ನೂತನ ಕ್ಷೇತ್ರ ಶಿಕ್ಷಣಾಧಿಕಾರಿಗೆ ಪುಸ್ತಕ ನೀಡಿ ಸನ್ಮಾನ.
ಸಿಂದಗಿ ಸ.25

ಸಿಂದಗಿ ತಾಲೂಕಿನ ನೂತನ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಅಧಿಕಾರ ವಹಿಸಿಕೊಂಡಿರುವ ಎಂ.ಬಿ.ಯಡ್ರಾಮಿ ಅವರಿಗೆ ವ್ಯಂಗ ಚಿತ್ರಕಾರ, ಗೋಲಗೇರಿ ಸಮೂಹ ಸಂಪನ್ಮೂಲ ಅಧಿಕಾರಿಗಳಾದ ಶರಣು. ಚಟ್ಟಿ ಗುರುಗಳು ರಚಿಸಿದ ತುಂಟ ಮಕ್ಕಳು ಪುಸ್ತಕ ನೀಡಿ ಸ್ನೇಹಿತರ ಬಳಗ ದಿಂದ ಆತ್ಮೀಯವಾಗಿ ಗೌರವಿಸಿ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಮಡಿವಾಳ. ನಾಯ್ಕೋಡಿ ಸಾಸಾಬಾಳ ಗ್ರಾಮದ ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಕುತುಬುದ್ದೀನ್. ಕೋರಬು. ಕಲ್ಪತರು ಶಿಕ್ಷಣ ಸಂಸ್ಥೆಯ ಮುಖ್ಯ ಗುರುಗಳಾದ ಮಹಾಂತೇಶ. ಗೊಂದಳಿ, ಸಂಜೀವ ಕುಮಾರ. ಯಂಕಂಚಿ ಲಕ್ಷ್ಮಣ ಕಲಾಲ ಇದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಭೀಮಪ್ಪ ಹಚ್ಯಾಳ ದೇವರ ಹಿಪ್ಪರಗಿ,