ಧಾರವಾಡ ವಿಭಾಗ ಮಟ್ಟದ ದಸರಾ ಕ್ರೀಡಾಕೂಟಕ್ಕೆ ಸಾಯಿ ಸಂಜಿತಾ ಆಯ್ಕೆ.
ಹುನಗುಂದ ಸ .25

ಪಟ್ಟಣದ ವಿಜಯ ಮಹಾಂತೇಶ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ೧೦ ನೇ. ತರಗತಿಯ ವಿದ್ಯಾರ್ಥಿನಿ ಸಾಯಿ ಸಂಜೀತಾ ವಿದ್ಯಾಸಾಗರ ಓಬಳಪ್ಪನವರ ಬಾಗಲಕೋಟ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಗುಂಡು ಎಸೆತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.ಮಂಗಳವಾರ ಬಾಗಲಕೋಟ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಯೋಗದಲ್ಲಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಬಾಗಲಕೋಟ ಜಿಲ್ಲಾ ಮಟ್ಟದ ೨೦೨೪-೨೫ ನೇ ಸಾಲಿನ ದಸರಾ ಕ್ರೀಡಾಕೂಟದಲ್ಲಿ ಸಾಯಿ ಸಂಜೀತಾ ಓಬಳಪ್ಪನವರ ಗುಂಡು ಎಸೆತ ಸ್ಪರ್ಧೆಯಲ್ಲಿ ಭಾಗಿಯಾಗಿ ಪ್ರಥಮ ಸ್ಥಾನ ಪಡೆಯುವ ಮೂಲಕ ಸಪ್ಟಂಬರ್ ೨೮ ರಂದು ಧಾರವಾಡದಲ್ಲಿ ನಡೆಯುವ ವಿಭಾಗ ಮಟ್ಟದ ದಸರಾ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.ಧಾರವಾಡ ವಿಭಾಗ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿನಿ ಸಾಯಿ ಸಂಜೀತಾ ಓಬಳಪ್ಪನವರಿಗೆ ಸಂಘದ ಗೌರವ ಕಾರ್ಯದರ್ಶಿ ಮತ್ತು ನಿರ್ದೇಶಕ ಮಂಡಳಿ, ಶಾಲೆಯ ಮುಖ್ಯ ಗುರುಗಳು, ದೈಹಿಕ ನಿರ್ದೇಶಕರು, ಪಾಲಕರು ಅಭಿನಂದನೆಯನ್ನು ಸಲ್ಲಿಸಿದ್ದಾರೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ.ಹುನಗುಂದ