ಮುಡಾ ಪ್ರಕರಣವನ್ನು ಸರ್ಕಾರ ಸಿಬಿಐ ಅಥವಾ ಇ.ಡಿ ತನಿಖೆಗೆ ಒಪ್ಪಿಸುವುದಾದರೆ, ಸಿದ್ದರಾಮಯ್ಯ ನವರು ರಾಜಿನಾಮೆ ಕೊಡುವ ಅಗತ್ಯವಿಲ್ಲ – ಎಂ. ನರೇಂದ್ರ ಜೆಡಿಎಸ್ ಅಧ್ಯಕ್ಷ.
ತರೀಕೆರೆ ಅ.01

ಗೊಂದಲ ಕ್ಕಿಡಾಗಿರುವ ಮುಡಾ ಪ್ರಕರಣವನ್ನು ನಿಷ್ಪಕ್ಷವಾಗಿ ತನಿಖೆ ಆಗಬೇಕಾದರೆ ಸರ್ಕಾರದ ಅಧೀನದಲ್ಲಿರುವ ತನಿಖೆ ಸಂಸ್ಥೆಗಳಿಂದ ಆಡಳಿತ ನಡೆಸುವವರ ಮೇಲೆ ವಿಚಾರಣೆಯ ಕ್ರಮವನ್ನು ಜರುಗಿಸುವುದು ಕಷ್ಟ ಕರವಾಗಲಿದೆ ಇದರಿಂದ ನ್ಯಾಯವಾದ ತೀರ್ಪು ಹೊರ ಬರಲು ಕಷ್ಟ ಸಾಧ್ಯ ಆದ್ದರಿಂದ ಮಾನ್ಯ ಮುಖ್ಯಮಂತ್ರಿಗಳು ರಾಜೀನಾಮೆ ನೀಡಿ ಪ್ರಕರಣವನ್ನು ಎದುರಿಸ ಬೇಕೆಂದು, ತರೀಕೆರೆ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ಎಂ ನರೇಂದ್ರ ಆಗ್ರಹಿಸಿದರು.ನಮ್ಮ ಮುಖ್ಯಮಂತ್ರಿಗಳು ಅವರ ಮೇಲೆ ಅವರಿಗೆ ನಂಬಿಕೆ ಇದ್ದರೆ. ತಮ್ಮ ಸರ್ಕಾರ ದಿಂದಲೇ ಸಿಬಿಐ ಅಥವಾ. ಇಡಿ ತನಿಖೆಗೇ ಒಪ್ಪಿಸುವುದಾದ್ರೆ ತಾವುಗಳು ಮುಖ್ಯಮಂತ್ರಿಯ ಸ್ಥಾನದಲ್ಲಿ ಮುಂದುವರೆಯುವುದು ಸೂಕ್ತವಾಗಿರುತ್ತದೆ ಆರೋಪ ಮುಕ್ತ ಸಿದ್ಧರಾಮಯ್ಯ ಆಗಲು ಅವಕಾಶವಿದ್ದು ತಮ್ಮ ಹಿರಿತನವನ್ನು.

ಪ್ರಜಾಪ್ರಭುತ್ವಕ್ಕೆ ಬೆಲೆ ಕೊಡುವುದರ ಮುಖಾಂತರ ಪ್ರದರ್ಶಿಸ ಬೇಕೆಂದು ಒತ್ತಾಯಿಸಿದರು. ಇಂದು ತರೀಕೆರೆಯಲ್ಲಿ ಜೆಡಿಎಸ್ ಪದಾಧಿಕಾರಿಗಳು ಲೋಕಾಯುಕ್ತ ವಿಶೇಷ ತನಿಕಾ ದಳದ ಎಡಿಜಿಪಿ ಚಂದ್ರಶೇಖರ್ ಅವರ ಅಹೇಳನಕಾರಿಯಾಗಿ ರಾಜ್ಯದ ಮಾಜಿ ಮುಖ್ಯಮಂತ್ರಿಗಳು ಹಾಗೂ ಸಂವಿಧಾನಕ ಹುದ್ದೆಯಲ್ಲಿರುವ ಭಾರತ ಸರ್ಕಾರದ ಬೃಹತ್ ಕೈಗಾರಿಕಾ ಸಚಿವರಾದ ಎಚ್ ಡಿ ಕುಮಾರಸ್ವಾಮಿ ಅವರನ್ನು ನಿಂದಿಸಿದ್ದಲ್ಲದೆ ಅಸಂವಿಧಾನಿಕ ಶಬ್ದವನ್ನು ಬಳಕೆ ಮಾಡಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿ.

ಕರ್ನಾಟಕ ರಾಜ್ಯಪಾಲರು ಉದ್ದಟತನದ ಅಧಿಕಾರಿ ಯಾದಂತಹ ಜ ಚಂದ್ರಶೇಖರ್ ಅವರು ಸರ್ಕಾರಿ ನೌಕರರಾಗಿ ರಾಜಕೀಯ ಮುಖಂಡರಂತೆ ಹೇಳಿಕೆ ನೀಡುತ್ತಿರುವುದು ಅತ್ಯಂತ ಖಂಡನೆ ಈ ಭಾರತದ ಸಂವಿಧಾನಕ್ಕೆ ಅವಮಾನ ಮಾಡಿದ್ದಾರೆ ಆದ್ದರಿಂದ ಅವರ ವಿರುದ್ಧ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ರಾಜಪಾಲರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.