ನರೇಗಾ ಯೋಜನೆ ಸಮರ್ಪಕ ಅನುಷ್ಠಾನಕ್ಕೆ – ಕಾರ್ಮಿಕರಿಂದ ಬೃಹತ್ ಪ್ರತಿಭಟನೆ.
ಹುನಗುಂದ ಸ.26

ಕೆಲಸ ಕೊಡಿ ಕೂಲಿ ಕೊಡಿ ಕೊಡದಿದ್ದರೆ ಕುರ್ಚಿ ಬಿಡಿ ಎಂದು ಗ್ರಾಮೀಣ ಕೂಲಿ ಕಾರ್ಮಿಕರು ಘೋಷಣೆಯ ಕೂಗುತ್ತಾ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಹುನಗುಂದ ಮತ್ತು ಇಳಕಲ್ಲ ತಾಲ್ಲೂಕ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ (ಗ್ರಾಕೂಸ್) ವತಿಯಿಂದ ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿ ಗುರುವಾರ ಬೃಹತ್ ಪ್ರತಿಭಟನೆ ನಡೆಸಿದರು.ಗ್ರಾಮೀಣ ಪ್ರದೇಶದ ಜನರು ವಲಸೆ ಹೋಗ ಬಾರದೆಂದು ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯನ್ನು ಜಾರಿಗೆ ತಂದರೇ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ದಿಂದ ನರೇಗಾ ಕೂಲಿ ಕಾರ್ಮಿಕರಿಗೆ ಸರಿಯಾಗಿ ಕೆಲಸ ಸಿಗುತ್ತಿಲ್ಲ ಎಂದು ಅಧಿಕಾರಿಗಳ ವಿರುದ್ಧ ಕಾರ್ಮಿಕರು ಆಕ್ರೋಶವನ್ನು ವ್ಯಕ್ತಪಡಿಸಿದರು.

ಗ್ರಾಕೂಸ್ ಮುಖಂಡ ಮಹಾಂತೇಶ ಹೊಸಮನಿ ಮಾತನಾಡಿ, ಕಳೆದ ನಾಲ್ಕೈದು ತಿಂಗಳಾದರೂ ಕರಡಿ ಮತ್ತು ಗುಡೂರು ಗ್ರಾಮದ ಕಾರ್ಮಿಕರಿಗೆ ಕೆಲಸ ಕೊಟ್ಟಿಲ್ಲ ಜೊತೆಗೆ ಬೇರೆ ಪಂಚಾಯಿತಿಯಲ್ಲಿ ಕಾರ್ಮಿಕರಿಗೆ ಅವಶ್ಯಕತೆ ಇದ್ದಾಗ ಕೆಲಸ ಕೊಡುತ್ತಿಲ್ಲ. ಜಾಬ್ ಕಾರ್ಡ್, ಆಧಾರ್ ಶಿಫ್ಟ, ಜಾಬ್ ಕಾರ್ಡ್ ಡಿವೈಡ್ ಮತ್ತು ಅದರ ರಿಮೋವ್ ಮಾಡುತ್ತಿಲ್ಲ. ರಿಜೆಕ್ಟ ಪೇಮೆಂಟ್ ಮತ್ತು ಜೀರೋ ಎನ್.ಎಂ.ಆರ್ ದಿಂದ ಕೂಲಿ ಸಮಸ್ಯೆ ಉಂಟಾಗಿದೆ.

ಸುಮಾರು ಎರಡು ವರ್ಷವಾದರೂ ಹಿರೇ ಶಿಂಗನಗುತ್ತಿ, ಕೆಲೂರ, ಬೂದಿಹಾಳ ಎಸ್.ಕೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವೈದ್ಯಕೀಯ ವೆಚ್ಚ ಸಿಗುತ್ತಿಲ್ಲ. ಹುನಗುಂದ ಮತ್ತು ಇಳಕಲ್ ತಾಲ್ಲೂಕಿನ ಒಟ್ಟು ೨೪ ಗ್ರಾಮ ಪಂಚಾಯತಿಗಳಲ್ಲಿ ನರೇಗಾ ಯೋಜನೆ ಅಸಮರ್ಪಕವಾಗಿ ಅನುಷ್ಠಾನ ಆಗುತ್ತಿದ್ದು. ಇದನ್ನು ಸರಿ ಪಡಿಸಬೇಕು ಜೊತೆಗೆ ನಮ್ಮ ಬೇಡಿಕೆಗಳನ್ನು ಮೇ ತಿಂಗಳಿಂದ ಸಂಬಂಧಪಟ್ಟ ಪಂಚಾಯಿತಿಯ ಪಿಡಿಒ ಎ.ಡಿ, ಇ.ಒ, ಡಿ.ಎಸ್, ಸಿ.ಇ.ಒ ಅವರ ಗಮನಕ್ಕೆ ತಂದರು ನಮ್ಮ ಸಮಸ್ಯೆ ಬಗೆಹರಿದಿರುವುದಿಲ್ಲ. ಹೀಗಾಗಿ ನಮ್ಮ ಬೇಡಿಕೆ ಈಡೇರುವವರಿಗೂ ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ ಎಂದರು. ನಾವು ಪ್ರತಿಭಟನೆಯನ್ನು ಹಮ್ಮಿಕೊಳ್ಳುತೇವೆ ಎನ್ನುವ ಉದ್ದೇಶದಿಂದ ಅಧಿಕಾರಿಗಳು ಅಡಿಷನಲ್ ಕ್ರಿಯಾ ಯೋಜನೆಗೆ ಬುಧವಾರ ಅಫ್ರುಲ್ ನೀಡಿ ಕಾರ್ಮಿಕರ ಮುಂದೆ ಮೊಸಳೆ ಕಣ್ಣೀರನ್ನು ಒರೆಸುವ ಕೆಲಸ ಮಾಡುತ್ತಿದ್ದಾರೆ ಅಧಿಕಾರಿಗಳಿಗೆ ಹಿಡಿಶಾಪ ಹಾಕಿದರು.

ಇದರ ಮಧ್ಯದಲ್ಲಿ ತಾ.ಪಂ ಇ.ಓ ಮುರಳಿಧರ ದೇಶಪಾಂಡೆ ಕೆಲವೊಂದು ತಾಂತ್ರಿಕ ದೋಷಗಳಿಂದ ತಮಗೆ ಕೆಲಸ ಕೊಡುವುದರಲ್ಲಿ ತಡವಾಗಿದೆ. ಹೆಚ್ಚುವರಿ ಕ್ರಿಯಾಯೋಜನೆ ಈಗಾಗಲೇ ಅನುಮತಿ ಸಿಕ್ಕಿದ್ದು ಅ.೧ ರೊಳಗೆ ತಮಗೆಲ್ಲ ಕೆಲಸ ನೀಡಲಾಗುವುದೆಂದು ತಿಳಿಸುವುದಾಗಿ ಕಾರ್ಮಿಕರು ಇದಕ್ಕೆ ಒಪ್ಪಿಕೊಳ್ಳದೆ ಪ್ರತಿಭಟನಾ ಸ್ಥಳದಲ್ಲಿ ನಮಗೆ ಎಲ್ಲಾ ಪಂಚಾಯಿತಿಗಳ ಕೆಲಸದ ಎನ್.ಎಂ.ಆರ್ ನೀಡಬೇಕು ಅಂದಾಗ ಮಾತ್ರ ನಾವು ಪ್ರತಿಭಟನೆಯಿಂದ ಹಿಂದೆ ಸರಿಯುತ್ತೆವೆ. ಇಲ್ಲದಿದ್ದರೇ ಅನಿರ್ದಿಷ್ಟ ಅವಧಿಯವರೆಗೆ ಪ್ರತಿಭಟನೆಯನ್ನು ಮುಂದುವರಿಸುತ್ತೇವೆ ಎಂದು ಕೂಲಿ ಕಾರ್ಮಿಕರು ಪಟ್ಟು ಹಿಡಿದು ಕುಳಿತರು.ಈ ಸಂದರ್ಭದಲ್ಲಿ ಶಾರದಾ ಪರನಗೌಡ್ರ, ಸೌಮ್ಯ ವಟವಟಿ, ದೀಪಾ ತೋಟದ, ಅಮರೇಶ ನಂದವಾಡಗಿ, ದೇವಮ್ಮ ವಾಲಿಕಾರ, ಪರಶು ಮಾದರ, ಸುವರ್ಣ ತೊಗರಿ, ರೇಣುಕಾ ತುಪ್ಪದ, ಮಹಾದೇವಿ ಹಡಪದ ಇತರರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ.ಹುನಗುಂದ