಸಕರಾದ ಡಾಕ್ಟರ್ ಶ್ರೀನಿವಾಸ್. ಎನ್. ಟಿ. ಇವರು ಕೂಡ್ಲಿಗಿ ವಿಧಾನಸಭಾ ಕ್ಷೇತ್ರ ಅಭಿವೃದ್ಧಿ ವಿಷಯದಲ್ಲಿ ಪ್ರಥಮ ಆದ್ಯತೆ ನೀಡಲಾಗುವುದು ಎಂದರು ಹಾಗೆ ಕೂಡ್ಲಿಗಿ ತಾಲೂಕಿನ ಎಲ್ಲಾ ಜನತೆಗೆ ಶಾಸಕರು ಪ್ಲಾಸ್ಟಿಕ್ ಮುಕ್ತ ತಾಲೂಕನ್ನಾಗಿ ಹಾಗೂ ಸ್ವಚ್ಛತೆಗೆ ವಿಶೇಷ ಕಾಳಜಿ ಮತ್ತು ಜವಾಬ್ದಾರಿಯನ್ನು ತಾಲೂಕಿನ ಎಲ್ಲಾ ಜನರು ಹಾಗೂ ಯುವಕರು ವಿದ್ಯಾರ್ಥಿಗಳು ಒಗ್ಗಟ್ಟಿನಿಂದ ನಮ್ಮ ತಾಲೂಕನ್ನು ಪ್ಲಾಸ್ಟಿಕ್ ಮುಕ್ತ ಮಾಡಲು ಎಲ್ಲಾರೂ ನಮ್ಮ ಜೊತೆ ಕೈಜೋಡಿಸಿ ಎಂದು ತಿಳಿಸುವುದರೊಂಗೆ ಹಾಗೂ ತಮ್ಮ ತಮ್ಮ ಮನೆಗಳತ್ರ ಹಾಗೂ ಬೀದಿಗಳಲ್ಲಿ ಕಂಡರೆ ನಿಮ್ಮ ಕೈಲಾದಷ್ಟು ಪ್ಲಾಸ್ಟಿಕ್ ಅನ್ನು ಒಂದು ಕಡೆ ತೆಗೆದುಕೊಂಡು ಡಸ್ಟ್ ಬಿನ್ ಗೆ ತೆಗೆದು ಹಾಕಿ ಎಂದು ತಿಳಿಸಿದರು, ಹಾಗೆ ಕೂಡ್ಲಿಗಿ ತಾಲೂಕಿನ ಎಲ್ಲಾ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ವಿದ್ಯಾರ್ಥಿಗಳಿಗೆ ಪಟ್ಟಣದಲ್ಲಿ ಶಿಘ್ರದಲ್ಲೆ ಸ್ಪರ್ಧಾತ್ಮಕ ಪರೀಕ್ಷೆ ಕೇಂದ್ರವನ್ನು ತೆಗೆದು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಾಬೇಕಾಗಿದೆ ಎಂದು ತಿಳಿಸಿದರು, ಮತ್ತು ಅನೇಕ ಅಭಿವೃದ್ಧಿ ವಿಷಯವಾಗಿ ಬದಲಾವಣೆಯ ಕಾರ್ಯ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದಲ್ಲಿ ಮುಂದಿನ ದಿನಮಾನಗಳಲ್ಲಿ ಕಾಣುವುದಾಗಿ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕೂಡ್ಲಿಗಿ ತಾಲೂಕಿನ ದೇವದಾಸಿ ಮಹಿಳಾ ಸಂಘಟನೆಗೆ 3. ಲಕ್ಷ ರೂಪಾಯಿಗಳನ್ನು ದೇಣಿಗೆ ರೂಪದಲ್ಲಿ ನೀಡಲಾಗುತ್ತದೆ ಮತ್ತು ಶೈಕ್ಷಣಿಕ ಭಾಗವಾಗಿ ನಮ್ಮ ಕುಟುಂಬದಿಂದ ಪ್ರತಿ ವರ್ಷ ಎಸ್.ಎಸ್.ಎಲ್.ಸಿ -,ಪಿಯುಸಿ, ಹಾಗೂ ಪದವಿ ತರಗತಿಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ತಲಾ 15. ಸಾವಿರ ರೂಪಾಯಿಗಳನ್ನು ನೀಡಲಾಗುವುದು ಎಂದರು ಹಾಗೆ ನಮ್ಮ ತಂದೆಯವರು ಸ್ಥಾಪಿಸಿದ 8 ಪ್ರೌಢಶಾಲೆಗಳಲ್ಲಿ ಎಸ್.ಎಸ್.ಎಲ್.ಸಿ.ಯಲ್ಲಿ ಅತಿ ಹೆಚ್ಚು ಅಂಕ ಪಡೆದ ಮೂರು ವಿದ್ಯಾರ್ಥಿಗಳಿಗೆ ಪ್ರತಿ ವರ್ಷ 10 ಸಾವಿರ ರೂಪಾಯಿಗಳನ್ನು ಸ್ಕಾಲರ್ಶಿಪ್ ನೀಡಲಾಗುವುದು ಎಂದು ತಿಳಿಸಿದರು, ಹಾಗೂ ತಾಲೂಕಿನ್ಯಾದಂತ ಎಲ್ಲಾ ಜನರು ಕಾನೂನು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುವುದು ಎಲ್ಲರ ಜವಾಬ್ದಾರಿ ಎಲ್ಲಾರೂ ಕಾನೂನಿಗೆ ಗೌರವಿಸಿ ಎಂದು ತಿಳಿಸಿದರು ,ಈ ಸಂದರ್ಭದಲ್ಲಿ ಡಾಕ್ಟರ್ ಪುಷ್ಪ. ಶ್ರೀನಿವಾಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ .ಗುರುಸಿದ್ದನ ಗೌಡ್ರು, ಕೆಪಿಸಿಸಿ ಮಹಿಳಾ ಘಟಕದ ಕಾರ್ಯದರ್ಶಿಯಾದ ಜಿ. ನಾಗಮಣಿ ,ಬಿಡಿಸಿಸ್ ಬ್ಯಾಂಕ್ ಉಪಾಧ್ಯಕ್ಷರಾದ ಕೆ .ತಿಪ್ಪೇಸ್ವಾಮಿ ,ಟಿ .ಉಮೇಶ್ ಸಾವಾಜ್ಜಿ ರಾಜೇಂದ್ರ ಪ್ರಸಾದ್, ಎನ್ .ಟಿ ತಮ್ಮಣ್ಣ, ಕಾವಲಿ ಶಿವಪ್ಪ ನಾಯಕ ,ಟಿ ಜಿ ಮಲ್ಲಿಕಾರ್ಜುನ್ ಗೌಡ, ಉದಯಜನ್ನು ,ರಾಘವೇಂದ್ರ, ದೇವದಾಸಿ ಮಹಿಳಾ ಸಂಘಟನೆ ಅಧ್ಯಕ್ಷರಾದ ಯಂಕಮ್ಮ ಇನ್ನೂ ಅನೇಕ ಜನ ಉಪಸ್ಥಿತರಿದ್ದರು.
ತಾಲೂಕ ವರದಿಗಾರರು:ರಾಘವೇಂದ್ರ. ಸಾಲುಮನೆ. ಕೂಡ್ಲಿಗಿ