ಹಿಂದೂ ಮುಸ್ಲಿಂ ಸಮಾಜ ಸೇರಿಕೊಂಡು ಗಣೇಶ ಹಬ್ಬ ಅದ್ದೂರಿಯಾಗಿ ಆಚರಣೆ.
ದೇವೂರ ಸ.11

ಒಟ್ಟಿನಲ್ಲಿ ಗಣೇಶ ಪ್ರತಿಷ್ಠಾಪನೆ ಎನ್ನುವುದು ಹಿಂದೂಗಳಿಗೆ ಮಾತ್ರ ಎಂಬ ಭಾವನೆಯನ್ನು ದೇವೂರ ಗ್ರಾಮದ ಮುಸ್ಲಿಂ ಯುವಕರು ದೂರ ಮಾಡಿದ್ದಾರೆ. ಹಿಂದೂ- ಮುಸ್ಲಿಂ ಯುವಕರು ಸೇರಿ ಪ್ರತಿ ವರ್ಷ ಗಣೇಶನ ಹಬ್ಬ ಆಚರಿಸುತ್ತಿರುವುದು ನಾವೆಲ್ಲರೂ ಒಂದೇ ಎಂಬ ಭಾವನೆ ಬೆಳೆಯುವುದಕ್ಕೆ ದೇವೂರ ಗ್ರಾಮದ ಯುವಕರು ಮಾದರಿ ಯಾಗಿದ್ದಾರೆ. ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ಹತ್ತಿರ ದೇವೂರ ಗ್ರಾಮದಲ್ಲಿ ಅಂಬಿಗರ ಚೌಡಯ್ಯ ದೇವಾಸ್ಥಾನದಲ್ಲಿ ಪ್ರತಿ ವರ್ಷ ಗಣೇಶನನ್ನು ಪ್ರತಿಷ್ಠಾಪಿಸಿ ಐದು ದಿನಗಳ ಕಾಲ ಪೂಜಿಸುವುದರ ಮೂಲಕ ಭಾವೈಕ್ಯತೆಯ ಭಾವ ಮೆರೆದಿದ್ದಾರೆ. ಮುಸ್ಲಿಂ ಯುವಕರು ಹಿಂದೂ ಹಬ್ಬ ಆಚರಣೆ ಮಾಡುವ ಮೂಲಕ ನಾವೆಲ್ಲ ಒಂದೇ ಎಂಬ ಸಂದೇಶ ಸಾರಲಾಗಿದೆ. ಮುಸ್ಲಿಂ ಸಮುದಾಯದ ಯುವಕರಾದ ಪೈಗಂಬರ್ ನಧಾಪ, ಸಿಕಿಂದರ ನಧಾಪ,ರಫೀಕ್ ಮುಲ್ಲಾ, ರಾಜು ನಧಾಪ, ಬಂದಗಿಸಾಬ ನಧಾಪ, ಅಬ್ಬಾಸಲಿ ನಧಾಪ, ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿ ನಿತ್ಯ ಪೂಜೆ ಸಲ್ಲಿಸುವ ಮೂಲಕ ದೇವೂರ ಗ್ರಾಮದಲ್ಲಿ ಸಾಮರಸ್ಯದ ಸಂದೇಶ ಸಾರುತ್ತಿದ್ದಾರೆ.ಅಬ್ಬಾಸಲಿ ಭಾಗವನ ಅವರು ದೇವೂರ ಗ್ರಾಮದಲ್ಲಿ ಎಲ್ಲಾ ಜಾತಿ ಜನಾಂಗದವರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ನಾವೆಲ್ಲರೂ ಕೂಡಿ ಇರೋಣ, ಮಾನವರು ನಾವೆಲ್ಲ ಒಂದೇ ಎಂಬ ತತ್ವದಲ್ಲಿ ಜೀವನ ಸಾಗಿಸ ಬೇಕೆಂದು ಹೇಳುತ್ತಾರೆ. ಬರೀ ಹೇಳುವುದೊಂದೇ ಅಲ್ಲ, ಅದರಂತೆ ನಡೆದುಕೊಂಡು ಬರುತ್ತಿದ್ದಾರೆ. ಒಂದು ಉತ್ತಮ ಸಂದೇಶವನ್ನು ಸಮಾಜಕ್ಕೆ ನೀಡುತ್ತಿದ್ದಾರೆ. ಕೂಡಿ ಬಾಳಿದರೆ ಸ್ವರ್ಗ ಸುಖ ಅನ್ನುತ್ತಾರಲ್ಲ ಹಾಗೆ.ಮುಸ್ಲಿಂ ಹಬ್ಬ ಆಚರಣೆ ಮಾಡಿಕೊಂಡು ಬರುವ ಜೊತೆ ಹಿಂದೂ ಹಬ್ಬಗಳನ್ನು ಕೂಡ ಆಚರಣೆ ಮಾಡಿಕೊಂಡು ಬರುತ್ತಿದ್ದಾರೆ. ಗಣೇಶ ಚತುರ್ಥಿ ದಿನ ದಂದು ಗಣೇಶ ಪ್ರತಿಷ್ಠಾಪಿಸಿ ಐದು ದಿನಗಳ ಕಾಲ ನಿತ್ಯವೂ ಪೂಜೆ ಮಾಡುತ್ತಾರೆ. ಮಕ್ಕಳು ಕೂಡ ಗಣೇಶನ ಪೂಜೆಯಲ್ಲಿ ಭಾಗಿಯಾಗುತ್ತಾರೆ. 