ಎಸ್.ಎಸ್.ಎಲ್.ಸಿ ಪರೀಕ್ಷೆ ಕೇಂದ್ರ ಮಾಡಬೇಕು ಎಂದು ಪ್ರತಿಭಟನೆ.
ಗೋಲಗೇರಿ ಅ.01

ಸಿಂದಗಿ ತಾಲೂಕಿನ ಸಮೀಪದ ಗೋಲಗೇರಿ ಪಟ್ಟಣದಲ್ಲಿ ಇಂದು ಬಹುಜನ ದಲಿತ ಸಂಘರ್ಷ ಸಮಿತಿಯಿಂದ ಪಟ್ಟಣ ಹಾಗೂ ರಸ್ತೆ ಬಂದ ಮಾಡಿ ಹೋರಾಟ ಮಾಡಿದರು, ಈ ಪಟ್ಟಣವು ಎಲ್ಲಾ ಮೂಲಭೂತ ಸೌಕರ್ಯಗಳನ್ನು ಹೊಂದಿದೆ. ಆದರೂ ಎಸ್.ಎಸ್.ಎಲ್.ಸಿ ಕೇಂದ್ರ ಮಾಡಿಲ್ಲ, ಮುಂಬರುವ ಪರೀಕ್ಷೆಯನ್ನು ನಮ್ಮ ಪಟ್ಟಣದಲ್ಲಿ ಕೇಂದ್ರ ಆಗಬೇಕು, ಶಿಕ್ಷಣ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸ ಬೇಕು ಬೇರೆ ಊರಿಗೆ ಹೋಗಿ ಪರೀಕ್ಷೆ ಬರೆಯಲು ಬಹಳ ಕಷ್ಟ ಆಗುತ್ತದೆ, ಪಟ್ಟಣದಲ್ಲಿ ಯೋಗ್ಯವಾಗಿರುವ ಶಾಲೆಯನ್ನು ಗುರುತಿಸಿ ಪರೀಕ್ಷೆ ಕೇಂದ್ರವನ್ನು ಮಂಜೂರ ಮಾಡಿಸಿ ಆದೇಶ ಮಾಡಿ ಕೊಡಬೇಕು, ಒಂದು ವೇಳೆ ವಿಳಂಬವಾದಲ್ಲಿ ಬಹುಜನ ದಲಿತ ಸಂಘರ್ಷ ಸಮಿತಿಯಿಂದ ಜಿಲ್ಲಾ ಶಾಖೆ ತಾಲ್ಲೂಕು ಶಾಖೆಯ ನೇತೃತ್ವದಲ್ಲಿ ಮುಂದಿನ ದಿನದಲ್ಲಿ ತಾಲ್ಲೂಕು ಶಿಕ್ಷಣ ಇಲಾಖೆಯ ಕಾರ್ಯಾಲಯ ಎದುರು ಉಗ್ರವಾದ ಪ್ರತಿಭಟನೆ ಮಾಡ ಬೇಕಾಗುತ್ತದೆ, ಎಂದು ಎಚ್ಚರಿಕೆ ನೀಡಿದರು, ಈ ಪ್ರತಿಭಟನೆ ನೇತೃತ್ವವನ್ನು ವಹಿಸಿದ, ಬಹುಜನ ದಲಿತ ಸಂಘರ್ಷ ಸಮಿತಿ ಜಿಲ್ಲಾ ಕಾರ್ಯಧಕ್ಷರಾದ ಶ್ರೀಶೈಲ ಜಾಲವಾದಿ ಯವರು, ಪ್ರತಿಭಟನೆಯ ಸ್ಥಳಕ್ಕೆ ಆಗಮಿಸಿದ ತಾಲ್ಲೂಕು ಕ್ಷೇತ್ರ ಶಿಕ್ಷಣ ಅಧಿಕಾರಿಗಳಾದ ಯಡ್ರಾಮಿ, ಯವರಿಗೆ ಮನವಿ ಸಲ್ಲಿಸಿದರು, ಕಾಂಗ್ರೆಸ್ ಮುಖಂಡರಾದ, ಶಿವು ಹತ್ತಿ, ಮಡು ನಾಯ್ಕಾಡಿ, ಹುಯೋಗಿ ತಳ್ಳೋಳ್ಳಿ, ಹಾಗೂ ರಾಘವೇಂದ್ರ ಗುಡಿಮನಿ ಜಯಶ್ರೀ ಬ್ಯಾಕೋಡ ಪ್ರಕಾಶ ತಳಕೇರಿ ವಿಜಯಲಕ್ಷ್ಮಿ ಪಾಟೀಲ ರಾಜಶೇಖರ ಕುದರಿ ಅರುಣಕುಮಾರ ಸಿಂಗೆ ಪರಸುರಾಮ, ಗೋಲ್ಲಾಳ ಬ್ಯಾಚಬಾಳ ನಿಂಗಣ್ಣ ಚಲವಾದಿ ಮೊದಿನ ಶಾಬಾದಿ ಸಲೀಮ ಮುಲ್ಲಾ ಹಾಗೂ ಶಾಲೆಯ ಮಕ್ಕಳು, ಪಾಲಕರು ಈ ಹೋರಾಟದಲ್ಲಿ ಭಾಗವಹಿಸಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