ಮತದಾರ ದೇವರುಗಳಿಗೆ ಕಾರ್ಯಕರ್ತ ಎಲ್ಲರ ಕಾಲಿಗೆ ಬಿದ್ದು ನಮಸ್ಕಾರ ಮಾಡುತ್ತೇನೆ — ಶಾಸಕ ಜಿ.ಹೆಚ್. ಶ್ರೀನಿವಾಸ್.
ತರೀಕೆರೆ ಜೂನ್.3

ಎಲ್ಲಾ ಜಾತಿ, ಧರ್ಮ, ಸಮಾಜದವರು ಅತಿ ಹೆಚ್ಚು ಮತಗಳನ್ನು ಕೊಟ್ಟಿದ್ದಾರೆ ಎಲ್ಲರ ಕಾಲಿಗೆ ಬಿದ್ದು ನಮಸ್ಕಾರ ಮಾಡುತ್ತಿದ್ದೇನೆ ಎಂದು ಶಾಸಕ ಜಿಎಚ್ ಶ್ರೀನಿವಾಸ್ ಶುಕ್ರವಾರ ಸಂಜೆ ಪಟ್ಟಣದ ಹೋಟೆಲ್ ಅರಮನೆ ಆವರಣದಲ್ಲಿ ತರೀಕೆರೆ ಬ್ಲಾಕ್ ಕಾಂಗ್ರೆಸ್ ಸಮಿತಿ, ಅಜ್ಜಂಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ತರೀಕೆರೆ ವಿಧಾನಸಭಾ ಕ್ಷೇತ್ರದ ಮತದಾರರಿಗೆ ಹಾಗೂ ಪಕ್ಷದ ಕಾರ್ಯಕರ್ತರಿಗೆ ಕೃತಜ್ಞತಾ ಸಭೆ ಹಾಗೂ ಶಾಸಕರಾದ ಜಿಎಚ್ ಶ್ರೀನಿವಾಸ್ ರವರಿಗೆ ಅಭಿನಂದನಾ ಸಮಾರಂಭದಲ್ಲಿ ಹೇಳಿದರು. ಈ ಜಯ ನನ್ನದಲ್ಲ ನಿಮ್ಮದು ಚುನಾವಣಾ ಸಂದರ್ಭದಲ್ಲಿ ನಾನು, ನನ್ನ ಪತ್ನಿ,ಮಗಳು, ಕಾರ್ಯಕರ್ತರೊಂದಿಗೆ ಮತಯಾಚನೆಗೆ ಹೋದಾಗಲೂ ಸಹ ಜನರು ಪ್ರೀತಿ-ವಿಶ್ವಾಸದಿಂದ ನೋಡಿದ್ದಾರೆ. ಮುಂಬರುವ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುತ್ತೇನೆ. ಸಿಟಿ ರವಿಯನ್ನು ಸೋಲಿಸಿದ ತಮ್ಮಯ್ಯರವರ ಗೆಲುವು ತುಂಬಾ ಪ್ರಾಮುಖ್ಯತೆ ಪಡೆದಿದೆ ನನ್ನಈ ಗೆಲುವಿಗೆ ರೇವಣಸಿದ್ದೇಶ್ವರ, ಬೀರಲಿಂಗೇಶ್ವರ ದೇವರ ಆಶೀರ್ವಾದ ಇದೆ ಎಂದು ಹೇಳಿದರು. ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ ಜಿಲ್ಲಾ ಅಧ್ಯಕ್ಷರಾದ ಡಾ.ಅಂಶುಮಂತ್ ರವರು ಮಾತನಾಡಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಮಲ್ಲಿಕಾರ್ಜುನ ಖರ್ಗೆ ರವರು ಜಿಲ್ಲೆಯಲ್ಲಿ ಪ್ರವಾಸ ಮಾಡಿ ಮತಯಾಚನೆ ಮಾಡಿ ಗೆಲುವಿಗೆ ಕಾರಣರಾಗಿದ್ದಾರೆ. ಜೋಡೆತ್ತುಗಳಾದ ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಇಬ್ಬರು ಒಟ್ಟಾಗಿ ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬರಲು ಕಾರಣರಾಗಿದ್ದಾರೆ. ಜಿಎಚ್ ಶ್ರೀನಿವಾಸ್ ಗೆಲುವಿಗೆ ಕಾರಣಕರ್ತರಾದ ಮತದಾರರ ಕಷ್ಟ ಕಾರ್ಪಣ್ಯಗಳಿಗೆ ಕಾರ್ಯಕರ್ತರು ಸ್ಪಂದಿಸಿ ಕೆಲಸ ಮಾಡಬೇಕು. ಯಶಸ್ವಿ ಪುರುಷನ ಹಿಂದೆ ಮಹಿಳೆ ಇರುತ್ತಾಳೆ ಎಂಬಂತೆ ಶ್ರೀನಿವಾಸರವರ ಪತ್ನಿ ಸಹ ಇದ್ದರು ನುಡಿದಂತೆ ನಡೆದ ಕಾಂಗ್ರೆಸ್ ಪಕ್ಷ ಮುಂದೆಯೂ ಸಹ ನುಡಿದಂತೆ ನಡೆಯುತ್ತದೆ ಎಂದು ಹೇಳಿದರು. ಎಐಸಿಸಿ ಕಾರ್ಯದರ್ಶಿ ಸಂದೀಪ್ ಮಾತನಾಡಿ ನರೇಂದ್ರ ಮೋದಿಯವರು ಭಾಷಣದಲ್ಲಿ ಹೇಳಿದ ಯಾವೊಂದು ಮಾತನ್ನು ಕೊಟ್ಟ ಭರವಸೆಗಳನ್ನು ನೆರವೇರಿಸಿಲ್ಲ. ಸಿಟಿ ರವಿಯವರು ಕೊಟ್ಟ ಭರವಸೆಗಳು ಜಾರಿಗೆ ತಂದಿಲ್ಲ ಬ್ರಷ್ಟಾಚಾರ ನಿರ್ಮೂಲನೆ ಎಂದು, ಇವರೇ ಭ್ರಷ್ಟಾಚಾರದಲ್ಲಿ ಮುಳಗಿದ್ದು ನಿಮ್ಮ ಸೋಲಿಗೆ ನೀವೇ ಉತ್ತರ ಕೊಡಬೇಕು. ಗ್ಯಾರೆಂಟಿಗಳನ್ನು ಸುಳ್ಳು ಆಶ್ವಾಸನೆಗಳು ಎಂದು ವ್ಯಂಗ್ಯವಾಡಿದರು.ಆದರೆ ಕಾಂಗ್ರೆಸ್ ಪಕ್ಷ ಕ್ಷೀರ ಭಾಗ್ಯ,ಅನ್ನ ಭಾಗ್ಯ, ಇಂದಿರಾ ಕ್ಯಾಂಟೀನ್ ಹೀಗೆ ಹಲವಾರು ಭಾಗ್ಯಗಳನ್ನು ಜಾರಿಗೆ ತಂದರು. ಈಗಲೂ ಸಹ ಭರವಸೆ ಕೊಟ್ಟ ಗ್ಯಾರಂಟಿಗಳನ್ನು ಜಾರಿಗೆ ತಂದೆ ತರುತ್ತೇವೆ,ಎಲ್ಲರ ಪರಿಶ್ರಮದಿಂದ ಜಿಎಚ್ ಶ್ರೀನಿವಾಸ್ ಅಧಿಕ ಮತಗಳಿಂದ ಜಯ ಸಾಧಿಸಿದ್ದಾರೆ. ಕೆಪಿಸಿಸಿ ಸದಸ್ಯರಾದ ಟಿ ವಿ ಶಿವಶಂಕರಪ್ಪ ಮಾತನಾಡಿ ಶಾಂತಿ ಸೌಹಾರ್ದತೆ ಇದ್ದರೆ ಮಾತ್ರ ದೇಶ ಸುಭದ್ರವಾಗಿರುತ್ತದೆ, ಬಿಜೆಪಿಯವರು ಅಲ್ಪಸಂಖ್ಯಾತರ ವಿರುದ್ಧವಾದ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಬಡವರ ಶೋಷಿತರ ಪಕ್ಷ,ಚುನಾವಣೆ ಮುಗಿದ ಮೂರೇ ದಿನಗಳೊಳಗೆ ಕೊಟ್ಟರವಸೆಗಳನ್ನು ಈಡೇರಿಸಲು ಕ್ರಮ ತೆಗೆದುಕೊಂಡಿದೆ ಎಂದು ಹೇಳಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್ ಯು ಫಾರೂಕ್ ಕೆಪಿಸಿಸಿ ಸದಸ್ಯರಾದ ಎಚ್ ವಿಶ್ವನಾಥ್,ಶಿವಾನಂದ ಸ್ವಾಮಿ, ಮಾತನಾಡಿದರು ಅಜ್ಜಂಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಆನಂದಕುಮಾರ್ ಎಸ್ಸಿ ಎಸ್ಟಿ ಘಟಕದ ಜಿಲ್ಲಾಧ್ಯಕ್ಷರಾದ ಮಲ್ಲೇಶ್, ಸಂತೋಷ್, ರವಿ ಶಾನಭೋಗ್, ಸಮಿವುಲ್ಲಾ ಶರೀಫ್, ಪ್ರಕಾಶ್ ವರ್ಮಾ,ಎಆರ್ ರಾಜಶೇಖರ್, ಲಿಂಗದಲ್ಲಿ ರವಿ, ರವಿ ಕಿಶೋರ್, ಪುರಸಭಾ ಅಧ್ಯಕ್ಷರಾದ ಕಮಲಾ ರಾಜೇಂದ್ರ,ಪುರಸಭಾ ಸದಸ್ಯರಾದ ಟಿ ಜಿ ಲೋಕೇಶ್,ಪಾರ್ವತಮ್ಮ, ಗೀತಾ,ಪರಮೇಶ್,ಕರುಕುಚ್ಚಿ ಗೋವಿಂದ ನಾಯ್ಕ, ಟಿವಿ ಕೃಷ್ಣ, ಭಾಗ್ಯಲಕ್ಷ್ಮಿ, ಎಂ ಟಿ ಗಂಗಾಧರ, ಜಗದೀಶ್, ಎಚ್ ಎನ್ ಮಂಜುನಾಥ್,ವೀರಮಣಿ, ರಾಮಚಂದ್ರಪ್ಪ, ಅಮ್ಜದ್,ಇರ್ಫಾನ್ ಮಹಮ್ಮದ್ ಬೇಗ್,ಜಿಯಾವುಲ್ಲ,ಟಿ ಆರ್ ನಾಗರಾಜ್,ಪರ್ವಿನ್ ತಾಜ್, ದಾದಾಪೀರ್, ಪರಶುರಾಮ್ ಮುಂತಾದವರು ಉಪಸ್ಥಿತರಿದ್ದರು, ಈ ಸಂದರ್ಭದಲ್ಲಿ ಗೆಲುವಿಗೆ ಕಾರಣರಾದ ಎಲ್ಲಾ ನಾಯಕರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಶಾಸಕರನ್ನು ಅಭಿನಂದಿಸಿ ಸನ್ಮಾನಿಸಲಾಯಿತು.
ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್.ತರೀಕೆರೆ