10 ವರ್ಷಗಳಿಂದ ನಿರಂತರವಾಗಿ ಗಣೇಶನನ್ನು ಪ್ರತಿಷ್ಠಾಪಿಸುವುದರ ಮೂಲಕ ಸಾಂಪ್ರದಾಯಿಕ ಹಬ್ಬಕ್ಕೆ ಚಾಲನೆ ನೀಡಿ ನಂತರ ನಿತ್ಯ ಪೂಜೆ ಹಾಗೂ ಅನ್ನ ಸಂತರ್ಪಣೆ ಕೈಗೊಳ್ಳುತ್ತಿದ್ದಾರೆ. ಜಾತಿ ಬೆರೆಯಾದರು ನಾವೆಲ್ಲ ಮಾನವರು ಒಂದೆ ಎಂಬ ಭಾವನೆ ಪ್ರತಿಯೊಬ್ಬರಲ್ಲೂ ಬರಬೇಕೆಂದು ಅಬ್ಬಾಸಲಿ ಭಾಗವಾನ್ ಅವರ ಮಾತಾಗಿದೆ. ಪ್ರತಿ ಗಣೇಶ ಚತುರ್ಥಿ ನಮಗೆ ವಿಶೇಷ ಪ್ರತಿಷ್ಠಾಪನೆಯ ಆರಂಭದಿಂದ ಈ ಐದು ದಿನಗಳ ಕಾಲ ಗ್ರಾಮದ ಎಲ್ಲರೊಂದಿಗೆ ಬೆರೆತು ಭಕ್ತಿ ಭಾವದಿಂದ ಪೂಜಿಸಿ, ಅನ್ನ ಸಂತರ್ಪಣೆ ಕೈಗೊಂಡು ಐದು ದಿನದ ನಂತರ ಸಂಜೆ ಅದ್ದೂರಿ ಮೆರವಣಿಗೆ ಮೂಲಕ ಗಣೇಶನನ್ನು ವಿಸರ್ಜನೆ ಗೊಳಿಸುವುದರ ಮೂಲಕ ಹಬ್ಬವನ್ನು ಸಂಭ್ರಮಿಸುತ್ತೇವೆ ಎನ್ನುವ ಅಬ್ಬಾಸಲಿ ಬಾಗವಾನ ಮಾತನ್ನು ಹಾಗೂ ಎಲ್ಲ ಯುವಕರ ಕಾರ್ಯವನ್ನು ಗ್ರಾಮಸ್ಥರು ಬೆನ್ನುತಟ್ಟಿ ಪ್ರೋತ್ಸಾಹಿಸಿದ್ದಾರೆ. ಗ್ರಾಮದವರಾದ ಮುದಕಪ್ಪ ಮೆಟಗಾರ, ಸಾಯಿನಾಥ್ ಕಂಬಾರ,ಸಂತೋಷ ಮೆಟಗಾರ್, ಭೀಮು ತಾಂಬೆ, ಲಕ್ಷ್ಮಣ ಆಳುರ,ಬೀರಣ್ಣ ಪೂಜಾರಿ, ಯಲ್ಲಾಲಿಂಗ ತಳವಾರ, ಮಲ್ಲಪ್ಪ ಮಸೀಬನಾಳ, ಅಕ್ಷಯ ತಳವಾರ,ಕುಮಾರ್ ಪೂಜಾರಿ ಸೇರಿದಂತೆ ಅವರ ಅನೇಕ ಸ್ನೇಹಿತರು ಸುತ್ತ ಮುತ್ತಲಿನ ಗ್ರಾಮಸ್ಥರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬಾಕ್ಸ್ ಸುದ್ದಿ-
ಜಾತಿ ಬೆರೆಯಾದರು ನಾವೆಲ್ಲರೂ ಒಂದೇರಿ ವಿಶ್ವಾಸದಿಂದ ಬದುಕಬೇಕು. ನಾವು ನಮ್ಮ ಸಮುದಾಯದ ಹಬ್ಬದ ಜೊತೆ ಹಿಂದೂ ಹಬ್ಬ ಕೂಡ ಆಚರಣೆ ಮಾಡಿಕೊಂಡು ಬರುತ್ತಿದ್ದೇವೆ. ಸುಮಾರು ಹತ್ತು ವರ್ಷದಿಂದ ಗಣೇಶ ಮೂರ್ತಿ ಕೂಡಿಸಿ ಪೂಜೆ ಮಾಡಿಕೊಂಡು ಜಾತಿ, ಧರ್ಮ ಭೇದ, ಭಾವ ಮಾಡದೆ ಎಲ್ಲರೂ ಒಟ್ಟಾಗಿ ಅನ್ನ ಪ್ರಸಾದ ವ್ಯವಸ್ಥೆ ಮಾಡಿಕೊಂಡು ಬರುತ್ತಿದ್ದೇವೆ. ಸರ್ವರಿಗೂ ಅಲ್ಲಾ, ಸೃಷ್ಟಿಕರ್ತ ಭಗವಂತ ಒಳಿತನ್ನು ಮಾಡಲಿ ಎಂದು ಶುಭ ಹಾರೈಸಿದರು. ಅಬ್ಬಾಸಲಿ ಭಾಗವಾನ್ ಗ್ರಾಮ ಪಂಚಾಯತ್ ಸದಸ್ಯರು ದೇವೂರ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರತಾಪ್.ವಾಯ್.ಕಿಳ್ಳಿ.ಇಲಕಲ್ಲ.