ರಾಜ್ಯ ಮಟ್ಟದ ಬೆಂಚ್ ಪ್ರೆಸ್ ಸ್ಪರ್ಧೆ.
ಹೊಸಪೇಟೆ ಸ.17

ಉಡುಪಿ ಜಿಲ್ಲೆಯ ಸಾಲಿಗ್ರಾಮದಲ್ಲಿ ನಡೆದ ರಾಜ್ಯ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ವಿಜಯನಗರ ಜಿಲ್ಲೆಗೆ ಚಿನ್ನ, ಬೆಳ್ಳಿ, ಕಂಚು ಸೇರಿದಂತೆ ಒಟ್ಟು 17 ಪದಕಗಳು ಲಭಿಸಿವೆ.ಇದೇ 13 ರಿಂದ 15 ರವರೆಗೆ ಎರಡು ದಿನಗಳ ಕಾಲ ಇಕ್ಯೂಪ್ಡ್ ಮತ್ತು ಕ್ಲಾಸಿಕ್ ಬೆಂಚ್ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಕರ್ನಾಟಕ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ 815 ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಪಟುಗಳು ಭಾಗವಹಿಸಿದ್ದರು. ಜೊತೆಯಲ್ಲಿ ವಿಜಯನಗರದ ಜಿಲ್ಲೆಯಿಂದ ಮಹಿಳೆಯರು ಸೇರಿದಂತೆ 15 ಜನ ಕ್ರೀಡಾಪಟುಗಳು ಸ್ಪರ್ಧಿಗಳಾಗಿ ಭಾಗವಹಿಸಿದ್ದರು. ವಿಶೇಷ ವೆಂದರೆ ಸತತ ಮೂರು ಬಾರಿಯೂ ಕರ್ನಾಟಕ ಬೆಸ್ಟ್ ಲೀಫ್ಟರ್ ಟ್ರೋಫಿಯನ್ನು ವಿಜಯನಗರದ ಬಲಿಷ್ಠ ಕ್ರೀಡಾಪಟುಗಳಾದ ವಲಿಬಾಷ ಮತ್ತು ವಿಜಯವಾಣಿ ತಮ್ಮದಾಗಿಸಿ ಕೊಂಡರು. ಸ್ಪರ್ಧೆಯಲ್ಲಿ ಭಾಗವಹಿಸಿದ ಕ್ರೀಡಾಪಟುಗಳು 74 kg M1 ವಿಭಾಗದಲ್ಲಿ ವಲಿಭಾಷ ಎರಡು ವಿಭಾಗದಲ್ಲೂ ಬಂಗಾರದ ಪದಕ ಹಾಗು ಕರ್ಣಾಟಕ ಬೆಸ್ಟ್ ಲಿಫ್ಟರ್ ಟ್ರೋಫಿ ಮತ್ತು ಮಹಿಳೆಯರ 76 kg M1 ವಿಭಾಗದಲ್ಲಿ ವಿಜಯವಾಣಿ ಎರಡು ವಿಭಾಗದಲ್ಲೂ ಬಂಗರಾದ ಪದಕ ಹಾಗೂ ಕರ್ಣಾಟಕ ಬೆಸ್ಟ್ ಲಿಪ್ಟರ್ ಟ್ರೋಫಿ ಮಾತ್ರವಲ್ಲದೆ ವಲಿಭಾಷ ಅವರ ಗರಡಿಯಲ್ಲಿ ತರಬೇತಿ ಪಡೆಯುತ್ತಿರುವ 8 ಜನ ಕ್ರೀಡಾಪಟುಗಳು 93 kg M2 ವಿಭಾಗದಲ್ಲಿ ಅರುಣ್ ಕುಮಾರ್ 2 ಬೆಳ್ಳಿ, 59 kg ಸೀನಿಯರ್ ವಿಭಾಗದಲ್ಲಿ ಹುಸೇನ್ ಬಾಷಾ, 2 ಬಂಗಾರ ಪದಕ , 74 kg ಸಿನಿಯರ್ ವಿಭಗದಲ್ಲಿ ಹಸೇನ್ ಕೆ ಎಸ್ ಒಂದು ಚಿನ್ನ ಹಾಗೂ ಒಂದು ಕಂಚಿನ ಪದಕ 59 kg ಜೂನಿಯರ್ ವಿಭಾಗಲ್ಲಿ ಗೌಸ್ ಪೀರ್ ಎಂ ಒಂದು ಬೆಳ್ಳಿ ಒಂದು ಕಂಚಿನ ಪದಕ, 74 kg ಸೀನಿಯರ್ ವಿಭಾಗಲ್ಲಿ ಜೈ ಶರಣ ಒಂದು ಬೆಳ್ಳಿ, 74 kg ಜೂನಿಯರ್ ವಿಭಾಗದಲ್ಲಿ ದೀಪಕ್ ಕೆಎಸ್ ಒಂದು ಬೆಳ್ಳಿ, ಸಬ್ ಜೂನಿಯರ್ 74 kg ವಿಭಾಗ ಅಬ್ದುಲ್ಲ ಒಂದು ಬೆಳ್ಳಿ, ಸೀನಿಯರ್ 59 kg ವಿಭಾಗದಲ್ಲಿ ಗಂಗಾಧರ 2 ಕಂಚಿನ ಪದಕವನ್ನೂ ಪಡೆದಿರುತ್ತಾರೆ.

ಅಲ್ಲದೆ ಅಕ್ಟೋಬರ್ ತಿಂಗಳಲ್ಲಿ 14 ರಿಂದ 18 ರವರೆಗೆ ಗೋವಾದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಪವರ್ ಲಿಫ್ಟಿಂಗ್ ಬೆಂಚ್ ಪ್ರೆಸ್ ಸ್ಪರ್ಧೆಯಲ್ಲಿ ಭಾಗವಹಿಸಿ ನಮ್ಮ ಕರ್ನಾಟಕಕ್ಕೆ ಹಾಗೂ ವಿಜಯನಗರ ಜಿಲ್ಲೆಗೆ ಕೀರ್ತಿ ತರಲೆಂದು ಇವರ ಈ ಅದ್ಭುತ ಸಾಧನೆಯನ್ನು ನೋಡಿ ವಿಜಯನಗರ ಜಿಲ್ಲೆಯ ಟೀಮ್ ಎಸ್.ಆರ್.ಕೆ ಕರ್ನಾಟಕ ಹಾಗೂ ಟೀಮ್ ಎಸ್.ಆರ್.ಕೆ ಹೊಸಪೇಟೆ ಅವರು ಹಾಗೂ ನಗರದ ಕ್ರೀಡಾಭಿಮಾನಿಗಳು ಕ್ರೀಡಾ ಪ್ರೋತ್ಸಾಹಕರು. ವಿಕ್ಟರಿ ಜಿಮ್ ನ ಕ್ರೀಡಾಪಟುಗಳಿಗೆ ಶುಭ ಕೋರಿದ್ದಾರೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಾಲತೇಶ್.ಶೆಟ್ಟರ್.ಹೊಸಪೇಟೆ