2024-25 ಸಾಲಿನ ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆಗಾಗಿ ಜಿಲ್ಲಾ ಮಟ್ಟದ ಗಣಿತ ವಿಷಯದ ಕಾರ್ಯಾಗಾರ.
ಕೂಡ್ಲಿಗಿ ಸ.18

ಗಣಿತ ಕಾರ್ಯಗಾರ ಕಾರ್ಯಕ್ರಮದಲ್ಲಿ ನೆರೆದಂತ ನೂರಾರು ಗಣಿತ ವಿಷಯದ ಶಿಕ್ಷಕರಿಗೆ ತಮ್ಮ ಶಾಲೆಗಳಲ್ಲಿ ಬಾಲ್ಯ ವಿವಾಹ ತಡೆಗಟ್ಟುವಂತೆ ಮನವಿ ಮಾಡಿದ, ಎನ್.ಟಿ.ಶ್ರೀನಿವಾಸ್ ಶಾಸಕರು.
ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೂಡ್ಲಿಗಿ ಪಟ್ಟಣದ ಹಿರೇಮಠ ಕಲ್ಯಾಣ ಮಂಟಪ ಕೂಡ್ಲಿಗಿಯಲ್ಲಿ ಬುಧವಾರ ರಂದು ಕ್ಷೇತ್ರ ಶಿಕ್ಷಣಧಿಕಾರಿಗಳ ಕಛೇರಿ ಕ್ಷೇತ್ರ ಸಮನ್ವಯ ಅಧಿಕಾರಿಗಳು ಹಾಗೂ ಮಧ್ಯಹ್ನ ಬಿಸಿಯೂಟ ಅಧಿಕಾರಿಗಳು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಶಿಕ್ಷಣಾಧಿಕಾರಿಗಳು ಸಂಘ, ಸರ್ಕಾರಿ ಅನುದಾನಿತ ಪ್ರೌಢ ಶಾಲಾ ಮುಖ್ಯ ಗುರುಗಳ ಮತ್ತು ಸಹ ಶಿಕ್ಷಕರ ಸಂಘ ಹಾಗೂ ತಾಲೂಕ ಪ್ರೌಢ ಶಾಲಾ ಗಣಿತ ಶಿಕ್ಷಕರ ವೇದಿಕೆ ಕೂಡ್ಲಿಗಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ 2024-25 ನೇ ಸಾಲಿನ ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆಗಾಗಿ ಒಂದು ದಿನದ ಜಿಲ್ಲಾ ಮಟ್ಟದ ಪ್ರೌಢ ಶಾಲಾ ಗಣಿತ ಶಿಕ್ಷಕರ ಶೈಕ್ಷಣಿಕ ಕಾರ್ಯಾಗಾರವನ್ನು ನಡೆಸಲಾಯಿತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಮಾನ್ಯ ಎನ್.ಟಿ ಶ್ರೀನಿವಾಸ್ ಹಾಗೂ ಪ್ರಶಾಂತ ಸಾಗರ ಶಿವಚಾರ್ಯ ಸ್ವಾಮೀಜಿ ಹಾಗೂ ಪ.ಪಂ. ಅಧ್ಯಕ್ಷರು ಕಾವಲ್ಲಿ ಶಿವಪ್ಪ ನಾಯಕ ದೀಪ ಬೆಳಗಿಸುವುದರ ಮೂಲಕ ಉದ್ಘಾಟನೆಯನ್ನು ಮಾಡಿ ಗಣಿತ ಕಾರ್ಯಗಾರದ ಕುರಿತು ಮಾನ್ಯ ಶಾಸಕರು ಮಾತನಾಡುತ್ತಾ ತಮ್ಮ ಚಿಕ್ಕವಯಸ್ಸಿನಲ್ಲಿ ತಮ್ಮ ಗಣಿತ ವಿಷಯದ ಶಿಕ್ಷಕರನ್ನು ನೆನೆಯುತ್ತಾ ಮಾತನಾಡಿದರು,

