ದಲಿತ ಸಾಹಿತ್ಯ ಪರಿಷತ್ ಚಿತ್ರದುರ್ಗ ಜಿಲ್ಲಾ ಘಟಕದ ಪದಾಧಿಕಾರಿಗಳ ಆಯ್ಕೆ.
ಚಿತ್ರದುರ್ಗ ಸ.18

ಶಿವಮೂರ್ತಿ.ಟಿ.ಕೋಡಿಹಳ್ಳಿಜಿಲ್ಲಾಧ್ಯಕ್ಷರುದಲಿತ ಸಾಹಿತ್ಯ ಪರಿಷತ್, ಚಿತ್ರದುರ್ಗ
ಚಿತ್ರದುರ್ಗ ಜಿಲ್ಲೆಯ ದಲಿತ ಸಾಹಿತ್ಯ ಪರಿಷತ್ ನ ಅಧ್ಯಕ್ಷರಾಗಿ ಟಿ.ಶಿವಮೂರ್ತಿ ಸಾಹಿತಿಗಳು ಕೋಡಿಹಳ್ಳಿ, ಉಪಾಧ್ಯಕ್ಷರಾಗಿ ಪ್ರೊ.ಲಿಂಗಪ್ಪ, ಹಿರಿಯ ಸಾಹಿತಿಗಳು, ಕಾರ್ಯದರ್ಶಿಗಳಾಗಿ ಪರಶುರಾಮ್.ಎಂ ಶಿಕ್ಷಕರು ಕೊಳಾಳು, ಖಜಾಂಚಿಯಾಗಿ ಮಲ್ಲಿಕಾರ್ಜುನ್ ತಾಳ್ಯ, ನಿರ್ದೇಶಕರಾಗಿ ಕೆ.ಟಿ ಮುತ್ತುರಾಜ್ ಗಾಯಕರು, ನಿರ್ದೇಶಕರಾಗಿ ಶ್ರೀಮತಿ ಶಬ್ರಿನಾ ಮಹಮದ್ ಅಲಿ ಶಿಕ್ಷಕರು ಚಳ್ಳಕೆರೆ, ಪತ್ರಿಕಾ ಸಲಹೆಗಾರರಾಗಿ ರಾಮಾಂಜನೇಯ.ಕೆ.ದೊಡ್ಮನೆ, ಪ್ರಕಾಶನ ಸಲಹೆಗಾರರಾಗಿ ಶ್ರೀ ರಾಜು.ಎಸ್ ಕವಿ ಸೂಲೇನಹಳ್ಳಿ ,ಸಾಹಿತ್ಯಕ ಸಲಹೆಗಾರರಾಗಿ ಡಾ, ಎಸ್.ಏಚ್ ಶಫಿ ಉಲ್ಲಾ ಸಾಹಿತಿಗಳು, ಸದಸ್ಯರಾಗಿ ಕು. ಸಿ.ಎಂ.

ನೇತ್ರಾವತಿ ನೆಲ್ಲಿಕಟ್ಟೆ ಕವಯಿತ್ರಿ, ಮತ್ತೊಬ್ಬ ಸದಸ್ಯರಾಗಿ ಶಿವಾನಂದ್.ಎನ್ ಶಿಕ್ಷಕರು, ಗುಳ್ಯಾ, ಹಿರಿಯೂರು ಈ ಮೇಲ್ಕಂಡ ಎಲ್ಲಾ ಪದಾಧಿಕಾರಿಗಳನ್ನು ದಲಿತ ಸಾಹಿತ್ಯ ಪರಿಷತ್ ನ ವಿಭಾಗಿಯ ಸಂಯೋಜಕರಾದ ಗಣಪತಿ ಚಲವಾದಿ ಹಾಗೂ ರಾಜ್ಯಾಧ್ಯಕ್ಷರಾದ ಡಾ, ಅರ್ಜುನ್ ಗೊಳಸಂಗಿ ರವರ ಮತ್ತು ರಾಜ್ಯ ಸಮಿತಿಯ ಎಲ್ಲರ ಒಪ್ಪಿಗೆಯ ಮೇರೆಗೆ ಚಿತ್ರದುರ್ಗ ಜಿಲ್ಲಾ ದಲಿತ ಸಾಹಿತ್ಯ ಪರಿಷತ್ ನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ದಲಿತ ಸಾಹಿತ್ಯ ಪರಿಷತ್ ಚಿತ್ರದುರ್ಗದ ಜಿಲ್ಲಾಧ್ಯಕ್ಷರಾದ ಶಿವಮೂರ್ತಿ.ಟಿ ಕೋಡಿಹಳ್ಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಹಾಗೂ ಅತೀ ಶೀಘ್ರದಲ್ಲಿ ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ ಮತ್ತು ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿರುತ್ತಾರೆ.
ವರದಿ:ಕೋಡಿಹಳ್ಳಿ.ಟಿ.ಶಿವಮೂರ್ತಿ.ಚಿತ್ರದುರ್ಗ