ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ – ಸಿ.ತಿಪ್ಪೇಸ್ವಾಮಿ ಅವರಿಗೆ ಅಭಿನಂದನಾ ಕಾರ್ಯಕ್ರಮ.
ನುಂಕೆನಹಳ್ಳಿ ಸ.11

ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಸಿ. ತಿಪ್ಪೇಸ್ವಾಮಿ ರವರಿಗೆ ನುಂಕನಹಳ್ಳಿ ಗ್ರಾಮಸ್ಥರು, ಮುಖಂಡರಿಂದ ಅಭಿನಂದನೆ ಸಲ್ಲಿಸಲಾಯಿತು. ಇದೇ ಗ್ರಾಮದ ಮುಖಂಡರಾದ ಪಾಪೇಶ್ ನಾಯಕ ಮಾತನಾಡಿ ಗಡಿ ಗ್ರಾಮ ನುಂಕನಹಳ್ಳಿಯಲ್ಲಿ ಶಿಕ್ಷಕರಾದ ಸಿ.ತಿಪ್ಪೇಸ್ವಾಮಿ ಯವರಿಗೆ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿರುವುದು ಬಹಳ ಸಂತೋಷವಾಗಿದೆ. ಜೊತೆಗೆ ನಮ್ಮೂರಿನ ಹಿರಿಮೆ ಹೆಚ್ಚಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಕಲಿಕೆಯಲ್ಲಿ ಸತತ 27 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.

ಮುಖ್ಯ ಶಿಕ್ಷಕರಾದ ಸಿ ತಿಪ್ಪೇಸ್ವಾಮಿ ಯವರಿಂದ ಶಿಕ್ಷಣ ಕಲಿತ ಸಾಕಷ್ಟು ವಿದ್ಯಾರ್ಥಿಗಳು ಎಂ.ಎಸ್.ಡಬ್ಲ್ಯೂ, ಬಿ.ಎಸ್.ಸಿ, ಬಿ.ಇಡ್, ಸೇರಿ ಉನ್ನತ ಶಿಕ್ಷಣ ಮುಂದುವರೆಸುತ್ತಿದ್ದಾರೆ, ಇನ್ನೂ ವಿದ್ಯಾರ್ಥಿಗಳು ಉತ್ತಮ ಬದುಕು ರೂಪಿಸಿ ಕೊಂಡಿರುವುದು ಇವರ ಸೇವೆಗೆ ಸಾರ್ಥಕತೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಊರಿನ ಮುಖಂಡರಾದ ಪಾಪೇಶನಾಯಕ, ಮಾಸಲಿ ಓಬಣ್ಣ, ಬಿ.ಓ.ಮಾರೇಶ್, ಗುಜ್ಜಲ ಹನುಮೇಶ್, ಯು.ಎಸ್. ಹನುಮೇಶ್, ಪ್ರಕಾಶರೆಡ್ಡಿ, ಸೋಮೆಂದ್ರ, ಸಿದ್ದಣ್ಣ, ವೆಂಕಟೇಶ್, ನಾಗರಾಜ್, ಮತ್ತು ಶಿಕ್ಷಕ ವೃಂದ ಹಾಗೂ ನುಂಕನಹಳ್ಳಿ ಗ್ರಾಮಸ್ಥರು, ಇತರರು ಸಾರ್ವಜನಿಕರು ಉಪಸ್ಥಿತರಿದ್ದರು.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಕೆ.ಎಸ್.ವೀರೇಶ್.ಕೆ.ಹೊಸಹಳ್ಳಿ