ಹಾಗೆ ಈ ಸಂದರ್ಭದಲ್ಲಿ ನೆರೆದಂತ ನೂರಾರು ಶಿಕ್ಷಕರಿಗೆ ಕೂಡ್ಲಿಗಿ ಮತ್ತು ಹಡಗಲಿ ತಾಲೂಕಿನಲ್ಲಿ ಹೆಚ್ಚುತ್ತಿರುವ ಬಾಲ್ಯ ವಿವಾಹದ ಕುರಿತು ಮಾತನಾಡುತ್ತಾ ಬಾಲ್ಯ ವಿವಾಹವನ್ನು ತಡೆಗಟ್ಟುವ ಕುರಿತು ಎಲ್ಲ ಶಿಕ್ಷಕ ವೃಂದದವರು ತಮ್ಮ ತಮ್ಮ ಶಾಲೆಗಳಲ್ಲಿ ಮಕ್ಕಳಿಗೆ ಬಾಲ್ಯ ವಿವಾಹ ತಡೆಗಟ್ಟುವಂತೆ ಜಾಗೃತಿ ಮೂಡಿಸಬೇಕು ಎಂದು ಮನವಿ ಮಾಡಿದರು, ಹಾಗೆ ಈ ಸಂದರ್ಭದಲ್ಲಿ ಗಣಿತ ವಿಷಯ ಶಿಕ್ಷಕ ಸಂಘದ ಅಧ್ಯಕ್ಷರಾದ ಕೆ.ಎಸ್. ವೀರೇಶ್ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದ ವೇದಿಕೆಯಲ್ಲಿ ಬಿ.ಇ.ಓ ಪದ್ಮನಾಭಕರಣಂ, ಓ.ಆರ್ ಪ್ರಕಾಶ್ ಉಪ ನಿರ್ದೇಶಕರು ಶಾಲಾ ಶಿಕ್ಷಣ ಶಿವರಾಜ್ ಫಾಲ್ತುರ್ ಅಧ್ಯಕ್ಷರು ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘ, ಎಸ್.ಎಸ್ ಜಗದೀಶ್ ಕ್ಷೇತ್ರ ಸಮನ್ವಯ ಅಧಿಕಾರಿಗಳು ಕೂಡ್ಲಿಗಿ, ಕೆ.ಜಿ ಆಂಜನೇಯ ಸಹಾಯಕ ನಿರ್ದೇಶಕರು ಅಕ್ಷರ ದಾಸೋಹ ಕೂಡ್ಲಿಗಿ, ಎಸ್.ವಿ ಸಿದ್ದಾರಾಧ್ಯ ಅಧ್ಯಕ್ಷರು ಕರ್ನಾಟಕ ರಾಜ್ಯ ಪ್ರೌಢ ಶಾಲಾ ಸಹಕಾರ ಸಂಘ ಕೂಡ್ಲಿಗಿ, ಪ.ಪಂ ಸ್ಥಾಯಿ ಸಮಿತಿ ಅಧ್ಯಕ್ಷರಾದ ಸೈಯದ್ ಶುಕರು, ಸಂಪನ್ಮೂಲ ವ್ಯಕ್ತಿಗಳಾದ ಬಿ.ಎನ್ ಲಕ್ಷ್ಮಣ ಸರ್ಕಾರಿ ಪ್ರೌಢ ಶಾಲೆ ಹಿರೇ ಬಿದಿರಿ, ಕೆ.ಓ ನಾಗೇಶ್ ಸರ್ಕಾರಿ ಪ್ರೌಢ ಶಾಲೆ ಚಳಕೆರೆ ಚಿತ್ರದುರ್ಗ ಜಿಲ್ಲೆ, ಮತ್ತು ಮಂಜುನಾಥ್, ಎಂ.ಜೆ ಕಾರ್ಯದರ್ಶಿ ಗಣಿತ ಶಿಕ್ಷಕರ ಸಂಘ ಕೂಡ್ಲಿಗಿ, ನರಸಪ್ಪ, ಹುಲಿ ಬಂಡಿ ಎಚ್ ಎಂ, ರಾಜಶೇಖರ್, ಏನ್.ಜಿ ಮನೋಹರ್,ಅನಂತ್ ಕುಮಾರ್.ಪಿ, ಪಿ.ಡಿ ರಂಗಪ್ಪ, ಪಕೀರಪ್ಪ, ಬಿಎಸ್ ಕರಿಬಸಪ್ಪ, ಡಿ ಸಿದ್ದಪ್ಪ, ಡಾಕ್ಟರ್ ಎಮ್ ಕರಿಬಸಪ್ಪ, ಡಿ.ಕೆ ಆನಂದ ಇನ್ನೂ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರಾಘವೇಂದ್ರ.ಬಿ.ಸಾಲುಮನೆ.ಕೂಡ್ಲಿಗಿ ವಿಜಯನಗರ