ಇಂದು ರಾಂಪುರ ದಿಂದ ಬಿ.ಜಿ ಕೆರೆಯವರಿಗೂ ಪ್ರಜಾಪ್ರಭುತ್ವ ಮಾನವ ಸರಪಳಿ ಕಾರ್ಯಕ್ರಮ – ಯಶಸ್ವಿ ಗೊಳಿಸಿದ ಶಾಸಕರು.
ರಾಂಪುರ ಸ.15

ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಇಂದು ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಎನ್ ವೈ ಗೋಪಾಲಕೃಷ್ಣರವರು ಮಾನವ ಸರಪಳಿ ಕಾರ್ಯಕ್ರಮ ರಾಂಪುರ ಗ್ರಾಮ ಪಂಚಾಯತಿ ಮುಂಭಾಗ ಉದ್ಘಾಟಿಸಿ ಮಾತನಾಡಿದರು.ನಮ್ಮ ಗಡಿ ಗ್ರಾಮದಿಂದ ಮೇಲಿನ ಕಣಿವೆಯಿಂದ ಬಿ.ಜಿ ಕೆರೆಯವರೆಗೆ ಯಶಸ್ವಿಯಾಗಿ ಮಾನವ ಸರಪಳಿ ಕಾರ್ಯಕ್ರಮ ಯಶಸ್ವಿಗೆ ಕಾರಣೀಭೂತರಾದ ಎಲ್ಲರಿಗೂ ನನ್ನ ಹೃತ್ಪೂರ್ವಕವಾದ ಅಭಿನಂದನೆಗಳು ತಿಳಿಸಿದರು. ಮತ್ತು ಮೊಳಕಾಲ್ಮೂರು ಪಟ್ಟಣದ ಮಹಾ ಗಣಪತಿ ವಿಸರ್ಜನೆಗೆ ಶೋಭ ಯಾತ್ರೆಗೆ ಚಾಲನೆ ನೀಡಿದ ಶಾಸಕರು ಈ ಸಂದರ್ಭದಲ್ಲಿ ಉಪ ವಿಭಾಗಾಧಿಕಾರಿಗಳಾದ ಕಾರ್ತಿಕ್, ಗ್ರಾಮ ಪಂಚಾಯತ ಅಧ್ಯಕ್ಷರಾದ ಟಿ ನಾಗವೇಣಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಸಂಘ ಸಂಸ್ಥೆ ಮುಖ್ಯಸ್ಥರು,ಶಾಲಾ ಮಕ್ಕಳು, ಶಿಕ್ಷಕರು,ಮೊದಲಾದವರು ಉಪಸ್ಥಿತರಿದ್ದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ತಿಪ್ಪೇಸ್ವಾಮಿ.ಹೊಂಬಾಳ. ಮೊಳಕಾಲ್ಮೂರು