ಖಾನಾ ಹೊಸಹಳ್ಳಿ ಹೋಬಳಿಯಲ್ಲಿ ಗಣೇಶೋತ್ಸವ – ಅದ್ದೂರಿ ಆಚರಣೆ.
ಕೂಡ್ಲಿಗಿ ಸ.11

ಖಾನಾ ಹೊಸಹಳ್ಳಿಯಲ್ಲಿ ಗಣೇಶನ ಹಬ್ಬ ಸಾಕಷ್ಟು ಮಹತ್ವ ಪಡೆದು ಕೊಂಡಿದೆ. ಪಟ್ಟಣದಲ್ಲಿಯೇ 8 ಕ್ಕೂ ಹೆಚ್ಚು ಕಡೆ ಗಣೇಶ ಮೂರ್ತಿಗಳನ್ನ ಪ್ರತಿಷ್ಠಾಪಿಸಿದ್ದಾರೆ ಹಾಗೂ ಹೋಬಳಿ ವ್ಯಾಪ್ತಿಯಲ್ಲಿ 120 ಕ್ಕೂ ಹೆಚ್ಚು ಗಣೇಶ ಮೂರ್ತಿಗಳನ್ನ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಗುತ್ತದೆ. ಮನೆಗಳಲ್ಲಿ ಆಚರಿಸುವುದರ ಜೊತೆಗೆ ಎಲ್ಲರೂ ಒಟ್ಟಾಗಿ ಸಾರ್ವಜನಿಕ ಮೂರ್ತಿಗಳನ್ನು ಸ್ಥಾಪಿಸಿ, ಮೂರು ದಿನಗಳ ಕಾಲ ಇಡುವುದರಿಂದ ಪಟ್ಟಣದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಲಿದೆ. ಜೊತೆಗೆ ಮೂರ್ತಿ ನಿಮಜ್ಜನ ಕಾರ್ಯಕ್ರಮ ಸಹ ವಿಜೃಂಭಣೆಯಿಂದ ಜರುಗುತ್ತದೆ. ಇಲ್ಲಿನ ಪಟ್ಟಣದ ಶ್ರೀ ಕೋಟೆ ವಿನಾಯಕ ಯುವ ಮಿತ್ರ ಮಂಡಳಿ ಹಾಗೂ ಕಾರ್ಯಕಾರಿ ಸಮಿತಿ ಕಾನ ಹೊಸಹಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ 49 ನೇ ವರ್ಷದ ಶ್ರೀ ಕೋಟೆ ವಿನಾಯಕ ಮಹೋತ್ಸವನ ಮಹೋತ್ಸವವನ್ನು ಮೂರು ದಿನಗಳ ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ಈ ವೇಳೆ ಮೂರು ದಿನಗಳ ಕಾಲ ಭಕ್ತಾದಿಗಳಿಗೆ ಅನ್ನ ಸಂತರ್ಪಣೆಯನ್ನು ಹಾಲಪ್ಪರ ಸಿದ್ದಲಿಂಗಪ್ಪ ಎಂ.ಎಸ್ ಬೇಕರಿ ಇವರಿಂದ ಮೊದಲನೇ ದಿನದ ಅನ್ನ ಸಂತರ್ಪಣೆ, ಹಾಗೂ 2ನೇ ದಿನದ ಪ್ರಸಾದ ವಿನಯೋಗ ವೀರಮ್ಮ ದೇವಿ ಮಂಜಣ್ಣ, ಮೂರನೇ ದಿನದ ಪ್ರಸಾದ ವಿನಿಯೋಗ ವೀರೇಶ್ ಸಿದ್ದಾಪುರ ರುಚಿ ದರ್ಶನ ಹೋಟೆಲ್ ಮಾಲೀಕರು ಭಕ್ತಾದಿಗಳಿಗೆ ಏರ್ಪಡಿಸಲಾಗಿತ್ತು. ರಂಗೋಲಿ ಸ್ಪರ್ಧೆ ಹಾಗೂ ಸೈಕಲ್ ಸ್ಪರ್ಧೆ ಏರ್ಪಡಿಸಲಾಗಿತ್ತು. ಶ್ರೀ ಕೋಟೆ ವಿನಾಯಕ ಮೂರ್ತಿಯ ಸೇವಕರ್ತರು ಕೆ ಜಿ ರತ್ನಮ್ಮ ಕೆ.ಜಿ ದಿನೇಶ್ ಗೌಡ್ರು, ಕೇಚನ್ನಪ್ಪ ವಕೀಲರು ಯುವಕರಿಗೆ ಟೀ ಶರ್ಟ್ ಕೊಡುಗೆ ನೀಡಿದ್ದಾರೆ. ಈ ಬೆಳೆ ಕಂಟಿಯ ಅಧ್ಯಕ್ಷ ಮಾತನಾಡಿ ಭಕ್ತಿಯಿಂದ ಗಣಪತಿಯನ್ನು ಹೇಗೆ ಬರಮಾಡಿ ಕೊಂಡಿರುತ್ತೇವೋ ಹಾಗೆಯೇ ನಿಮಜ್ಜನ ಮಾಡುತ್ತೇವೆ’ ಎಂದಿದ್ದಾರೆ. ಈ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಿದ 49 ನೇ ಶ್ರೀ ಕೋಟೆ ವಿನಾಯಕರ ಮಿತ್ರ ಮಂಡಳಿ ಸದಸ್ಯರು ಎಚ್ ಕೆ ಅವಿನಾಶ್, ಎಂ ಜಿ ಲೋಕೇಶ್, ಎಚ್ ಎಂ ನಟರಾಜ್, ಕಲ್ಲೇಶ್ ಎಂ, ಅಂಜಿನಪ್ಪ ಅಮಲಾಪುರ, ಜಿ ಅಜಯ್, ಜಗದೀಶ್ ಎಂ ಜಿ, ಕೆ ಜಿ ಕೊಟ್ರೇಶ್, ರಾಕೇಶ್ ಕುಡ್ದಾಪುರ್, ಎಂ ನಾಗೇಶ್, ಎಚ್.ಎಂ ಶಾಂತ ಸ್ವಾಮಿ, ಜಿ ಜ್ಯೋತಶ, ಜಿ ವೀರೇಂದ್ರ, ಜಿ ಗಜೇಂದ್ರ, ಸುರೇಶ್ ಆಚಾರಿ, ನಾಗೇಶ್ ಆಚಾರಿ, ನಾಗರಾಜ್ ಬಂಕಾಪುರ, ಧನರಾಜ್ ದೊಣ್ಣೆ ಹಳ್ಳಿ, ಎಸ್ ಪಿ ಸಿದ್ದೇಶ್, ಪ್ರದೀಪ್ ಬೇಕ್ರಿ, ಉಮೇಶ್ ಸ್ವಾಮಿ, ಎಂ ನಾಗೇಶ್, ಜಿ ವಿಕಾಸ್, ದರ್ಶನ್ ಸ್ವಾಮಿ, ಶಶಾಂಕ್ ಬಾಬು, ಚಂದ್ರ ಗೌಡ, ಶ್ರೀಧರ್ ಗೌಡ, ಶಿವರಾಜ್ ಡ್ರೈವರ್, ಸುರೇಶ್ ಗೌಡ, ಕಲ್ಲೇಶ್ ಗೌಡ, ಯಶ್ವಂತ್, ರಾಕೇಶ್, ಮಹೇಶ್ ಹಾಗೂ ಊರಿನ ಮುಖಂಡರು ಇದ್ದರು.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಕೆ.ಎಸ್.ವೀರೇಶ್.ಕೆ.ಹೊಸಹಳ್ಳಿ